ಬಡ್ಡಡ್ಕದ ಅಯ್ಯಪ್ಪ ಭಜನಾ ಮಂದಿರದಲ್ಲಿ 35 ನೇ ವರ್ಷದ ವಿಜೃಂಭಣೆಯ ಅಯ್ಯಪ್ಪ ದೀಪೋತ್ಸವ

Advt_Headding_Middle
Advt_Headding_Middle

 

ಆಲೆಟ್ಟಿ ಗ್ರಾಮದ ಬಡ್ಡಡ್ಕ- ಕಲ್ಲಪಳ್ಳಿ ಶ್ರೀ ಅಯ್ಯಪ್ಪ ಸೇವಾ ಸಮಿತಿಯ ಆಶ್ರಯದಲ್ಲಿ ವರ್ಷಂಪ್ರತಿ ಜರುಗುವ ಅಯ್ಯಪ್ಪ ದೀಪೋತ್ಸವವು ಡಿ.24 ರಂದು ಬಡ್ಡಡ್ಕ ಅಯ್ಯಪ್ಪ ಭಜನಾ ಮಂದಿರದ ವಠಾರದಲ್ಲಿ ವಿಜೃಂಭಣೆಯಿಂದ ನಡೆಯಿತು.

ಬೆಳಗ್ಗೆ ಗಣಪತಿ ಹವನವಾಗಿ ಬಳಿಕ ಆಶ್ಲೇಷ ಬಲಿ ಪೂಜೆ ನಡೆದು ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ಸಂಜೆ ಪಿಂಡಿಬನ ಶ್ರೀ ಮಹಾವಿಷ್ಣು ದೈವಸ್ಥಾನದಿಂದ ಮಕ್ಕಳ ಹೂ ದೀಪದೊಂದಿಗೆ ಅಯ್ಯಪ್ಪ ವೃತಧಾರಿಗಳಾಗಿ ತುಳುಪಾಟ್ ಹಾಗೂ ಚೆಂಡೆ ವಾದನದೊಂದಿಗೆ ಮೆರವಣಿಗೆಯು ಮಂದಿರದ ತನಕ ಸಾಗಿ ಬಂದಿತು.


ನಂತರ ರಾತ್ರಿ ಅಯ್ಯಪ್ಪ ವೃತಧಾರಿಗಳಿಂದ ಅಗ್ನಿಸ್ಪರ್ಶವಾಗಿ ಸಾರ್ವಜನಿಕ ಅನ್ನ ಸಂತರ್ಪಣೆಯಾಯಿತು. ರಾತ್ರಿ ಗಂಟೆ 12 ಕ್ಕೆ ಅಯ್ಯಪ್ಪ ಸ್ವಾಮಿಗೆ ಮಹಾ ಪೂಜೆಯು ನೆರವೇರಿತು. ಪ್ರಾತ:ಕಾಲ ಅಯ್ಯಪ್ಪ ವೃತಧಾರಿಗಳಿಂದ ಅಗ್ನಿ ಸೇವೆಯು ನಡೆಯಿತು. ಬಳಿಕ ಆಗಮಿಸಿದ ಎಲ್ಲಾ ಭಕ್ತಾದಿಗಳಿಗೆ ಪ್ರಸಾದ ವಿತರಣೆಯಾಯಿತು.

ಧಾರ್ಮಿಕ ಸಭೆ:
ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ಅಧ್ಯಕ್ಷ ಹರೀಶ್ ಕೆ.ಜೆ.ಯವರು ವಹಿಸಿದ್ದರು. ಸುಳ್ಯದ ಸುದ್ದಿ ಚಾನೆಲ್ ಮುಖ್ಯಸ್ಥ ದುರ್ಗಾಕುಮಾರ್ ನಾಯರ್ ಕೆರೆ ಯವರು ಉಪನ್ಯಾಸ ನೀಡಿದರು. ಮುಖ್ಯ ಅತಿಥಿಗಳಾಗಿ ಅಯ್ಯಪ್ಪ ಭಜನಾ ಮಂದಿರದ ಜೀ.ಸ.ಅಧ್ಯಕ್ಷ ಬಾಲಚಂದ್ರ ಪಿ.ಕೆ, ಸಮಿತಿಯ ಗೌರವಾಧ್ಯಕ್ಷ ಡಾ. ಜಯದೀಪ್ ಎನ್.ಎ, ಪಂಚಾಯತ್ ಸದಸ್ಯ ಸತ್ಯಕುಮಾರ್ ಆಡಿಂಜ, ರಾ.ಅ.ಹಿ.ಪ್ರಾ. ಶಾಲೆಯ ಮುಖ್ಯ ಶಿಕ್ಷಕ ರಾಧಾಕೃಷ್ಣ ಕೊಯಿಂಗಾಜೆ ಯವರು ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ ಸ್ಚಾಗತಿಸಿದರು. ಅ.ಸೇ.ಸಮಿತಿ ಖಜಾಂಜಿ ಗಿರಿಯಪ್ಪ ನಾಯ್ಕ್ ವಂದಿಸಿದರು. ಪಂ.ಸದಸ್ಯ ಶಿವಾನಂದ ರಂಗತ್ತಮಲೆ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮ ದ ಬಳಿಕ ಬೆಂಕಿನಾಥೇಶ್ವರ ಯಕ್ಷಗಾನ ಮಂಡಳಿ ಕಳವಾರು ಮಂಗಳೂರು ಇವರಿಂದ ಮಹಿಮೆದ ಮಂತ್ರ ದೇವತೆ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.