Breaking News

ಹರಿಹರ ಪಲ್ಲತ್ತಡ್ಕ: ಸಂಗಮ ಕ್ಷೇತ್ರದಲ್ಲಿ ಗಣಹೋಮ, ಸತ್ಯನಾರಾಯಣ ಪೂಜೆ ಹಾಗೂ ಅಯ್ಯಪ್ಪ ದೇವರ ಬಾಲಾಲಯ ಪ್ರತಿಷ್ಠೆ

Advt_Headding_Middle

 

ಹರಿಹರ ಪಲ್ಲತ್ತಡ್ಕದ ಶ್ರೀ ಸಂಗಮ ಕ್ಷೇತ್ರದಲ್ಲಿ ಡಿ.24 ರಂದು ಬೆಳಿಗ್ಗೆ ಗಣಹೋಮ, ಸತ್ಯನಾರಾಯಣ ಪೂಜೆ ಹಾಗೂ ಅಯ್ಯಪ್ಪ ದೇವರ ಬಾಲಾಲಯ ಪ್ರತಿಷ್ಠೆ ನಡೆಯಿತು.

ಎರಡು ವರ್ಷಗಳ ಹಿಂದೆ ಬಾಲಕೃಷ್ಣ ನಾಯರ್ ರವರ ಮುಖಾಂತರ ನಡೆದ ಪ್ರಶ್ನೆಯಲ್ಲಿ ಸಂಗಮ ಕ್ಷೇತ್ರದಲ್ಲಿಅಯ್ಯಪ್ಪ ಮಂದಿರವನ್ನು ಹೊಸದಾಗಿ ನಿರ್ಮಾಣ ಮಾಡಬೇಕು ಎಂದು ಕಂಡುಬಂದಿದ್ದು, ಕೊರೊನಾದ ಕಾರಣದಿಂದ ಕೆಲಸ ಕಾರ್ಯಗಳು ನಡೆದಿರಲಿಲ್ಲ.

ಇದೀಗ ಅಯ್ಯಪ್ಪ ಮಂದಿರ ನಿರ್ಮಾಣದ ಕೆಲಸ ಕಾರ್ಯಗಳನ್ನು ಪ್ರಾರಂಭಿಸಲಾಗಿದ್ದು ಈ ನಿಟ್ಟಿನಲ್ಲಿ ಬಾಲಾಲಯ ಪ್ರತಿಷ್ಠೆ ನಡೆಯಿತು.

ಗೋಪಾಲ ಗುರುಸ್ವಾಮಿ ಹಾಗೂ ಮೋಹನ ಗುರುಸ್ವಾಮಿ ಬಾಲಾಲಯ ಪ್ರತಿಷ್ಠೆ ಮಾಡಿದರು.
ಸಂಜೆ ಶ್ರೀರಾಮ ಭಜನಾ ತಂಡ ಚಿಕ್ಮುಳಿ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಭಕ್ತಾದಿಗಳು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.