Breaking News

ಚೆಕ್ ಅಮಾನ್ಯ ಪ್ರಕರಣದ ಆರೋಪಿ ಖುಲಾಸೆ

Advt_Headding_Middle

 

ಚೆಕ್ ಅಮಾನ್ಯ ಪ್ರಕರಣದ ಆರೋಪಿಯನ್ನು ನ್ಯಾಯಾಲಯ ಖುಲಾಸೆಗೊಳಿಸಿ ತೀರ್ಪು ನೀಡಿದೆ. ಕಾಸರಗೋಡು ತಾಲೂಕು ಅಡೂರು ಗ್ರಾಮದ ಭಾರತಿ ಎಂಬುವವರು ಉಜಿರೆ ಗ್ರಾಮದ ಬೆಳ್ತಂಗಡಿ ನಿವಾಸಿ ಶೇಕ್ ರಫೀಕ್ ರವರಿಗೆ ರೂ. 7 ಲಕ್ಷ ಹಣವನ್ನು ಕೊಟ್ಟಿದ್ದು ಅದಕ್ಕೆ ಪ್ರತಿಯಾಗಿ 23/05/2015ರಲ್ಲಿ ರಫೀಕ್ ರವರು ತನ್ನ ಖಾತೆಯುಳ್ಳ ಕರ್ನಾಟಕ ಬ್ಯಾಂಕ್ ಬೆಳ್ತಂಗಡಿ ಬ್ರಾಂಚ್‌ನ ಚೆಕ್ಕನ್ನು ನೀಡಿದ್ದರು.

ನಗದೀಕರಣಕ್ಕಾಗಿ ದೂರುದಾರರು ತನ್ನ ಖಾತೆಯುಳ್ಳ ಬ್ಯಾಂಕ್ ನ ಮೂಲಕ ಸಲ್ಲಿಸಿದಾಗ ಶೇಕ್ ರಫೀಕ್ ಖಾತೆಯಲ್ಲಿ ಸಾಕಷ್ಟು ಹಣ ಇಲ್ಲ ಎಂಬ ಹಿಂಬರಹದೊಂದಿಗೆ ಭಾರತಿ ರವರಿಗೆ ಚೆಕ್ಕನ್ನು ಹಿಂತಿರುಗಿಸಲಾಗಿತ್ತು. ಸಾಲವಾಗಿ ಪಡಕೊಂಡ ಹಣವನ್ನು ಹಿಂತುರುಗಿಸುವಂತೆ ತನ್ನ ವಕೀಲರ ಮೂಲಕ ರಫೀಕ್ ಅವರಿಗೆ ನೋಟಿಸ್ ನೀಡಲಾಗಿದ್ದರೂ ಅವರು ಪಡಕೊಂಡ ಸಾಲದ ಮೊತ್ತವನ್ನು ನೀಡಿರುವುದಿಲ್ಲ ಎಂದು ಆರೋಪಿಸಿ ಶೇಕ್ ರಫೀಕ್ ವಿರುದ್ಧ ಸುಳ್ಯ ನ್ಯಾಯಾಲಯದಲ್ಲಿ ಖಾಸಗಿ ದೂರನ್ನು ಭಾರತಿಯವರು ನೀಡಿದ್ದರು.
ಈ ವಿಚಾರಣೆಯನ್ನು ಕೈಗೆತ್ತಿಕೊಂಡ ಸುಳ್ಯದ ಹಿರಿಯ ಸಿವಿಲ್ ನ್ಯಾಯಾಧೀಶ ಸೋಮಶೇಖರ್ ಎ. ಯವರು ದೂರುದಾರರು ತನ್ನ ದೂರಿನಲ್ಲಿ ಹೇಳಿದಂತೆ ರೂ ೭ ಲಕ್ಷವನ್ನು ರಫೀಕ್ ರವರು ದೂರುದಾರರಿಂದ ಪಡಕೊಂಡಿದ್ದನ್ನು ಸಾಬೀತುಪಡಿಸಲು ವಿಫಲರಾಗಿದ್ದಾರೆ ಎಂಬ ಕಾರಣವನ್ನು ನೀಡಿ ಶೇಕ್ ರಫೀಕ್ ರನ್ನು ಡಿ.22 ರಂದು ದೋಷಮುಕ್ತಗೊಳಿಸಿ ಬಿಡುಗಡೆ ಮಾಡಿ ತೀರ್ಪಿತ್ತಿರುತ್ತಾರೆ. ಆರೋಪಿಯ ಪರವಾಗಿ ನ್ಯಾಯವಾದಿಗಳಾದ ಯಂ. ವೆಂಕಪ್ಪ ಗೌಡ,ಚಂಪಾ ವಿ. ಗೌಡ, ರಾಜೇಶ್ ಬಿ.ಜಿ. ಹಾಗೂ ಮನೋಜ್ ಕೆ. ಎ. ರವರು ವಾದಿಸಿರುತ್ತಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.