Breaking News

ಪೆರಾಜೆ : ಕರ್ನಾಟಕ ರಾಜ್ಯ ರೈತ ಸಂಘ ಪೆರಾಜೆ ಘಟಕದ ಸಭೆ

Advt_Headding_Middle

ಪೆರಾಜೆ ಗ್ರಾಮದ ಕರ್ನಾಟಕ ರಾಜ್ಯ ರೈತ ಸಂಘದ ಸಭೆಯು ಡಿ.25೨೫ ರಂದು ಪೆರಾಜೆಯ ಅನ್ನಪೂರ್ಣೇಶ್ವರಿ ಸಭಾಂಗಣದಲ್ಲಿ ನಡೆಯಿತು.
ಸಭಾಧ್ಯಕ್ಷತೆಯನ್ನು ತಾಲೂಕು ಘಟಕದ ಅಧ್ಯಕ್ಷರಾದ ಲೋಲಾಜಕ್ಷ ಭೂತಕಲ್ಲುರವರು ವಹಿಸಿದ್ದರು. ಜಿಲ್ಲಾ ಉಪಾಧ್ಯಕ್ಷರಾದ ದಿವಾಕರ ಪೈ ಮಜಿಗುಂಡಿ ಹಾಗೂ ತಾಲೂಕು ಘಟಕದ ಕಾರ್ಯದರ್ಶಿ ಭರತ್ ಕುಮಾರ್ ಅತಿಥಿಗಳಾಗಿ ಹಾಜರಿದ್ದರು.
ಗೋಪಾಲ್ ಪೆರಾಜೆಯವರು ಸ್ವಾಗತಿಸಿ, ರೈತ ಸಂಘಟನೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು. ಪ್ರಾಸ್ತವಿಕವಾಗಿ ಸುಳ್ಯ ತಾಲೂಕು ಕಾರ್ಯದರ್ಶಿ ಭರತ್ ಕುಮಾರ್ ಮಾತನಾಡಿ ದೆಹಲಿಯಲ್ಲಿ ಒಂದು ವರ್ಷದಿಂದ ರೈತ ಹೋರಾಟದಲ್ಲಿ ಸಾವನಪ್ಪಿದ ರೈತರಿಗೆ ಶೀಘ್ರ ಪರಿಹಾರ ಸಿಗುವಂತಾಗಲಿ ಎಂದರು. ಹಾಗೆಯೇ ಅಡಿಕೆ ಎಲೆ ಹಳದಿ ರೋಗದ ವಿಷಯವನ್ನು ವಿಧಾನ ಸಭೆಯಲ್ಲಿ ಪ್ರಸ್ತಾವಿಸಿ ಮಾತನಾಡಿದ ಹರೀಶ್ ಪೂಂಜಾ ಹಾಗು ಸಂಜೀವ ಮಠಂದೂರು ಅವರನ್ನು ಅಭಿನಂದಿಸಲಾಯಿತು.


ನಂತರ ನಡೆದ ಸಂವಾದದಲ್ಲಿ ಹರಿಶ್ಚಂದ್ರ ಮುಡ್ಕಜೆ ರೈತ ಸಂಘಟನೆ ಮಾಹಿತಿ ಹಾಗೂ ರಬ್ಬರ್ ಬೆಳೆಯನ್ನು ರೈತರ ಅನುಕೂಲಕ್ಕೆ ಆಗುವ ಬೆಳೆಯೆಂದು ಘೋಸಿಷಬೇಕು. ಈಗಿರುವ ಕೈಗಾರಿಕಾ ಬೆಳೆಯಿಂದ ಸೌಲಭ್ಯಗಳಿಂದ ವಂಚಿತರಾಗಿದ್ದೇವೆ ಎಂದರು.
ನಂತರ ರೈತರಿಂದ ಸ್ವಯಂ ಘೋಷಿತ ಅರ್ಜಿಯನ್ನು ಪಡೆದು ಡಾ.ಟಿ.ಎನ್.ಪ್ರಕಾಶ್ ಕಮ್ಮರಡಿಯವರಿಂದ ವರದಿ ಸಲ್ಲಿಸುವ ಬಗ್ಗೆ ಚರ್ಚಿಸಲಾಯಿತು.
ನಂತರ ಕರ್ನಾಟಕ ರಾಜ್ಯ ರೈತ ಸಂಘ ನೂತನ ಪೆರಾಜೆ ಗ್ರಾಮ ಘಟಕವನ್ನು ರಚಿಸಲಾಯಿತು.
ಗೌರವಾಧ್ಯಕ್ಷರಾಗಿ ಹರಿಶ್ಚಂದ್ರ ಮುಡ್ಕಜೆ, ಅಧ್ಯಕ್ಷರಾಗಿ ನಿಡ್ಯಮಲೆ ಬಾಲಕೃಷ್ಣ, ಉಪಾಧ್ಯಕ್ಷರಾಗಿ ಉಮೇಶ್ ಕುಂಬಳಚೇರಿ ಮತ್ತು ಗೋಪಾಲ್ ಪೆರಾಜೆ, ಪ್ರಧಾನ ಕಾರ್ಯದರ್ಶಿಯಾಗಿ ಪುರುಷೋತ್ತಮ ಬಂಗಾರಕೋಡಿ, ಖಜಾಂಜಿಯಾಗಿ ಗಂಗಾಧರ ನೆಕ್ಕಿಲಮನೆ ಆಯ್ಕೆ ಮಾಡಲಾಯಿತು.
ನೂತನ ಪದಾಧಿಕಾರಿಗಳ ಪ್ರಮಾಣವಚನದ ನಂತರ ತಾಲೂಕು ಅಧ್ಯಕ್ಷರು ನೂತನ ಘಟಕಕ್ಕೆ ಧ್ವಜ ಹಸ್ತಾಂತರಿಸಿದರು.
ಆಯ್ಕೆಯಾದ ಘಟಕದ ಪದಾಧಿಕಾರಿಗಳು ತಮ್ಮ ಅಭಿಪ್ರಾಯವನ್ನು ತಿಳಿಸುತ್ತಾ ಕೊಡಗು ಹಾಗು ದ. ಕ. ಜಿಲ್ಲೆಯ ಅಡಿಕೆ ಎಲೆ ಹಳದಿ ರೋಗ ಪೀಡಿತ ಗ್ರಾಮಸ್ಥರು ಜಂಟಿಯಾಗಿ ಹೋರಾಟದ ಮೂಲಕ ತಮ್ಮ ಹಕ್ಕನ್ನು ಸರಕಾರದ ಗಮನಕ್ಕೆ ತರುವಲ್ಲಿ ಯಶಸ್ವಿಯಾಗಬೇಕೆಂದು ಆಶಿಸಿದರು.
ಲೋಲಾಜಕ್ಷ ಭೂತಕಲ್ಲು ಮಾತನಾಡಿ, ರೈತರು ಒಗ್ಗಟ್ಟಾಗಿ ಸಂಘಟನಾತ್ಮಕ ಹೋರಾಟ ನಡೆಸಿದಲ್ಲಿ ಪರಿಹಾರ ಕಂಡುಕೊಳ್ಳುವುದರಲ್ಲಿ ಸಂಶಯವಿಲ್ಲ ಎಂದರು.
ನೂತನ ಕಾರ್ಯದರ್ಶಿ ಪುರುಷೋತ್ತಮ ಬಂಗಾರಕೋಡಿ ವಂದಿಸಿದರು.
ಸಭೆಯಲ್ಲಿ ತಾಲೂಕು ಘಟಕದ ಖಜಾಂಚಿ ದೇವಪ್ಪ ಗೌಡ ಕುಂದಾಲ್ಪಾಡಿ, ತಾಲೂಕು ಘಟಕದ ಜತೆ ಕಾರ್ಯದರ್ಶಿ ಚೆನ್ನಕೇಶವ ಚೊಕ್ಕಾಡಿ, ಮರ್ಕಂಜ ಗ್ರಾಮ ಘಟಕದ ಅಧ್ಯಕ್ಷರಾದ ಮಾಧವ ಗೌಡ ದೊಡ್ಡಿಹಿತ್ಲು ಹಾಗು ಪ್ರಧಾನ ಕಾರ್ಯದರ್ಶಿ ಸುಧರ್ಶನ್ ಕೊಯಿಂಗೋಡಿ, ತೊಡಿಕಾನ ಗ್ರಾಮ ಘಟಕದ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ಕುಂಟುಕಾಡು, ಮಂಜುನಾಥ್ ಮಡ್ತಿಲ ಹಾಗೂ ಗ್ರಾಮದ ಹಲವಾರು ರೈತರು ಭಾಗವಹಿಸಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.