Breaking News

ಸುಳ್ಯದ ಅನ್ಸಾರಿಯದಲ್ಲಿ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರಿಗೆ ಸನ್ಮಾನ

Advt_Headding_Middle

 

ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರವರನ್ನು ಸುಳ್ಯ ತಾಲೂಕಿನ ಮುಸ್ಲಿಂ ಶಿಕ್ಷಣ ಸಂಸ್ಥೆಗಳು ಮತ್ತು ವಿವಿಧ ಸಂಘ-ಸಂಸ್ಥೆಗಳ ವತಿಯಿಂದ ಸುಳ್ಯದ ಅನ್ಸಾರಿಯಾ ಎಜ್ಯುಕೇಶನ್ ಸೆಂಟರ್‌ನಲ್ಲಿ ಸನ್ಮಾನಿಸಲಾಯಿತು.

ಅಧ್ಯಕ್ಷತೆಯನ್ನು ಜಾವಗಲ್ ದರ್ಗಾ ಟ್ರಸ್ಟಿ ಹಾಜೀ ಪಿ. ಐಸಾಕ್ ಸಾಹೇಬ್, ಪಾಜಪಳ್ಳ ವಹಿಸಿದ್ದರು. ತೆಕ್ಕಿಲ್ ಶಿಕ್ಷಣ ಸಂಸ್ಥೆಯ ಸ್ಥಾಪಕಾಧ್ಯಕ್ಷ ಟಿ.ಎಂ. ಶಹೀದ್ ಹಾಜಬ್ಬರ ಸುಳ್ಯ ಭೇಟಿಯ ಸವಿ ನೆನಪಿಗೆ ನೆಡಲ್ಪಡುವ ಸಸಿಗೆ ನೀರು ಉಣಿಸಿ ಉದ್ಘಾಟಿಸಿದರು.

ಇಂದಿನ ಮಕ್ಕಳಿಗೆ ಹಾಜಬ್ಬ ರೋಲ್ ಮೊಡೆಲ್ ಆಗಬೇಕು. ನಿಸ್ವಾರ್ಥ ಪ್ರಾಮಾಣಿಕತೆ ಮತ್ತು ಶಿಕ್ಷಣ, ಮಕ್ಕಳನ್ನು ನಿಷ್ಕಳಂಕವಾಗಿ ಪ್ರೀತಿಸಿದಾಗ ಪ್ರಶಸ್ತಿಗಳು, ಸಮಾಜದಲ್ಲಿ ಗೌರವ, ಪುರಸ್ಕಾರಗಳು ಮನೆ ಬಾಗಿಲಿಗೆ ಬರುತ್ತದೆ ಎಂಬುದಕ್ಕೆ ಹಾಜಬ್ಬರವರು ಉತ್ತಮ ಉದಾಹರಣೆ ಎಂದರು.


ದ.ಕ.ಜಿಲ್ಲಾ ವಕ್ಫ್ ನಿಕಟಪೂರ್ವ ಸದಸ್ಯ ಕೆ.ಯಂ. ಮುಸ್ತಫ ಅಭಿನಂದನಾ ಭಾಷಣ ಗೈದರು. ವಿಷಯ ಪ್ರಸ್ತಾವನೆಗೈದ ಅಭಿನಂದನಾ ಸಮಿತಿ ಸಂಚಾಲಕ ರಾಜ್ಯ ವಕ್ಫ್ ಕೌನ್ಸಿಲ್ ಮಾಜಿ ಸದಸ್ಯ ಯಸ್. ಸಂಶುದ್ದೀನ್ ಮಾತನಾಡಿ ಪ್ರೀತಿ, ವಿಶ್ವಾಸ ಮತ್ತು ಮುಗ್ಧ ಮನಸ್ಸಿನಿಂದ ಜಗತ್ತನ್ನೇ ಗೆಲ್ಲಬಹುದು ಎಂಬುದಕ್ಕೆ ಹಾಜಬ್ಬ ಸಾಕ್ಷಿ ಎಂದರು. ವೇದಿಕೆಯಲ್ಲಿ ತಾಲೂಕು ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಇಕ್ಬಾಲ್ ಎಲಿಮಲೆ, ಅನ್ಸಾರಿಯಾ ಖತೀಬರಾದ ಉಮ್ಮರ್ ಮುಸ್ಲಿಯಾರ್ ಮರ್ಧಾಳ, ಎ.ಪಿ.ಎಂ.ಸಿ. ನಿರ್ದೇಶಕರಾದ ಹಾಜಿ ಆದಂ ಕಮ್ಮಾಡಿ, ಸುನ್ನಿಮಹಲ್ ಫೆಡರೇಶನ್ ಅಧ್ಯಕ್ಷ ಇಬ್ರಾಹಿಂ ಹಾಜಿಕತ್ತಾರ್, ಜಂಇಯ್ಯತ್ತುಲ್ ಫಲ್ಹಾ ಅಧ್ಯಕ್ಷ ಹಸೈನಾರ್ ಹಾಜಿ ಗೋರಡ್ಕ, ಪ್ರೊಫೆಸರ್ ಯುಸುಫ್ ಹುಬ್ಬಳ್ಳಿ ತಾಲೂಕು ಮದರಸ ಮೆನೇಜ್‌ಮೆಂಟ್ ಅಧ್ಯಕ್ಷ ತಾಜ್ ಮಹಮ್ಮದ್ ಕಲ್ಲುಗುಂಡಿ, ಯಸ್. ವೈ.ಎಸ್. ಸುಳ್ಯ ಸೆಂಟರ್ ಕಾರ್‍ಯದರ್ಶಿ ಹಮೀದ್ ಸುಣ್ಣಮೂಲೆ, ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ. ಹಮೀದ್, ಮೊಡೆಲ್ ಎಜ್ಯುಕೇಶನ್ ಟ್ರಸ್ಟ್ ಸ್ಥಾಪಕ ಅಧ್ಯಕ್ಷ ಹಮೀದ್ ಜನತ, ನಗರ ಪಂಚಾಯತ್ ಸದಸ್ಯ ಕೆ.ಎಸ್. ಉಮ್ಮರ್, ಎಸ್.ಎಂ.ಎ. ಪದಾಧಿಕಾರಿಗಳಾದ ಇಸ್ಮಾಯಿಲ್ ಪಡ್ಪಿನಂಗಡಿ, ಮೂಸ ಪೈಂಬಚ್ಚಾಲು, ಅನ್ಸಾರ್ ಅಧ್ಯಕ್ಷ ಶುಕೂರ್ ಹಾಜಿ, ಅನ್ಸಾರಿಯಾ ಅಧ್ಯಕ್ಷ ಮಜೀದ್ ಜನತ, ಪ್ರಧಾನ ಕಾರ್ಯದರ್ಶಿ ಲತೀಫ್ ಹರ್ಲಡ್ಕ, ಖಾದರ್ ಪಟೇಲ್, ಹಮೀದ್ ಕತ್ತಾಮೊಟ್ಟೆ, ತಾಲೂಕು ಪಂಚಾಯತ್ ಮಾಜಿ ಸದಸ್ಯ ಗಫೂರ್ ಕಲ್ಮಡ್ಕ ಮೊದಲಾದವರು ಉಪಸ್ಥಿತರಿದ್ದರು.


ತಾಲೂಕಿನ ೭ಕ್ಕೂ ಮಿಕ್ಕಿದ ಶಿಕ್ಷಣ ಸಂಸ್ಥೆಗಳು ಮತ್ತು ೨೦ಕ್ಕೂ ಮಿಕ್ಕಿದ ಸಂಘ-ಸಂಸ್ಥೆಗಳು ಹಾಜಬ್ಬರನ್ನು ಸನ್ಮಾನಿಸಿದರು. ಅನ್ಸಾರಿಯಾ ವಿಧ್ಯಾರ್ಥಿಗಳು ರಚಿಸಿದ ಸ್ವಾಗತಗಾನ ಹಾಡಿದರು. ಯಸ್. ಸಂಶುದ್ದೀನ್ ಸ್ವಾಗತಿಸಿ, ಹಸೈನಾರ್ ಜಯನಗರ ವಂದಿಸಿದರು. ಅನ್ಸಾರಿಯ ವ್ಯವಸ್ಥಾಪಕ ಉವೈಸ್ ಬೀಟಿಗೆ, ಅನ್ಸಾರಿಯ ಪತ್ರಿಕಾ ಕಾರ್ಯದರ್ಶಿ ಶರೀಫ್ ಜಟ್ಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.