ಡಾ.ಕುರುಂಜಿಯವರ ಅರಿವಿನ ಮೌಲ್ಯ ಅನನ್ಯವಾದುದು : ಡಾ.ದೇರ್ಲ

Advt_Headding_Middle
Advt_Headding_Middle

 

ಸಾಮಾನ್ಯ ರೈತನ ಮಗನೊಬ್ಬ ಅಡಿಕೆ ತೋಟದಲ್ಲಿ ಕುಳಿತು ತನ್ನೂರಿನ ಸಾಮಾನ್ಯ ಜನರು ಕೂಡಾ ಮೆಡಿಕಲ್ ನಂತಹ ಶಿಕ್ಷಣ ಪಡೆಯಬೇಕೆಂಬ ನಿಟ್ಟಿನಲ್ಲಿ ಯೋಚಿಸುವ ಡಾ.ಕುರುಂಜಿಯವರ ಅರಿವಿನ ಮೌಲ್ಯ ಅನನ್ಯವಾದುದು ಎಂದು ಸಾಹಿತಿ ಡಾ.ನರೇಂದ್ರ ರೈ ದೇರ್ಲ ಹೇಳಿದರು.

ಇಂದು ಕೆ.ವಿ.ಜಿ. ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ವತಿಯಿಂದ ನಡೆದ ಕೆ.ವಿ.ಜಿ. ಸುಳ್ಯ ಹಬ್ಬ ದಶಮಾನೋತ್ಸವ ಕಾರ್ಯಕ್ರಮದ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ‘ಸುಳ್ಯದ ಶಕ್ತಿಯಾಗಿ ಕೆ.ವಿ.ಜಿ.’ ಎಂಬ ವಿಷಯದಲ್ಲಿ ಅವರು‌ ಮಾತನಾಡಿದರು.

ತಾನು ಉನ್ನತ ಶಿಕ್ಷಣ ಪಡೆಯದಿದ್ದರೂ, ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಸಾಧನೆ ಮಾಡಿದ ಕುರುಂಜಿಯವರು ಜನಮಾನಸದಲ್ಲಿ ಶಾಶ್ವತವಾಗಿ ಉಳಿದಿರುವುದು ನಿಜವಾದ ಸುಳ್ಯದ ಶಕ್ತಿ ಎಂದು ಅವರು ಬಣ್ಣಿಸಿದರು.

ರಾಷ್ಟ್ರ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಕೆ.ಆರ್. ಗಂಗಾಧರ್ ಅಧ್ಯಕ್ಷತೆ ವಹಿಸಿದ್ದರು. ಕೆ.ವಿ.ಜಿ. ಅಮರಜ್ಯೋತಿ ಪ.ಪೂ. ವಿದ್ಯಾಲಯದ ಪ್ರಾಂಶುಪಾಲೆ ಶ್ರೀಮತಿ ಯಶೋದ ರಾಮಚಂದ್ರ ‘ಶೈಕ್ಷಣಿಕ ಹಾಗೂ ಸಾಮಾಜಿಕ ಬದಲಾವಣೆಯ ಹರಿಕಾರರಾಗಿ ಕೆ.ವಿ.ಜಿ.’ ಎಂಬ ವಿಷಯದಲ್ಲಿ ಮಾತನಾಡಿದರು.

ಕೆ.ವಿ.ಜಿ. ಸುಳ್ಯ ಹಬ್ಬ ಸಮಾಜ ಸೇವಾ ಸಮಿತಿ ಅಧ್ಯಕ್ಷ ಪಿ.ಸಿ. ಜಯರಾಮ, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ.ಕೆ.ವಿ. ಚಿದಾನಂದ ವೇದಿಕೆಯಲ್ಲಿ ಇದ್ದರು.

ಚಂದ್ರಶೇಖರ್ ಪೇರಾಲು ಸ್ವಾಗತಿಸಿದರು. ಡಾ. ರೇವತಿ ನಂದನ್ ವಂದಿಸಿದರು. ಶ್ರೀಮತಿ ಲತಾಶ್ರೀ ಸುಪ್ರೀತ್ ಕಾರ್ಯಕ್ರಮ ನಿರೂಪಿಸಿದರು.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.