ಸುಳ್ಯ ನ್ಯಾಯಾಲಯದ ಪ್ರಥಮ ದರ್ಜೆ ಸಹಾಯಕ ಎಚ್. ಸಿ. ರಾಜು ಮೈಸೂರಿಗೆ ವರ್ಗಾವಣೆ

Advt_Headding_Middle
Advt_Headding_Middle

 

ಸುಳ್ಯ ನ್ಯಾಯಾಧೀಶರಿಂದ ಬೀಳ್ಕೊಡುಗೆ

ಸುಳ್ಯ ಸಿವಿಲ್ ನ್ಯಾಯಾಲಯದಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕೆಲಸ ನಿರ್ವಹಿಸುತ್ತಿದ್ದ ರಾಜು ಎಚ್. ಸಿ. ರವರು ಮೈಸೂರಿನ ಐದನೇ ಜೆ ಎಂ ಎಫ್ ಸಿ ನ್ಯಾಯಾಲಯಕ್ಕೆ ವರ್ಗಾವಣೆಗೊಂಡಿರುತ್ತಾರೆ.
ಅವರು 2010 ರಲ್ಲಿ ಸುಳ್ಯದ ಸಿವಿಲ್ ಜಡ್ಜ್ ಅಂಡ್ ಜೆ.ಎಂ.ಎಫ್.ಸಿ. ನ್ಯಾಯಾಲಯಕ್ಕೆ ಕೋರಿಕೆಯ ಮೇರೆಗೆ ವರ್ಗಾವಣೆಯಾಗಿ ಆಗಮಿಸಿ 2018 ರವರೆಗೆ ಸೇವೆ ಸಲ್ಲಿಸಿ ನಂತರ ಸುಳ್ಯದ ಹಿರಿಯ ಸಿವಿಲ್ ನ್ಯಾಯಾಲಯಕ್ಕೆ ವರ್ಗಾವಣೆಯಾಗಿ 2019 ರಲ್ಲಿ‌ ಪದೋನ್ನತಿ ಹೊಂದಿ ಪ್ರಥಮ ದರ್ಜೆ ಸಹಾಯಕನಾಗಿ‌ ಸೇವೆ ಸಲ್ಲಿಸುತ್ತಿದ್ದಾರೆ. ಇದೀಗ ಅವರು ಡಿಸೆಂಬರ್ 24ರಂದು ಮೈಸೂರಿನ ಜಯನಗರದ 5 ನೇ ಜೆ.ಎಂ.ಎಫ್.ಸಿ. ನ್ಯಾಯಾಲಯಕ್ಕೆ ಕೋರಿಕೆಯ ಮೇರೆಗೆ ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದ ಆದೇಶದ ಅನ್ವಯ ವರ್ಗಾವಣೆ ಗೊಂಡಿರುತ್ತಾರೆ.
ಈ ಸಂದರ್ಭದಲ್ಲಿ ಸುಳ್ಯ ನ್ಯಾಯಾಲಯದ ಹಿರಿಯ ನ್ಯಾಯಾಧೀಶ ಸೋಮಶೇಖರ್ ಎ, ಹಾಗೂ ಕಿರಿಯ ನ್ಯಾಯಾಧೀಶ ಯಶವಂತ ಕುಮಾರ್ ರಾಜು ರವರನ್ನು ಸನ್ಮಾನಿಸಿ ಬೀಳ್ಕೊಡುಗೆಮಾಡಿದರು. ಈ ವೇಳೆ ಎ ಪಿ ಪಿ ಜನಾರ್ಧನ್, ಹಾಗೂ ಸಿಬ್ಬಂದಿ ವರ್ಗದವರು, ವಕೀಲರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.