ಸುಳ್ಯ ಚೆನ್ನಕೇಶವ ದೇವಸ್ಥಾನ ಬ್ರಹ್ಮಕಲಶಾಭಿಷೇಕ : ಧಾರ್ಮಿಕ ಸಭೆ ಸಮಾರೋಪ

Advt_Headding_Middle
Advt_Headding_Middle

ಬ್ರಹ್ಮಕಲಶೋತ್ಸವಗಳಿಂದ ಊರು ಸುಭೀಕ್ಷ : ಎಡನೀರು ಸಚ್ಚಿದಾನಂದ ಶ್ರೀ

 

“ಊರಿನ ದೇವಸ್ಥಾನಗಳಲ್ಲಿ ಬ್ರಹ್ಮಕಲಶೋತ್ಸವಗಳು ಪ್ರತೀ 12 ವರ್ಷಗಳಿಗೊಮ್ಮೆ ನಡೆಸುತ್ತಾ ಬರುವುದರಿಂದ ಅಲ್ಲಿಯ ಊರು ಸುಭೀಕ್ಷವಾಗುತ್ತದೆ. ಜನರ ಮನಸ್ಸು ಶುದ್ಧಗೊಳ್ಳುತ್ತದೆ” ಎಂದು ಕಾಸರಗೋಡು ಎಡನೀರು ಸಂಸ್ಥಾನದ ಸಚ್ಚಿದಾನಂದ ಭಾರತೀ ಸ್ವಾಮಿಗಳು ಹೇಳಿದರು.

ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನ ದ ಬ್ರಹ್ಮಕಲಶಾಭಿಷೇಕ ಕಾರ್ಯಕ್ರಮದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ ಅವರು ಆಶೀರ್ವಚನ ನೀಡಿದರು.

“ಶ್ರದ್ಧಾಕೇಂದ್ರಗಳು ಪುನರುತ್ಥಾನದಲ್ಲಿ ಭಕ್ತರು ಪಾಲ್ಗೊಂಡರೆ ಊರು, ಧರ್ಮ ಉದ್ಧಾರವಾಗುತ್ತದೆ. ಆದರೆ ಯುವ ಜನಾಂಗದಲ್ಲಿ ಇಂದು ಧಾರ್ಮಿಕ ಪ್ರಜ್ಞೆಯ ಕೊರತೆ ಕಾಣುತ್ತಿದ್ದು, ಹಿರಿಯರು ಮಕ್ಕಳನ್ನು ಇಂತ ಪುಣ್ಯ ಕಾರ್ಯದಲ್ಲಿ ಭಾಗವಹಿಸುವಂತೆ ಮಾಡಬೇಕು. ಶ್ರದ್ಧಾಕೇಂದ್ರಗಳಲ್ಲಿ ಧಾರ್ಮಿಕ ಶಿಕ್ಷಣ ನೀಡುವುದು ಇಂದಿನ ಅಗತ್ಯ” ಎಂದು ಹೇಳಿದರು.

ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ. ಕೆ.ವಿ.ಚಿದಾನಂದ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಲೋಕಸೇವಾ ಆಯೋಗದ ನಿಕಟಪೂರ್ವ ಅಧ್ಯಕ್ಷ ಶ್ಯಾಂ ಭಟ್, ಕರ್ನಾಟಕ ಬ್ಯಾಂಕ್ ಅಧ್ಯಕ್ಷ ಪ್ರದೀಪ್ ಕುಮಾರ್ ಪಂಜ, ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಯ ಸಂಚಾಲಕ ಸೀತಾರಾಮ ರೈ ಸವಣೂರು, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಡಾ. ರೇಣುಕಾಪ್ರಸಾದ್ ಕೆ.ವಿ. ಮುಖ್ಯ ಅತಿಥಿಗಳಾಗಿದ್ದರು.

ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಸದಸ್ಯರುಗಳಾದ ಎಂ.ಮೀನಾಕ್ಷಿ ಗೌಡ, ಲಿಂಗಪ್ಪ ಗೌಡ ಕೇರ್ಪಳ,
ಬ್ರಹ್ಮಕಲಶಾಭಿಷೇಕ ಸಮಿತಿ ಉಪಾಧ್ಯಕ್ಷ ಎಂ.ವೆಂಕಪ್ಪ ಗೌಡ, ರಾಮಚಂದ್ರ ಆಗ್ರೋ, ಬ್ರಹ್ಮಕಲಶಾಭಿಷೇಕ ವಿವಿಧ ಸಮಿತಿ ಪ್ರಮುಖರಾದ ದಾಮೋದರ ನಾರ್ಕೋಡು, ಕೆ.ಗೋಕುಲ್ ದಾಸ್, ಸುಂದರ ರಾವ್ ರೂಪಾ, ಶ್ರೀಮತಿ ಶಶಿಕಲಾ ಹರಪ್ರಸಾದ್, ಕೆ.ಟಿ. ವಿಶ್ವನಾಥ್, ಎ.ಜಿ. ಸತೀಶ್ ವೇದಿಕೆಯಲ್ಲಿ ಇದ್ದರು.

ಗಣೇಶ್ ಮ್ಯೂಸಿಕಲ್ ಪಾಲುದಾರ ಗಣೇಶ್ ಬಿ.ಎಸ್. ಪ್ರಾರ್ಥಿಸಿದರು.
ಆರ್ಥಿಕ ಸಮಿತಿ ಸಂಚಾಲಕ ಎನ್.ಎಂ.‌ಶ್ರೀಕೃಷ್ಣ ಸೋಮಯಾಗಿ ಸ್ವಾಗತಿಸಿದರು. ಅಚ್ಚುತ ಅಟ್ಲೂರು ಕಾರ್ಯಕ್ರಮ ನಿರೂಪಿಸಿದರು.

ಗೌರವ: ದೇವಸ್ಥಾನದಲ್ಲಿ 35 ವರ್ಷಗಳಿಂದ ಉಗ್ರಾಣಿಯಾಗಿ ಸಲ್ಲಿಸುತ್ತಿದ್ದ ಜನಾರ್ದನ ಗೌಡ ಬೂಡು,
35 ವರ್ಷಗಳಿಂದ ಅರ್ಚಕರಾಗಿ ಹರಿಕೃಷ್ಣ ವರಂಬಳಿತ್ತಾಯ, 25 ವರ್ಷದಿಂದ ಅಡುಗೆ ವೃತ್ತಿ ಮಾಡುತ್ತಿರುವ ಗಣಪತಿ ಭಟ್ ಕೆ.ಆರ್. ರನ್ನು ಸನ್ಮಾನಿಸಲಾಯಿತು.

ಆಮಂತ್ರಣ ಬಿಡುಗಡೆ : ಡಿ.27 ರಿಂದ ಆರಂಭವಾಗಲಿರುವ ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ಜಾತ್ರೋತ್ಸವದ ಆಮಂತ್ರಣ ವನ್ನು ಸ್ವಾಮೀಜಿಯವರು ಬಿಡುಗಡೆಗೊಳಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.