ಕಾಯರ್ತೋಡಿ : ಕುಡಿಯುವ ನೀರಿನ ಸಭೆ- ಶುದ್ಧ ನೀರಿಗಾಗಿ ಆಗ್ರಹ

Advt_Headding_Middle
Advt_Headding_Middle

ಸುಳ್ಯ 16ನೇ ವಾರ್ಡಿನ ಕುಡಿಯುವ ನೀರಿನ ಸಭೆಯು ಕಾಯರ್ತೋಡಿ ಶ್ರೀ ನಿಧಿ ಮಹಿಳಾ ಮಂಡಲದ ಸಭಾಂಗಣದಲ್ಲಿ ಶ್ರೀಮತಿ ಜಯ ಕೃಷ್ಣ ಅವರ ನೇತೃತ್ವದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಯರ್ತೋಡಿ ಸೂರ್ತಿಲ ಶ್ರೀ ರಕ್ತೇಶ್ವರಿ ಸೇವಾ ಸಮಿತಿಯ ಅಧ್ಯಕ್ಷರಾದ ಶಶಿಧರ ಶೆಟ್ಟಿಯವರು ವಹಿಸಿದ್ದರು.

ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಶಶಿಧರ ಶೆಟ್ಟಿ ಪಡ್ಪುರವರು ಮಾತನಾಡಿ, ಸುದ್ದಿಯ ಹಲವಾರು ಹೋರಾಟಗಳಲ್ಲಿ ಶುದ್ಧ ಕುಡಿಯುವ ನೀರಿನ ಹೋರಾಟ ಅತ್ಯಂತ ಪ್ರಾಮುಖ್ಯವಾದ ವಿಷಯ. ಇದಕ್ಕೆ ನಮ್ಮ ವಾರ್ಡಿನ ಎಲ್ಲರ ಬೆಂಬಲವಿದೆ. ಅಲ್ಲದೇ ಸರ್ಕಾರಿ ಕಚೇರಿಯಲ್ಲಿ ನಡೆಯುವ ಭ್ರಷ್ಟಾಚಾರದ ವಿಷಯವನ್ನು ಕೈಗೆತ್ತಿಕೊಂಡದ್ದು ಶ್ಲಾಘನೀಯ ಎಂದರು.

ಸಭೆಯಲ್ಲಿ ಶ್ರೀನಿಧಿ ಮಹಿಳಾ ಮಂಡಲದ ಅಧ್ಯಕ್ಷೆ ಹೇಮಾ ವೇಣುಗೋಪಾಲ್, ಕೋಶಾಧಿಕಾರಿ ಶ್ರುತಿ ಮಂಜುನಾಥ್, ವಿಠಲ ಬಾಣೂರ್, ರಘುನಾಥ ರೈ ಕಾಯರ್ತೋಡಿ , ತೀರ್ಥರಾಮ ಕೆ. ಜಿ., ಯಶೋಧ ಪ್ರಭು, ನಮನ್ ಪ್ರಭು, ಅರ್ಪಿತಾ, ಚಿತ್ರಾವತಿ ಕೆ., ಸರಸ್ವತಿ ವಿಶ್ವನಾಥ್, ಚಂದ್ರಾವತಿ ರಘುನಾಥ ರೈ, ನಾರಾಯಣಿ ಉಪಸ್ಥಿತರಿದ್ದರು. ಜಯ ಕೃಷ್ಣ ಕಾಯರ್ತೋಡಿಯವರು ಮನವಿಯನ್ನು ಓದಿ ತಿಳಿಸಿದರು. ಎಲ್ಲರು ತಮ್ಮ ಅಭಿಪ್ರಾಯವನ್ನು ತಿಳಿಸಿದರು. ಸುದ್ದಿ ಪ್ರತಿನಿಧಿ ಕೃಷ್ಣ ಬೆಟ್ಟ ಅವರು ಎಲ್ಲರನ್ನು ಸ್ವಾಗತಿಸಿ, ಪ್ರಾಸ್ತವಿಕ ಮಾತನಾಡಿ, ವಂದಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.