Breaking News

ಕರ್ನಾಟಕ ನಾಯರ್ ಸರ್ವಿಸ್ ಸೊಸೈಟಿಯಿಂದ ಕೊಡುಗೆಯ ಮನೆ ಹಸ್ತಾಂತರ

Advt_Headding_Middle

 

ಎಲ್ಲ ಸಮುದಾಯದೊಂದಿಗೆ ನಾಯರ್ ಸಮುದಾಯದ ಸಹಬಾಳ್ವೆ:ರಾಮಚಂದ್ರನ್ ಪಲೇರಿ

ಕೆಎನ್‌ಎಸ್‌ಎಸ್ ಆಸರೆ ಯೋಜನೆ ಎಲ್ಲರಿಗೂ ಮಾದರಿ : ಡಾ.ಕೆ.ವಿ. ರೇಣುಕಾಪ್ರಸಾದ್

ಕರ್ನಾಟಕ ನಾಯರ್ ಸರ್ವಿಸ್ ಸೊಸೈಟಿ ವತಿಯಿಂದ ಆಸರೆಗಾಗಿ ಸಹಾಯಹಸ್ತ ಕಾರ್ಯದ ಅನ್ವಯ ನಿರ್ಮಾಣಗೊಂಡ ಕಲ್ಲುಮುಟ್ಲು ಜಯರಾಮ ನಾಯರ್ ಅವರ ನೂತನ ಮನೆಯ ಹಸ್ತಾಂತರ ಸಮಾರಂಭ ಇಂದು ಕಲ್ಲುಮುಟ್ಲುವಿನಲ್ಲಿ ನಡೆಯಿತು.
ಕರ್ನಾಟಕ ನಾಯರ್ ಸರ್ವಿಸ್ ಸೊಸೈಟಿಯ ಸುಳ್ಯ ಕರಯೋಗಂ ವತಿಯಿಂದ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಳ್ಯ ಕರಯೋಗಂ ಅಧ್ಯಕ್ಷ ಭಾಸ್ಕರನ್ ನಾಯರ್ ಎಂ.ಆರ್. ವಹಿಸಿದ್ದರು.
ಕೆಎನ್‌ಎಸ್‌ಎಸ್ ಬೆಂಗಳೂರು ಇದರ ಚೆಯರ್‌ಮೆನ್ ರಾಮಚಂದ್ರ ಪಲೇರಿ ನೂತನ ಮನೆಯನ್ನು ಉದ್ಘಾಟಿಸಿ ಹಸ್ತಾಂತರಿಸಿದರು. ನಾಯರ್ ಸಮುದಾಯವು ಎಲ್ಲ ಸಮುದಾಯದೊಂದಿಗೆ ಅನ್ಯೋನ್ಯತೆಯಿಂದ ಬದುಕುತ್ತಾ ಸಹಬಾಳ್ವೆಯಿಂದ ಬದುಕುತ್ತಿದೆ. ಸಮಾಜದ ಕಟ್ಟಕಡೆಯ ಸದಸ್ಯನಿಗೂ ತೊಂದರೆಯಾದಾಗ ನೆರವು ನೀಡುವ ಯೋಜನೆ ನಡೆಸುತ್ತಿದೆ. ಎಲ್ಲರ ಸಹಕಾರದಿಂದ ಇದು ಸಾಧ್ಯವಾಗಿದೆ ಎಂದರು.
ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್‌ನ ಪ್ರಧಾನ ಕಾರ್ಯದರ್ಶಿ ಡಾ.ಕೆ.ವಿ.ರೇಣುಕಾಪ್ರಸಾದ್, ನಾಮಫಲಕವನ್ನು ಅನಾವರಣಗೊಳಿಸಿದರು. ನಾಯರ್ ಸಮುದಾಯದವರ ಆತ್ಮೀಯತೆ ಎಲ್ಲರಿಗೂ ಮಾದರಿ. ಕಷ್ಟಕಾಲದಲ್ಲಿ ಸಮುದಾಯದ ಸದಸ್ಯರಿಗೆ ನೆರವಾಗುವ ಮನೋವೈಶಾಲ್ಯತೆಯನ್ನು ಸಮುದಾಯ ಸಂಘಟನೆ ಬೆಳೆಸಿಕೊಂಡಿದೆ ಎಂದು ಹೇಳಿದರು.
ಕೆವಿಜಿ ಸುಳ್ಯ ಹಬ್ಬ ಸಮಿತಿಯ ಅಧ್ಯಕ್ಷ ಪಿ.ಸಿ.ಜಯರಾಮ್ ಮಾತನಾಡಿ, ಈ ಯೋಜನೆ ಮತ್ತು ಕಾರ್ಯಕ್ರಮ ರಾಷ್ಟ್ರೀಯ ಭಾವೈಕ್ಯತೆಗೊಂದು ಮಾದರಿ ಎಂದು ಅಭಿಪ್ರಾಯಪಟ್ಟರು.
ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಮಾತನಾಡಿ, ಸಣ್ಣ ಸಮುದಾಯವೊಂದು ಸಂಘಟಿತರಾಗಿ ಮಾದರಿ ಕಾರ್ಯಕ್ರಮ ಮಾಡಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.

ಬೆಂಗಳೂರು ಕೆಎನ್‌ಎಸ್‌ಎಸ್ ಉಪಾಧ್ಯಕ್ಷ ನಾರಾಯಣ ನಂಬಿಯಾರ್, ಮಂಗಳೂರು ಕೆಎನ್‌ಎಸ್‌ಎಸ್ ಅಧ್ಯಕ್ಷ ಮುರಳಿ ಹೊಸಮನೆ, ಮಾಜಿ ಅಧ್ಯಕ್ಷ ಪಿ.ಕೆ.ಎಸ್.ಪಿಳ್ಳೈ, ಸುಳ್ಯ ನಗರ ಪಂಚಾಯತ್ ಸದಸ್ಯೆ ಸುಶೀಲಾ ಜಿನ್ನಪ್ಪ ಮುಖ್ಯ ಅತಿಥಿಗಳಾಗಿದ್ದರು.
ಕೆಎನ್‌ಎಸ್‌ಎಸ್ ಸುಳ್ಯ ಕರಯೋಗಂ ಕಾರ್ಯದರ್ಶಿ ಬಾಲಕೃಷ್ಣನ್ ನಾಯರ್ ಸ್ವಾಗತಿಸಿ, ಪ್ರಸ್ತಾವನೆಗೈದರು. ಕೋಶಾಧಿಕಾರಿ ಪ್ರಭಾಕರನ್ ನಾಯರ್ ಸ್ವಾಗತ್ ವಂದಿಸಿದರು. ದುರ್ಗಾಕುಮಾರ್ ನಾಯರ್‌ಕೆರೆ ಕಾರ್ಯಕ್ರಮ ನಿರೂಪಿಸಿದರು. ಶ್ರೀಲಯ ಪ್ರಾರ್ಥಿಸಿದರು. ಮಂಜು ಪ್ರಭಾಕರ್ ಮತ್ತು ಬಳಗದವರು ಆಚಾರ್ಯ ವಂದನ ಹಾಡಿದರು.
ನೂತನ ಮನೆಯ ನಿರ್ಮಾಣ ಕಾರ್ಯದ ಅಧ್ಯಕ್ಷರಾಗಿ ದುಡಿದ ಭಾಸ್ಕರನ್ ನಾಯರ್ ಅವರನ್ನು ಸುಳ್ಯ ಕರಯೋಗಂ ವತಿಯಿಂದ ಸನ್ಮಾನಿಸಲಾಯಿತು. ಕೆವಿಜಿ ಸುಳ್ಯ ಹಬ್ಬ ಸಮಿತಿಯ ವತಿಯಿಂದ ನೀಡಲಾಗುವ ೧ ಲಕ್ಷ ಅನುದಾನದ ಪೈಕಿ ೫೦೦೦೦ವನ್ನು ಈ ಹಿಂದೆ ನೀಡಲಾಗಿದ್ದು, ೫೦೦೦೦ದ ಚೆಕ್‌ನ್ನು ಕಾರ್ಯಕ್ರಮದಲ್ಲಿ ಪಿ.ಸಿ.ಜಯರಾಮರು ಹಸ್ತಾಂತರಿಸಿದರು. ಡಾ. ಕೆ..ವಿ. ರೇಣುಕಾಪ್ರಸಾದ್‌ರವರು ಜಯರಾಮ ನಾಯರ್‌ರಿಗೆ ವೈಯಕ್ತಿಕ ಕೊಡುಗೆ ಹಸ್ತಾಂತರಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.