ತಂತ್ರಾಂಶ ಸಮಸ್ಯೆಯಿಂದ ಅಡಮಾನ ಸಾಲಕ್ಕೆ ತೊಂದರೆ

Advt_Headding_Middle
Advt_Headding_Middle

 

ಸಮಸ್ಯೆ ಸರಿಪಡಿಸಲು ಕೃಷ್ಣಪ್ರಸಾದ್ ಮಡ್ತಿಲ ನೀಡಿದ್ದ ಮನವಿಗೆ ಸಹಕಾರ ಸಚಿವರ ಸ್ಪಂದನೆ

ತಂತ್ರಾಂಶಗಳ ಸಮಸ್ಯೆಗಳಿಂದಾಗಿ ಅಡಮಾನ ಸಾಲಕ್ಕೆ ಆಗುತ್ತಿರುವ ತೊಂದರೆ ನಿವಾರಿಸಬೇಕೆಂದು ಸಹಕಾರ ಭಾರತಿ ಜಿಲ್ಲಾಧ್ಯಕ್ಷ ಕೃಷ್ಣಪ್ರಸಾದ್ ಮಡ್ತಿಲರು ಸಹಕಾರ ಸಚಿವರಿಗೆ ನೀಡಿರುವ ಮನವಿಗೆ ಸ್ಪಂದನೆ ದೊರೆತಿದ್ದು, ಮನವಿ ಪರಿಶೀಲಿಸಿ ಅಗತ್ಯ ಕ್ರಮಕೈಗೊಳ್ಳುವಂತೆ ಸಹಕಾರ ಸಚಿವ ಎಸ್.ಟಿ ಸೋಮಶೇಖರ ರವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಡಿ.3 ರಂದು ಕೃಷ್ಣಪ್ರಸಾದ್ ಮಡ್ತಿಲರು ಸಹಕಾರ ಸಚಿವರಿಗೆ ನೀಡಿದ ಮನವಿಯಲ್ಲಿ ನ.01.2021ರಿಂದ ಏಕಾ ಏಕಿ ಸಬ್ ರಿಜಿಸ್ಟ್ರಾರ್ ರ ಕಚೇರಿಯಲ್ಲಿ ಸಾಲ ನೊಂದಣಿ ನಿಲ್ಲಿಸಲು ಸೂಚನೆ ನೀಡಿದ್ದು, ಇತ್ತ ಸಹಕಾರ ಸಂಘಗಳ ಸಿಬ್ಬಂದಿ ತರಬೇತಿ, ಡಿಜಿಟಲ್ ಸಹಿ,ಮ್ಯಾಪಿಂಗ್ ಇತ್ಯಾದಿ ಕಾರ್ಯಗಳು ಆಗದೆ ಇರುವುದರಿಂದ ರೈತರಿಗೆ ಸಂಘದಲ್ಲಿ ಸಾಲದ ಅಡವು ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ರೈತರ ಹಿತದೃಷ್ಟಿಯಿಂದ ಮುಂದಿನ 2022ರ ಮಾರ್ಚ್ ಅಂತ್ಯದವರೆಗೆ ಈ ಹಿಂದಿನಂತೆ ಸಬ್ ರಿಜಿಸ್ಟ್ರಾರ್ ರ ಕಚೇರಿಯಲ್ಲಿ ಸಾಲಗಳ ನೋಂದಣಿ ಮಾಡಲು ಅವಕಾಶ ನೀಡಿ ಡಿಸೆಂಬರ್ ನಿಂದ ಮಾರ್ಚ್ ಅಂತ್ಯದ ಒಳಗೆ ತಂತ್ರಾಂಶದ ಸಮಸ್ಯೆಗಳಿಗೆ ಪರಿಹಾರ ಮತ್ತು ಸಿಬ್ಬಂದಿಗಳಿಗೆ ಅಗತ್ಯ ತರಬೇತಿ ಕಾರ್ಯ ಮುಗಿಸಿ 2022ನೇ ಏಪ್ರಿಲ್ ತಿಂಗಳಿಂದ ತಂತ್ರಾಂಶದಲ್ಲಿ ಸಾಲ ನೋಂದಣಿ ಜಾರಿಗೊಳಿಸಲು ಮನವಿ ಮಾಡಿದ್ದರು. ಈ ಮನವಿಗೆ ಸ್ಪಂದನೆ ನೀಡಿರುವ ಸಹಕಾರ ಸಚಿವ ಎಸ್. ಟಿ ಸೋಮಶೇಖರರವರು ಮನವಿಯಲ್ಲಿ ಕೋರಿರುವ ಅಂಶಗಳನ್ನು ನಿಯಮಾನುಸಾರ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.