ಮುರುಳ್ಯ : ನವೋದಯ ಗುಂಪುಗಳ ವಾರ್ಷಿಕ ಸಭೆ

Advt_Headding_Middle
Advt_Headding_Middle

 

ಸದಸ್ಯರಿಗೆ ಲಾಭಾಂಶ ವಿತರಣೆ

ನವೋದಯ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಎಣ್ಮೂರು ಮುರುಳ್ಯ 2 ಗ್ರಾಮಗಳ ನವೋದಯ ಒಕ್ಕೂಟದ ವಾರ್ಷಿಕ ಸಭೆಯು ಮುರುಳ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಂಗಣದಲ್ಲಿ ಅಧ್ಯಕ್ಷ ವಸಂತ ಹುದೇರಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಕೊರೋನಾ ಸಮಯದಲ್ಲಿ ಸಂಘದ ಸದಸ್ಯರು ಸಕ್ರಿಯವಾಗಿ ಕೆಲಸ ನಿರ್ವಹಿಸಿದ್ದರು ವಾರ್ಷಿಕವಾಗಿ 11,61,090 ರೂ. ಲಾಭಾಂಶ ವಿತರಣೆ ಯನ್ನು ಸೊಸೈಟಿ ಅಧ್ಯಕ್ಷ ವಸಂತ ಹುದೇರಿಯವರು ವಿತರಿಸಿದರು. ಎರಡೂ ಗ್ರಾಮದ ಸದಸ್ಯರು ಉಪಸ್ಥಿತರಿದ್ದರು. ಒಕ್ಕೂಟದ ಪ್ರೇರಕರಾದ ಗಂಗಾಧರ ಪೊಳೆಂಜ ಸಂಘದ ನಿಯಮಾವಳಿಗಳನ್ನು ವಿವರಿಸಿದರು.
ವೇದಿಕೆಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿ ಚಿದಾನಂದ ರೈ, ನಿರ್ದೇಶಕ ರಾಜಶೇಖರ ಉಪಸ್ಥಿತರಿದ್ದರು. ಹುದೇರಿ ದಮಯಂತಿ ಪ್ರಾರ್ಥಿಸಿದರು. ಶ್ರೀಮತಿ ಅನಿತಾ ವೇಣುಗೋಪಾಲ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.