ಪಂಬೆತ್ತಾಡಿ : ಅಮೃತಾ ಮಹಿಳಾ ಮಂಡಲದ ವಾರ್ಷಿಕ ಮಹಾಸಭೆ

Advt_Headding_Middle
Advt_Headding_Middle

ಪಂಬೆತ್ತಾಡಿ ಅಮೃತಾ ಮಹಿಳಾ ಮಂಡಲ(ರಿ) ಇದರ ವಾರ್ಷಿಕ ಮಹಾಸಭೆಯು  ಡಿಸೆಂಬರ್  25 ರಂದು ರತಿದೇವಿ ಜಾಕೆ ಇವರ ಅಧ್ಯಕ್ಷತೆಯಲ್ಲಿ ಪಂಬೆತ್ತಾಡಿ ಪಂಚಾಯತ್ ಸಭಾಭವನದಲ್ಲಿ ನಡೆಯಿತು. 2020-21 ಸಾಲಿನ ವಾರ್ಷಿಕ ವರದಿಯನ್ನು ಮೋಹನಾಂಗಿ  ಪಂಜದಬೈಲು ವಾಚಿಸಿದರು. ಲೆಕ್ಕ ಪತ್ರಗಳನ್ನು ಧನಲಕ್ಷ್ಮೀ ಮಠ ಮಂಡಿಸಿದರು. 


2021-22ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಅನಿತಾ ಸುತ್ತುಕೋಟೆ, ಉಪಾಧ್ಯಕ್ಷ. ದಿವ್ಯಾ ಬೀಮಗುಳಿ, ಕಾರ್ಯದರ್ಶಿ ಜಯಂತಿ ಪಂಜದಬೈಲು, ಜತೆಕಾರ್ಯದರ್ಶಿ ಕುಸುಮ ಮೊಡಪ್ಪಾಡಿ, ಖಜಾಂಜಿಯಾಗಿ ಧನಲಕ್ಷ್ಮೀ ಮಠ, ಸಾಂಸ್ಕೃತಿಕ ಕಾರ್ಯದರ್ಶಿ ಹೇಮಾವತಿ ಮಂಚ್ಚಿಕಟ್ಟೆ, ಕ್ರೀಡಾ ಕಾರ್ಯದರ್ಶಿಯಾಗಿ ಅಶ್ವಿನಿ ಮಡಿವಾಳಮಜಲು ಆಯ್ಕೆಯಾದರು. 
ಅನಿತಾ ಸುತ್ತುಕೋಟೆ ಪ್ರಾರ್ಥಿಸಿ, ರತಿದೇವಿ ಜಾಕೆ ಸ್ವಾಗತಿಸಿದರು. ಶ್ವೇತಾ ಪಂಜದಬೈಲು ವಂದಿಸಿ, ಜಯಂತಿ ಪಂಜದಬೈಲು ಕಾರ್ಯಕ್ರಮ ನಿರೂಪಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.