Breaking News

ನಾಲ್ಕೂರು : ಮತ್ತೆ ಮತ್ತೆ ಕಡತದಲ್ಲೇ ಉಳಿಯುವ ಉಜಿರಡ್ಕ ಸೇತುವೆ ಪ್ರಸ್ತಾವನೆ

Advt_Headding_Middle

ತಾಲೂಕಿನ ನಾಲ್ಕೂರು ಗ್ರಾಮದ ಒಂದನೇ ವಾರ್ಡ್‌ನಲ್ಲಿ ಬರುವ ಜಾಲ್ಸೂರು ಸುಬ್ರಹ್ಮಣ್ಯ ಹೆದ್ದಾರಿಯಿಂದ ಸಂಪರ್ಕ ಕಲ್ಪಿಸುವ ಮರಕತ ಉಜಿರಡ್ಕ ಏನೆಕಲ್ಲು ಸಂಪರ್ಕ ರಸ್ತೆಯ ಉಜಿರಡ್ಕ ಎಂಬಲ್ಲಿ ಹೊಳೆಯೊಂದು ಹರಿಯುತ್ತಿದ್ದು, ಇಲ್ಲಿಗೆ ಸಂಪರ್ಕ ಸೇತುವೆಯನ್ನು ನಿರ್ಮಿಸಿಕೊಡಬೇಕೆಂದು ಕಳೆದ 20 ವರ್ಷಗಳಿಂದೀಚೆ ನಿರಂತರವಾಗಿ ಆ ಭಾಗದ ಜನರು ಜನಪ್ರತಿನಿಧಿಗಳು ಮತ್ತು ಸರಕಾರವನ್ನು ಒತ್ತಾಯಿಸುತ್ತಾ ಬಂದಿದ್ದಾರೆ. ಆದರೆ ಫಲಿತಾಂಶ ಮಾತ್ರ ಬಹಳ ಶೂನ್ಯ.

ಈ ಭಾಗದಲ್ಲಿ ಪರಿಶಿಷ್ಟ ಪಂಗಡದ ಜನಾಂಗದವರ ಕಾಲೋನಿ ಹಾಗೂ ಇತರರು ಸೇರಿ ಅಂಗವಿಕಲರು ಕೂಡಾ ಈ ಭಾಗದಲ್ಲಿ ವಾಸಿಸುತ್ತಿದ್ದಾರೆ. ಧಾರ್ಮಿಕ ಕ್ಷೇತ್ರದಲ್ಲೊಂದಾದ ಶ್ರೀ ಮರಕತ ದುರ್ಗಾಪರಮೇಶ್ವರಿ ದೇವಸ್ಥಾನ, ಕೊರಗಜ್ಜನ ಕಟ್ಟೆ ಇದೆ. ಈ ಭಾಗದಲ್ಲಿರುವ ರಸ್ತೆಯು ಕೂಡಾ ಕೆಲವೊಂದು ಕಡೆ ಕಾಂಕ್ರೀಟೀಕರಣ ಬಿಟ್ಟರೆ ಉಳಿದ ಕಡೆ ರಸ್ತೆ ತುಂಬೆಲ್ಲ ಗುಂಡಿಗಳಿಂದ ತುಂಬಿ ವಾಹನ ಸಂಚಾರ ಸೇರಿ ಜನರಿಗೆ ನಡೆದಾಡಲು ಕೂಡಾ ಕಷ್ಟಸಾಧ್ಯವಾಗಿದೆ. ಈ ಭಾಗದ ಜನರಿಗೆ ಇದೊಂದು ಪ್ರಮುಖ ರಸ್ತೆಯಾಗಿದ್ದು, ಮಳೆಗಾಲ ಪೇಟೆ ಪಟ್ಟಣಗಳಿಗೆ ಹೋಗಲು ಇಲ್ಲಿ ಸೇತುವೆಯಿಲ್ಲದೆ ಸುತ್ತು ಬಳಸಿ ಹೋಗಬೇಕಾಗಿದೆ.

ಕಳೆದ ಕೊರೋನಾ ಮಹಾಮಾರಿಯಂತಹ ಸಂದರ್ಭದಲ್ಲಿ ಈ ಭಾಗದ ಜನರು ಪಟ್ಟ ಕಷ್ಟ ಅಷ್ಟಿಷ್ಟಲ್ಲ ಎಂಬುದು ಜನರ ಅಳಲಾಗಿದೆ. ಚುನಾವಣಾ ಸಂದರ್ಭದಲ್ಲಿ ನೆನಪಾಗುವ ಈ ಸೇತುವೆ ಪ್ರಸ್ತಾವನೆ ನಂತರದ ದಿನಗಳಲ್ಲಿ ಮರೆತು ಬಿಡುವುದು ಈ ಜನರ ದುರ್ದೈವ ವಾಗಿದೆ. ಈ ಬಗ್ಗೆ ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಇಲಾಖಾಧಿಕಾರಿಗಳು ಈ ಬಾರಿ ಆದರೂ ಈ ಭಾಗದಲ್ಲಿ ಸೇತುವೆ ನಿರ್ಮಿಸಿಕೊಟ್ಟು ಈ ಭಾಗದ ಜನರ ಬಹಳ ವರ್ಷಗಳ ಬೇಡಿಕೆಯನ್ನು ಈಡೇರಿಸುವ ಬಗ್ಗೆ ಗಮನ ಹರಿಸಬೇಕಾಗಿದೆ.


(ಚಿತ್ರ ವರದಿ :ಡಿ.ಎಚ್)

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.