Breaking News

ಕಲ್ಮಡ್ಕ : ಉಚಿತ ರಕ್ತ ವರ್ಗೀಕರಣ ಹಾಗೂ ಇ- ಶ್ರಮ್ ಕಾರ್ಡ್ ನೋಂದಣಿ ಶಿಬಿರ

Advt_Headding_Middle

ನವೋದಯ ಸಂಘ ಕಲ್ಮಡ್ಕ ಹಾಗೂ ಶ್ರೀ ರಾಮ ಭಜನಾ ಮಂಡಳಿ ಕಲ್ಮಡ್ಕ ಇವುಗಳ ಜಂಟಿ ಆಶ್ರಯದಲ್ಲಿ , ರಮೇಶ್. ಕೆ ತಿಪ್ಪನಕಜೆ
ಹೆಲ್ತ್ ಕೇರ್ ಕ್ಲಿನಿಕಲ್ ಲ್ಯಾಬೊರೇಟರಿ ಕುಶಾಲನಗರ ಇವರ ಸಹಕಾರದೊಂದಿಗೆ ದಿ. 26.12.21 ರಂದು ಕಲ್ಮಡ್ಕದ ಸ.ಹಿ . ಪ್ರಾಥಮಿಕ ಶಾಲೆಯಲ್ಲಿ ಉಚಿತ ರಕ್ತ ವರ್ಗೀಕರಣ ಹಾಗೂ ಇ-ಶ್ರಮ್ ನೋಂದಣಿ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಕಲ್ಮಡ್ಕದ ಆರೋಗ್ಯ ಸಹಾಯಕಿ ಶ್ರೀಮತಿ ಪವಿತ್ರ. ಜೆ. ದೀಪ ಬೆಳಗಿಸಿ ಉದ್ಘಾಟಿಸಿದರು. ರಮೇಶ್ ಕೆ ತಿಪ್ಪನಕಜೆ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ  ರಮೇಶ್ ಕಾಚಿಲ, ಮುಖ್ಯ ಶಿಕ್ಷಕಿ ಶ್ರೀಮತಿ ವಜ್ರಾಕ್ಷಿ. ಶ್ರೀಕಾಂತ್,  ದೀಪಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನವೋದಯ ಸಂಘದ ಅಧ್ಯಕ್ಷರಾದ  ಶಿವರಾಮ.ಬಿ. ಸ್ವಾಗತಿಸಿ, ಶ್ರೀ ರಾಮ ಭಜನಾ ಮಂಡಳಿಯ ಅಧ್ಯಕ್ಷರಾದ ವೆಂಕಟ್ರಮಣ ಆಚಾರ್ಯ ಪ್ರಾರ್ಥಿಸಿದರು , ಉಪಾಧ್ಯಕ್ಷರಾದ ಹುಕ್ರಪ್ಪ ಎಂ. ವಂದಿಸಿದರು. ಶ್ರೀಮತಿ ನಳಿನಾಕ್ಷಿ ಕಲ್ಮಡ್ಕ ಕಾರ್ಯಕ್ರಮ ನಿರೂಪಿಸಿದರು.

ಶ್ರೀಮತಿ ಸೌಮ್ಯ ಕೊಳೆಂಜಿಕೋಡಿ, ರಾಜೇಶ್ ಕಾಚಿಲ, ಗುರುಪ್ರಸಾದ್ ಕಾಚಿಲ, ಅಶ್ವಿನಿ ಜೋಗಿಬೆಟ್ಟು , ಶ್ರೀನಿವಾಸ್ ಜೋಗಿಬೆಟ್ಟು , ರಮೇಶ್ ಕುರಿಯ, ಪರಮೇಶ್ವರ ಕಾಚಿಲ , ಓಬಯ್ಯ . ನಾಯ್ಕ ಎಂ,ವೆಂಕಟ್ರಮಣ ಧರ್ಮಡ್ಕ, ಹೊನ್ನಪ್ಪ ಕಾಚಿಲ ಹಾಗೂ ಶ್ರೀರಾಮ ಭಜನಾ ಮಂಡಳಿ ಕಲ್ಮಡ್ಕ ಹಾಗೂ ನವೋದಯ ಸಂಘ ಕಲ್ಮಡ್ಕ ಇದರ ಎಲ್ಲ ಕಾರ್ಯಕರ್ತರು ಸಹಕರಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.