ಡಿ.30:ಪೈಲಾರಿನಲ್ಲಿ ಯಕ್ಷೋತ್ಸವ 2021- ಸುಜನಾ ಸುಳ್ಯರಿಗೆ ಸನ್ಮಾನ

Advt_Headding_Middle
Advt_Headding_Middle

 

ಅಮರಮುಡ್ನೂರು ಗ್ರಾಮದ ಫ್ರೆಂಡ್ಸ್ ಕ್ಲಬ್ ಪೈಲಾರು ಇದರ ಆಶ್ರಯದಲ್ಲಿ ಹಾಗೂ ಶೌರ್ಯ ಯುವತಿ ಮಂಡಲ ಪೈಲಾರು ಇದರ ಸಹಯೋಗದೊಂದಿಗೆ ಡಿ. 30ರಂದು ಪೈಲಾರು ಯಕ್ಷೋತ್ಸವ 2021 ಯಕ್ಷಗಾನ ಪ್ರದರ್ಶನ ಮತ್ತು ಗೌರವ ಸನ್ಮಾನ ಸಮಾರಂಭವು ಪದ್ಯಾಣ ಗಣಪತಿ ಭಟ್ ವೇದಿಕೆ ಪೈಲಾರಿನಲ್ಲಿ ನಡೆಯಲಿರುವುದು.

ಸಂಜೆ ಗಂಟೆ 6:30 ರಿಂದ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ ಗಜೇಂದ್ರ ಮೋಕ್ಷ -ಭೃಗು ಲಾಂಛನ, ಶ್ರೀನಿವಾಸ ಕಲ್ಯಾಣ ಎಂಬ ಕಥಾ ಪ್ರಸಂಗವೂ ಪ್ರದರ್ಶನಗೊಳ್ಳಲಿರುವುದು. ರಾತ್ರಿ ಗಂಟೆ 8.30 ರಿಂದ ಸನ್ಮಾನ ಮಾರಂಭ ಜರಗಲಿರುವುದು. ಸಮಾರಂಭದ ಅಧ್ಯಕ್ಷತೆಯನ್ನು ನಿವೃತ್ತ ಮುಖ್ಯ ಶಿಕ್ಷಕ ಚಂದ್ರಶೇಖರ ಪೇರಾಲು ವಹಿಸಲಿದ್ದಾರೆ. ಹಿರಿಯ ಯಕ್ಷಗಾನ ಕಲಾವಿದರಾದ ಎಸ್ .ಎನ್ .ಜಯರಾಮ (ಸುಜನಾ ಸುಳ್ಯ) ಇವರಿಗೆ ಯಕ್ಷೋತ್ಸವ 2021ರ ಗೌರವ ಸನ್ಮಾನ ಪುರಸ್ಕಾರವನ್ನು ನೀಡಲಾಗುವುದು. ಅಭಿನಂದನಾ ಭಾಷಣಕಾರರಾಗಿ ಹಿರಿಯ ಯಕ್ಷಗಾನ ಕಲಾವಿದ ಸುಳ್ಯ ಪ್ರತಿಭಾ ವಿದ್ಯಾಲಯದ ಪ್ರಾಚಾರ್ಯರಾದ ವೆಂಕಟರಾಮ ಭಟ್ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪೈಲಾರು ಸರ್ಕಾರಿ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಯೋಗೀಶ್ ಮಾಡಬಾಕಿಲು ಉಪಸ್ಥಿತರಿರುತ್ತಾರೆ.
ರಾತ್ರಿ ಸಮಯದಲ್ಲಿ ನಡೆಯುವ ಚೌಕಿ ಪೂಜೆ ಯಲ್ಲಿ ದೇವರಿಗೆ ಹರಕೆಯ ಹಣ್ಣುಕಾಯಿ ಸಮರ್ಪಿಸಲು ಭಕ್ತಾದಿಗಳಿಗೆ ಅವಕಾಶವಿರುವುದು. ಆಗಮಿಸಿದ ಎಲ್ಲರಿಗೂ ರಾತ್ರಿ ಭೋಜನದ ವ್ಯವಸ್ಥೆ ಇರುವುದಾಗಿ ಸಂಘಟಕರು ತಿಳಿಸಿರುತ್ತಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.