ಪಂಜ:ಜೇಸಿ ಸಪ್ತಾಹ-2021 ಸಮಾರೋಪ ಸಮಾರಂಭ

Advt_Headding_Middle
Advt_Headding_Middle

ಚೇತನ್ ತಂಟೆಪ್ಪಾಡಿ ಯವರಿಗೆ ‘ಕಮಲ ಪತ್ರ ಪುರಸ್ಕಾರ’

ಜೇಸಿಐ ಪಂಜ ಪಂಚಶ್ರೀ ಇದರ ಜೇಸಿ ಸಪ್ತಾಹ -2021 ಸಮಾರೋಪ ಸಮಾರಂಭ
ಡಿ.24ರಂದು ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಳದ ಸಭಾಭವನದಲ್ಲಿ ನಡೆಯಿತು. ಕಮಲ ಪತ್ರ ಪುರಸ್ಕರಿಸಿ ಜೇಸಿಐ ವಲಯಾಧ್ಯಕ್ಷೆ ಸೌಜನ್ಯ ಹೆಗ್ಡೆ ಮಾತನಾಡಿ ಜೇಸಿಐ ಪಂಜ ಪಂಚಶ್ರೀ ಮುಂದಿನ ವರ್ಷ 25ನೇ ವರ್ಷವನ್ನು ಆಚರಿಸಿರುವ ಸಂಸ್ಥೆ. ಘಟಕದಲ್ಲಿ ಎಲ್ಲರೂ ಒಂದಾಗಿ ಮುನ್ನಡೆಸಿದ ಅತ್ಯಂತ ಶಿಸ್ತುಬದ್ಧ ,ಕ್ರಿಯಾಶೀಲ ಸಂಸ್ಥೆ.” ಎಂದು ಹೇಳಿದರು.


ಜೇಸಿಐ ಪಂಜ ಪಂಚಶ್ರೀ ಪೂರ್ವಾಧ್ಯಕ್ಷ ಚೇತನ್ ತಂಟೆಪ್ಪಾಡಿ ಯವರಿಗೆ ಕಮಲ ಪತ್ರ ಪುರಸ್ಕಾರ ನಡೆಯಿತು.ಮುಖ್ಯ ಅತಿಥಿಯಾಗಿ ಪಂಬೆತ್ತಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಾಧವ ಗೌಡ ಜಾಕೆ ಮಾತನಾಡಿ “ಜೇಸಿ ವ್ಯಕ್ತಿತ್ವ ವಿಕಾಸನ ಗೊಳಿಸುವ ಸಂಸ್ಥೆ. ಈ ಮೂಲಕ ಒಳ್ಳೆಯ ಸಮಾಜವನ್ನು ಸ್ವಚ್ಛ ಜನರನ್ನು ನಿರ್ಮಿಸಿದೆ. ಜೇಸಿಐ ಪಂಜ ಪಂಚಶ್ರೀ ಯು ಸಾಮಾಜಿಕ ಕಾಳಜಿಯೊಂದಿಗೆ ನಿರಂತರವಾಗಿ ಕ್ರಿಯಾಶೀಲ ಘಟಕವಾಗಿ ಬೆಳೆದು ಬಂದಿದೆ.” ಎಂದು ಹೇಳಿದರು.‌

ಘಟಕದ ಅಧ್ಯಕ್ಷ ಗಣೇಶ್ ಪ್ರಸಾದ್ ಭೀಮಗುಳಿ ಸಭಾಧ್ಯಕ್ಷತೆ ವಹಿಸಿದ್ದರು. ಜೇಸಿಐ ಪಂಜ ಪಂಚಶ್ರೀ ಸ್ಥಾಪಕಾಧ್ಯಕ್ಷ ದೇವಿಪ್ರಸಾದ್ ಜಾಕೆ,ನಿಕಟಪೂರ್ವಾಧ್ಯಕ್ಷ ನಾಗಮಣಿ ಕೆದಿಲ, ಸಪ್ತಾಹ ನಿರ್ದೇಶಕ ಶಿವಪ್ರಸಾದ್ ಹಾಲೆಮಜಲು, ಕಾರ್ಯದರ್ಶಿ ಲೋಕೇಶ್ ಆಕ್ರಿಕಟ್ಟೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಘಟಕದ ವತಿಯಿಂದ ವಲಯಾಧ್ಯಕ್ಷೆ ಸೌಜನ್ಯ ಹೆಗ್ಡೆ ಯವರನ್ನು ಸನ್ಮಾನಿಸಲಾಯಿತು.ಈ ವೇಳೆ ಘಟಕದ ಪೂರ್ವಾಧ್ಯಕ್ಷರು ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಪರಿಸರದ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಪಂಚಶ್ರೀ ವಿದ್ಯಾನಿಧಿ ವಿತರಣೆ ನಡೆಯಿತು.

ಪಂಚಶ್ರೀ ವಿದ್ಯಾ ನಿಧಿ ಸಮರ್ಪಣೆ: ನಾಲ್ಕೂರು ಗ್ರಾಮದ ಚಾರ್ಮತ ಯೋಗಿತಾ ಸಿ ಆರ್, ಕೂತ್ಕುಂಜ ಗ್ರಾಮದ ಕುಳ್ಳಾಜೆ ದೀಕ್ಷಾ ಪಿ.ಕೆ,ಐವತ್ತೊಕ್ಲು ಗ್ರಾಮದ ನಾಯರ್ ಕೆರೆ ವಿನೋದ್ ಕೆ. ರವರಿಗೆ ವಿತರಿಸಲಾಯಿತು.

ಜೇಸಿಐ ಪಂಜ ಪಂಚಶ್ರೀ, ಕೂತ್ಕುಂಜ ಶಿವಾಜಿ ಯುವಕ ಮಂಡಲ, ಕೂತ್ಕುಂಜ ಶಿಲ್ಪಾ ಯುವತಿ ಮಂಡಲ ಇದರ ವತಿಯಿಂದ ಜರುಗಿದ ಕೆಸರುಗದ್ದೆ ಕ್ರೀಡಾಕೂಟದ ದಶಮಾನೋತ್ಸವದ ದತ್ತಿನಿಧಿಯನ್ನು ಕೀರ್ತನ್, ಶರಣ್ಯ,ಮೊಹಮ್ಮದ್ ಆದಿಲ್ ರವರಿಗೆ ನೀಡಲಾಯಿತು.


ಕಾರ್ಯಕ್ರಮದಲ್ಲಿ ಗಣೇಶ್ ಪ್ರಸಾದ್ ಭೀಮಗುಳಿ ಸ್ವಾಗತಿಸಿದರು. ಜಯರಾಮ ಕಲ್ಲಾಜೆ ವೇದಿಕೆಗೆ ಆಹ್ವಾನಿಸಿದರು. ಸುಬ್ರಹ್ಮಣ್ಯ ಕಕ್ಯಾನ ಜೇಸಿ ವಾಣಿ ನುಡಿದರು.ಶಿವಪ್ರಸಾದ್ ಹಾಲೆಮಜಲು ಪ್ರಾಸ್ತಾವಿಕ ಗೈದರು. ಕೌಶಿಕ್ ಕುಳ, ಅಶ್ವತ್ ಬಾಬ್ಲುಬೆಟ್ಟು , ಪ್ರಕಾಶ್ ಅಳ್ಪೆ ಅತಿಥಿಗಳ ಪರಿಚಾಯಿಸಿದರು.

ತೀರ್ಥಾನಂದ ಕೊಡೆಂಕಿರಿ ಪಂಚಶ್ರೀ ವಿದ್ಯಾನಿಧಿ ವಿತರಣಾ ಕಾರ್ಯಕ್ರಮ ನಿರ್ವಹಿಸಿದರು. ಡ್ರಾಯಿಂಗ್ ಸ್ಪರ್ಧಾ ವಿಜೇತರ ಪಟ್ಟಿಯನ್ನು ಸತೀಶ್ ಪಂಜ ವಾಚಿಸಿದರು. ಲೋಕೇಶ್ ಆಕ್ರಕಟ್ಟೆ ವಂದಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕರಾದ ಕು.ಸುಮಾ ಕೋಟೆ, ಬಾಲಕೃಷ್ಣ ನೆಟ್ಟಾರು, ಶಶಿಧರ ಮಾವಿನಕಟ್ಟೆ ಹಾಗೂ ರಾಜೇಶ್ ಕಂಬಳ, ಪ್ರಸನ್ನ ವೈ ಟಿ ರವರಿಂದ ಸಂಗೀತ ರಸಮಂಜರಿ, ಲಯನ್ ಕಿಶೋರ್ ಡಿ ಶೆಟ್ಟಿ ಲಕುಮಿ ತಂಡದ. ಕುಸಲ್ದ ಕಲಾವಿದರು ಅಭಿನಯಿಸಿದ”ಲೇಲೆಪಾಡಿ’ತುಳು ಹಾಸ್ಯ ನಾಟಕ ಪ್ರದರ್ಶನ ಗೊಂಡಿತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.