ಗುರುಸ್ವಾಮಿ ಸತೀಶ್ ಭಂಡಾರಿಯವರ 24 ನೇ ವರ್ಷದ ಶಬರಿಮಲೆ ಪಾದಯಾತ್ರೆ

Advt_Headding_Middle
Advt_Headding_Middle

ಸುಳ್ಯದ ಜಟ್ಟಿಪಳ್ಳ ಸತೀಶ್ ಭಂಡಾರಿ ಗುರುಸ್ವಾಮಿಯವರ ನೇತೃತ್ವದಲ್ಲಿ ಶಬರಿಮಲೆ ಯಾತ್ರೆಯನ್ನು ಸುಮಾರು 12 ಮಂದಿ ಸ್ವಾಮಿಗಳ ಜೊತೆ ಪಾದಯಾತ್ರೆಯ ಮೂಲಕ ಆರಂಭಿಸಿರುತ್ತಾರೆ.

ಸತತ 24 ವರ್ಷಗಳಿಂದ ಪಾದಯಾತ್ರೆ ಮೂಲಕ ಶಬರಿಮಲೆ ಯಾತ್ರೆ ಕೈಗೊಳ್ಳುತ್ತಿರುವ ಇವರು ಈ ವರ್ಷ 12 ಮಂದಿ ಅಯ್ಯಪ್ಪ ವೃತಧಾರಿಗಳ ಜತೆಗೂಡಿ ಡಿ. 24 ರಂದು ಎಲಿಮಲೆಯಲ್ಲಿ ಇರುಮುಡಿ ಕಟ್ಟು ಕಟ್ಟುವ ಕಾರ್ಯಕ್ರಮದೊಂದಿಗೆ ಪಾದಯಾತ್ರೆಯನ್ನು ಆರಂಭಿಸಿರುತ್ತಾರೆ.

ನಿನ್ನೆ ರಾತ್ರಿ ಸುಳ್ಯದ ಕಲ್ಕುಡ ದೈವಸ್ಥಾನದಲ್ಲಿ ತಂಗಿ ಇಂದು ಬೆಳಗ್ಗೆ ಮತ್ತೆ ಪಾದಯಾತ್ರೆಯನ್ನು ಕೋಲ್ಚಾರು ಮಾರ್ಗವಾಗಿ ಬಂದಡ್ಕದ ಮೂಲಕ ಮುಂದುವರಿಸಿರುತ್ತಾರೆ. ಸತೀಶ್ ಭಂಡಾರಿ ಗುರುಸ್ವಾಮಿಯವರು 1996 ರಿಂದ ಹಲವಾರು ಅಯ್ಯಪ್ಪ ವೃತಧಾರಿಗಳನ್ನು ಸನ್ನಿದಾನಕ್ಕೆ ಕರೆದುಕೊಂಡು ಹೋಗುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಾತಃಕಾಲದಲ್ಲಿ ಎದ್ದು ಸ್ವಾಮಿಗೆ ಪೂಜೆ ಸಲ್ಲಿಸಿ ಮತ್ತೆ ಯಾತ್ರೆಯನ್ನು ಮುಂದುವರಿಸಿ ರಾತ್ರಿಯಾದಂತೆ ಸನಿಹದಲ್ಲಿರುವ ದೇವಸ್ಥಾನಗಳಲ್ಲಿ ಅಥವಾ ಮಂದಿರಗಳಲ್ಲಿ ಉಳಿದು ಕೊಂಡು ಯಾತ್ರೆ ಯನ್ನು ಮುಂದುವರಿಸಿಕೊಂಡು ಹೋಗುತ್ತೇವೆ. ಜನವರಿ 11 ನೇ ತಾರೀಕಿಗೆ ಶಬರಿಮಲೆ ಕ್ಷೇತ್ರಕ್ಕೆ ತಲುಪುತ್ತವೆ ಎಂದು ಮಾಧ್ಯಮ ಜತೆ ತಿಳಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.