ಪಂಜ: ಕಬಡ್ಡಿ ಪಂದ್ಯಾಟ ಪಂಚಶ್ರೀ ಟ್ರೋಫಿ 2021

Advt_Headding_Middle
Advt_Headding_Middle

 

ಪದಗ್ರಹಣ ಸಮಾರಂಭ

ನೆಹರು ಯುವಕೇಂದ್ರ ಮಂಗಳೂರು, ಯುವಜನ ಸಂಯುಕ್ತ ಮಂಡಳಿ ಸುಳ್ಯ ,ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ ಇದರ ಆಶ್ರಯದಲ್ಲಿ ಜೀವರಕ್ಷಕ ‘ಪಂಚಶ್ರೀ’ ಅಂಬ್ಯುಲೆನ್ಸ್ ನ ಮೊದಲ ವರ್ಷದ ಪಾದಾರ್ಪಣೆ ಪ್ರಯುಕ್ತ ಸೂರ್ಯ ಹೊನಲು ಬೆಳಕಿನ 65 ಕೆಜಿ ವಿಭಾಗದ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟ ಪಂಚಶ್ರೀ ಟ್ರೋಫಿ-2021 ಮತ್ತು ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಡಿ.25 ರಂದು ಪಂಜದಲ್ಲಿ ನಡೆಯಿತು. ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ದೇರಾಜೆ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ “ಪಂಚಶ್ರೀ ಪಂಜ ಸ್ಪೋರ್ಟ್ಸ್ ವಿಶೇಷವಾಗಿ ಸಾಮಾಜಿಕ ಸೇವೆ ನೀಡುತ್ತಿರುವ ಸಂಸ್ಥೆ.ಗ್ರಾಮ ಪಂಚಾಯತ್ ಎಲ್ಲಾ ಕಾರ್ಯಕ್ರಮಗಳಲ್ಲೂ ಸಂಪೂರ್ಣವಾಗಿ ತೊಡಗಿಸಿಕೊಂಡು ಸಹಕರಿಸುತ್ತಿದ್ದಾರೆ.” ಎಂದು ಹೇಳಿದರು.ಸಭಾಧ್ಯಕ್ಷತೆಯನ್ನು ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷ ಚಂದ್ರಶೇಖರ ಕರಿಮಜಲು ವಹಿಸಿದ್ದರು.
“ಕೆಲವು ವರ್ಷಗಳ ಹಿಂದೆ ಪಂಜದಲ್ಲಿ ರಸ್ತೆಗಳು ಸುಸಜ್ಜಿತವಾಗಿರಲಿಲ್ಲ. ಅನೇಕ ರಸ್ತೆ ಅಪಘಾತಗಳು ನಡೆಯುತಿತ್ತು. ನಾವೆಲ್ಲ ಮೂಕ ವಿಸ್ಮಿತರಾಗಿ ನೋಡುತ್ತಿದ್ದೆವು.ಕೂಡಲೇ ಚಿಕಿತ್ಸೆ ಸಿಗುತ್ತಿದ್ದರೆ ಪ್ರಾಣ ಉಳಿಸಬಹುದಿತ್ತು ಎಂದು ಮನಸಲ್ಲಿ ಕಾಡುತ್ತಿತ್ತು. ಇದಕ್ಕೆ ಪರಿಹಾರ ಪಂಚಶ್ರೀ ಸ್ಪೋರ್ಟ್ಸ್ ಕ್ಲಬ್ ನವರು ಜೀವರಕ್ಷಕ ಆಂಬುಲೆನ್ಸ್ ನೀಡುವ ಮೂಲಕ ನೀಡಿದ್ದಾರೆ.” ಎಂದು
ಜೇಸಿಐ ಪೂರ್ವ ವಲಯಾಧಿಕಾರಿ ಶಶಿಧರ ಪಳಂಗಾಯ ಪ್ರಧಾನ ಭಾಷಣ ಮಾಡಿದರು.
ಸಂಜೆ ಪಂದ್ಯಾಟವನ್ನು ಉದ್ಘಾಟನೆಯನ್ನು ಪ್ರಗತಿಪರ ಕೃಷಿಕ ಶ್ರೇಯಾಂಸ್ ಕುಮಾರ್ ಶೆಟ್ಟಿಮೂಲೆ ಮಾಡಿದರು.
ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಶಿವರಾಮ ಗೌಡ ಏನೆಕಲ್ಲು ರವರಿಗೆ ಸನ್ಮಾನ ಜರುಗಿತು. ಫ್ರೆಂಡ್ಸ್ ಸರ್ಕಲ್ ಕೃಷ್ಣನಗರ ಇದರ ಗೌರವಾಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್ ಸನ್ಮಾನಿಸಿದರು. ಯುವಜನ ಸಂಯುಕ್ತ ಮಂಡಳಿ ನಿಕಟಪೂರ್ವಾಧ್ಯಕ್ಷ ದಿಲೀಪ್ ಬಾಬ್ಲುಬೆಟ್ಟು ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು. ನೂತನ ಅಧ್ಯಕ್ಷರಾದ ಪವನ್ ಪಲ್ಲತ್ತಡ್ಕ , ಕಾರ್ಯದರ್ಶಿ ಶರತ್ ಕುದ್ವ ಮತ್ತು ತಂಡದವರು ಪ್ರಮಾಣ ವಚನ ಸ್ವೀಕರಿಸಿದರು.ಮುಖ್ಯ ಅತಿಥಿಗಳಾಗಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರವೀಣ್ ಕುಮಾರ್ ಶೆಟ್ಟಿ, ವಲಯಾರಣ್ಯಾಧಿಕಾರಿ ಮಂಜುನಾಥ್ ಎನ್ ಪಂಚಶ್ರೀ ಸ್ಪೋರ್ಟ್ಸ್ ಕ್ಲಬ್ ನ ಸಾಮಾಜಿಕ ಕಾಳಜಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
.ತೊಂಡಚ್ಚನ್ ಇಂಡಸ್ಟ್ರೀಸ್ ಮಾಲಕ ಮನು ಯಂ ಹಾಗೂ ಕ್ಲಬ್ ನ ಕಾರ್ಯದರ್ಶಿ ದಾಮೋದರ ನೇರಳ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇದೇ ವೇಳೆ ಪಂಚಶ್ರೀ ಜೀವರಕ್ಷಕ ಅಂಬ್ಯುಲೆನ್ಸ್ ನಲ್ಲಿ ಚಾಲಕರಾಗಿ ವಿಶೇಷ ಸೇವೆಗೈದ ಪದ್ಮಕುಮಾರ್ ನಾಯರ್ ಕೆರೆ, ಶಶಿ (ತಾರಾನಾಥ) ನಾಗತೀರ್ಥ ಅವರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಪುರುಷೋತ್ತಮ ನಾಗತೀರ್ಥ ಪ್ರಾರ್ಥಿಸಿದರು. ದಾಮೋದರ ನೇರಳ ಸ್ವಾಗತಿಸಿ, ಪ್ರಸ್ತಾವನೆಗೈದರು. ಸೋಮಶೇಖರ ನೇರಳ ನಿರೂಪಿಸಿದರು. ನೂತನ ಕಾರ್ಯದರ್ಶಿ ಶರತ್ ಕುದ್ವ ವಂದಿಸಿದರು.
ಶ್ರದ್ಧಾಂಜಲಿ ಅರ್ಪಣೆ: ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಜ.ಬಿಪಿನ್ ರಾವತ್ ಮತ್ತು ಸೇನಾಧಿಕಾರಿಗಳ ಭಾವ ಚಿತ್ರದ ಮುಂದೆ ಹಣತೆ ಹಚ್ಚಿ ಪುಷ್ಪಾರ್ಚನೆ ಮಾಡಲಾಯಿತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.