ಗೋಪಾಲಕೃಷ್ಣ ಪಿ.ಎಸ್.ರವರಿಗೆ ಎಂಡಿಆರ್ಟಿ ಅರ್ಹತೆ

Advt_Headding_Middle
Advt_Headding_Middle

 

ಜೋನ್ ಬೋಸ್ಟರ್ ನಲ್ಲಿ ಮೀಟಿಂಗ್ ನಲ್ಲಿ ಭಾಗವಹಿಸುವ ಅವಕಾಶ

ಬೆಳ್ಳಾರೆಯ ಗೋಪಾಲಕೃಷ್ಣ ಪಿ.ಎಸ್. ರವರು ಕಳೆದ 24 ವರ್ಷಗಳಿಂದ ಭಾರತೀಯ ಜೀವ ವಿಮಾ ನಿಗಮದಲ್ಲಿ ಪ್ರತಿನಿಧಿಯಾಗಿ ನೇಮಕಗೊಂಡು ಸುಮಾರು 14 ಗ್ರಾಮಗಳನ್ನು ವಿಮಾ ಗ್ರಾಮವಾಗಿಸಿ,ವಿಮಾಗ್ರಾಮ ಸ್ಪೆಶಲಿಸ್ಟ್ ಎಂಬ ಬಿರುದು ಪಡೆದುಕೊಂಡಿದ್ದಾರೆ.
ಉಡುಪಿ ವಿಭಾಗದಲ್ಲಿ ಪ್ರಪ್ರಥಮ ವಿಮಾಶಾಲೆಯನ್ನು 2003 ರಲ್ಲಿ ಘೋಷಿಸಲು ಕಾರಣೀಭೂತರಾಗಿ 4 ವಿಮಾಶಾಲೆಗಳನ್ನು ಘೋಷಿಸಲು ಕೆಲಸ ನಿರ್ವಹಿಸಿರುತ್ತಾರೆ.
ಹಲವು ಸಾವಿರ ಪಾಲಿಸಿದಾರರನ್ನು ಹೊಂದಿಕೊಂಡು ಕಳೆದ 10 ವರುಷಗಳಿಂದ ಮುಖ್ಯ ಜೀವ ವಿಮಾ ಸಲಹೆಗಾರರಾಗಿ ಹಲವಾರು ಏಜಂಟರನ್ನು ನೇಮಕಗೊಳಿಸಿದ್ದಾರೆ.11 ವರ್ಷಗಳಿಂದ ಚಯರ್ ಮೆನ್ಸ್ ಕ್ಲಬ್ ಸದಸ್ಯರಾಗಿದ್ದಾರೆ. 2020 ರ ನವಂಬರ ತಿಂಗಳಲ್ಲಿ ನಿಗಮವು ಹೊಸದಾಗಿ ಆರಂಭಿಸಿದ ANANDA MODULA ನಲ್ಲಿ ಉಡುಪಿ ವಿಭಾಗದಲ್ಲಿ ಪ್ರಥಮ ಬಾರಿಗೆ ಪಾಲಿಸಿಯನ್ನು ನೀಡಿ ಹಲವಾರು ಪಾಲಿಸಿಗಳನ್ನು ಮಾಡಿ ಇರುತ್ತಾರೆ.ತನ್ನ ವೃತ್ತಿಯಾಗಿ ಮಾಡುತ್ತಿರುವ ವಿಮಾ ವ್ಯವಹಾರದಲ್ಲಿ ಮೇಲ್ಪಂಕ್ತಿಯಲ್ಲಿ ಇರುವ ಇವರು ಕಳೆದ 13 ವರ್ಷಗಳಿಂದ ಬೆಳ್ಳಾರೆಯ ಮೇಲಿನ ಪೇಟೆಯ ಕೆನರಾ ಬ್ಯಾಂಕಿನ ಹತ್ತಿರ ಅಧಿಕೃತ ಕಂತು ಸ್ವೀಕೃತಿ ಕೆಂದ್ರವನ್ನು ಹೊಂದಿ ಎಲ್ಲಾ ಪಾಲಿಸಿದಾರರಿಗೆ ಕಂತು ಪಾವತಿಯ ಸೌಲಭ್ಯವನ್ನು ಒದಗಿಸಿಕೊಡುತ್ತಿದ್ದು, ಈ ವರ್ಷ ಅಂದರೆ 2021 ರಲ್ಲಿ ದಿ ಪ್ರೀಮಿಯರ್ ಅಸೋಶಿಯೆಷನ್ ಆಫ್ ಫೈನಾನ್ಸಿಯಲ್ ಫ್ರೊಫೆಷನಲ್ಸ್ ,ಯು ಎಸ್ ಎ ಯವರ MDRT. 2022ರ ಅರ್ಹತೆಯನ್ನು ಪಡೆದು ಜೂನ್ 26ರಿಂದ 29ರ ತನಕ ಜೋನ್ ಬೊಸ್ಟರ್ನ್ ನಲ್ಲಿ ನಡೆಯುವ ಮಿಲಿಯನ್ ಡಾಲರ್ ರೌಂಡ್ ಟೇಬಲ್ ನ ಮೀಟಿಂಗ್ ನಲ್ಲಿ ಭಾಗವಹಿಸುವ ಅರ್ಹತೆಯನ್ನು ಪಡೆದಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.