ಕೆವಿಜಿ ಸುಳ್ಯ ಹಬ್ಬ ದಶಮಾನೋತ್ಸವ ಸಂಭ್ರಮ

Advt_Headding_Middle
Advt_Headding_Middle

 

ಸಾಧನಾ ಶ್ರೀ ಪ್ರಶಸ್ತಿ , ಯುವ ಸಾಧಕ ಪ್ರಶಸ್ತಿ ಪ್ರದಾನ

ಸಾಮಾನ್ಯ ವ್ಯಕ್ತಿಯೂ ಅಸಾಮಾನ್ಯ ಶಕ್ತಿಯಾಗಲು ಸಾಧ್ಯ ಎಂದು ತೋರಿಸಿಕೊಟ್ಟವರು ಕುರುಂಜಿ: ಪುತ್ತೂರಾಯ

ಸಾಮಾನ್ಯ ವ್ಯಕ್ತಿಯೂ ಅಸಾಮಾನ್ಯ ಶಕ್ತಿಯಾಗಲು ಸಾಧ್ಯ ಎಂದು ತನ್ನ ಬಾಳಿನ ಬೆಳಕಿನ ಮೂಲಕ ತೋರಿಸಿಕೊಟ್ಟವರು ಕುರುಂಜಿ ವೆಂಕಟ್ರಮಣ ಗೌಡರು ಎಂದು ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದ ವಿಶ್ರಾಂತ ನಿರ್ದೇಶಕ ಡಾ. ಕೆ.ಪಿ. ಪುತ್ತೂರಾಯ ಹೇಳಿದ್ದಾರೆ.

ಕೆ.ವಿ.ಜಿ. ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ವತಿಯಿಂದ ಆಧುನಿಕ ಸುಳ್ಯದ ನಿರ್ಮಾತೃ ಡಾ. ಕುರುಂಜಿ ವೆಂಕಟ್ರಮಣ ಗೌಡರ 93 ನೇ ಜಯಂತ್ಯೋತ್ಸವ ಮತ್ತು ಕೆವಿಜಿ ಸುಳ್ಯ ಹಬ್ಬದ ದಶಮಾನೋತ್ಸವ ಸಮಾರಂಭದಲ್ಲಿ ಅವರು ಉದ್ಘಾಟನೆ ನೆರವೇರಿಸಿ ಕೆ.ವಿ.ಜಿ. ಸಂಸ್ಮರಣಾ ಭಾಷಣ ಮಾಡಿದರು.

ವ್ಯಕ್ತಿ ಏನೇ ಮಾಡಿದರೂ ಸಮಾಜ ಮೆಚ್ಚದೆ ಟೀಕಿಸುತ್ತದೆ. ಆದರೆ ಕುರುಂಜಿಯಂತಹ ವ್ಯಕ್ತಿ ದೇವರು ಮೆಚ್ಚುವ ಕೆಲಸ ಮಾಡಿದವರು. ಮೌಲ್ಯಾಧಾರಿತವಾಗಿ ಬದುಕಿದವರು ಎಂದು ಡಾ. ಪುತ್ತೂರಾಯ ಹೇಳಿದರು.

ಕಾರ್ಯಕ್ರಮದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಕಮಲಾಕ್ಷಿ ವಿ.ಶೆಟ್ಟಿ ಹಾಗೂ ಪ್ರಖ್ಯಾತ ಸಾಹಿತಿ ಹಾಗೂ ಅರ್ಥಶಾಸ್ತ್ರ ಲೇಖಕರಾದ ನೆಹರೂ ಸ್ಮಾರಕ ಮಹಾವಿದ್ಯಾಲಯದ ವಿಶ್ರಾಂತ ಪ್ರಾಂಶುಪಾಲ ಪ್ರಭಾಕರ ಶಿಶಿಲರವರಿಗೆ ಕೆವಿಜಿ ಸಾಧನಾಶ್ರೀ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಯುವ ಸಾಧಕರಾದ ಡಾ. ಅಕ್ಷಯ ಕುದ್ಪಾಜೆ, ರಾಧಾಕೃಷ್ಣ ಇಟ್ಟಿಗುಂಡಿ, ಉಮೇಶ್ ಮಣಿಕ್ಕರ, ದಿಲೀಶ್ ಮತ್ತು ಲಿಖಿತಾ ಅವರಿಗೆ ಯುವ ಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಸಾಧಕರನ್ನು ಸನ್ಮಾನಿಸಿದರು.

ಸಮಿತಿಯ ಗೌರವಾಧ್ಯಕ್ಷ ಡಾ. ಕೆ.ವಿ.ಚಿದಾನಂದ ಅಧ್ಯಕ್ಷತೆ ವಹಿಸಿದ್ದರು. ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ಗೌರವ ಸಲಹೆಗಾರ ಡಾ. ಹರಪ್ರಸಾದ್ ತುದಿಯಡ್ಕ, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಪ್ರಧಾನ ಕಾರ್ಯದರ್ಶಿ ಡಾ.ಕೆ.ವಿ.ರೇಣುಕಾ ಪ್ರಸಾದ್, ಕೆವಿಜಿ ಸುಳ್ಯ ಹಬ್ಬ ಸಮಿತಿ ಅಧ್ಯಕ್ಷ ಪಿ.ಸಿ.ಜಯರಾಮ್, ಪ್ರಧಾನ ಕಾರ್ಯದರ್ಶಿ ಚಂದ್ರಾಕ್ಷಿ ಜೆ.ರೈ, ಕೋಶಾಧಿಕಾರಿ ದಿನೇಶ್ ಮಡ್ತಿಲ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ದಶಮಾನೋತ್ಸವದ ನೆನಪಿನಲ್ಲಿ ಸುಳ್ಯ ಸಾಂದೀಪ್ ವಿಶೇಷ ಶಾಲೆಯ ಮಕ್ಕಳ ಕಲಿಕಾ ಪ್ರೋತ್ಸಾಹಕ್ಕಾಗಿ ರೂ. 5೦೦೦೦ದ ಕೊಡುಗೆಯನ್ನು ಎಂ.ಬಿ.ಚಾರಿಟೇಬಲ್ ಟ್ರಸ್ಟ್‌ಗೆ ಕೊಡಲಾಯಿತು.

ಕೆವಿಜಿ ಸುಳ್ಯ ಹಬ್ಬ ಸಮಿತಿ ಅಧ್ಯಕ್ಷ ಪಿ.ಸಿ.ಜಯರಾಮ್ ಸ್ವಾಗತಿಸಿದರು. ಸ್ಥಾಪಕಾಧ್ಯಕ್ಷ ಎನ್.ಜಯಪ್ರಕಾಶ್ ರೈ ಪ್ರಸ್ತಾವನೆಗೈದರು. ಪ್ರಧಾನ ಕಾರ್ಯದರ್ಶಿ ಚಂದ್ರಾಕ್ಷಿ ಜೆ. ರೈ ವಂದಿಸಿದರು. ಉಪನ್ಯಾಸಕಿ ಬೇಬಿ ವಿದ್ಯಾ ಕಾರ್ಯಕ್ರಮ ನಿರೂಪಿಸಿದರು.
ಶ್ರೀಮತಿ ಗಿರಿಜಾ ಎನ್.ವಿ. ಆಶಯಗೀತೆ ಹಾಡಿದರು. ದೊಡ್ಡಣ್ಣ ಬರೆಮೇಲು ಅಗಲಿದ ಸಂಘದ ಸದಸ್ಯರಿಗೆ ನುಡಿನಮನ ಅರ್ಪಿಸಿದರು.
ಡಾ.ಎನ್..ಎ.ಜ್ಞಾನೇಶ್, ಕೆ.ಎಂ.ಮುಸ್ತಫಾ, ಭವಾನಿಶಂಕರ ಅಡ್ತಲೆ, ಡಾ.ಕೆ.ಟಿ.ವಿಶ್ವನಾಥ್, ಪಿ.ಎಸ್.ಗಂಗಾಧರ್, ಉಷಾ ಪೇರಾಲು, ಚಂದ್ರಮತಿ ಕೆ., ಪೂರ್ಣಿಮಾ ಮಡಪ್ಪಾಡಿ ಅತಿಥಿಗಳನ್ನು ಮತ್ತು ಸನ್ಮಾನಿತರನ್ನು ಪರಿಚಯಿಸಿದರು.
ಸಮಾರಂಭದಲ್ಲಿ ಹರೇಕಳ ಹಾಜಬ್ಬರನ್ನು ಡಾ.ಕೆ.ವಿ. ಚಿದಾನಂದರು ಸನ್ಮಾನಿಸಿದರು. ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷರು, ಗೌರವ ಸಲಹೆಗಾರರು ಮತ್ತು ಮಾಜಿ ಅಧ್ಯಕ್ಷರುಗಳಿಗೆ ಸನ್ಮಾನ ನಡೆಯಿತು. ವೃತ್ತಿಯಿಂದ ನಿವೃತ್ತರಾದ ಚಂದ್ರಶೇಖರ ಪೇರಾಲು ಹಾಗೂ ದೊಡ್ಡಣ್ಣ ಬರೆಮೇಲುರವರಿಗೆ ದಶಮಾನೋತ್ಸವದ ವಿಶೇಷ ಅಭಿನಂದನೆ ನಡೆಯಿತು. ೨೦೨೧ರಲ್ಲಿ ಕೆವಿಜಿ ಸುಳ್ಯ ಹಬ್ಬ ಸಂಘಕ್ಕೆ ಸೇರಿದವರಿಗೆ ಸದಸ್ಯತ್ವ ಪ್ರಮಾಣಪತ್ರ ವಿತರಣೆ ನಡೆಯಿತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.