Breaking News

ಬಳ್ಪ ಜಾತ್ರೋತ್ಸವ : ಡಿ. 30 ಬ್ರಹ್ಮ ರಥೋತ್ಸವ, ಬಳ್ಪ ಬೆಡಿ

Advt_Headding_Middle

 

 

ಬಳ್ಪ ಶ್ರೀ ತ್ರಿಶೂಲಿನೀ ದುರ್ಗಾಪರಮೇಶ್ವರಿ ದೇವಸ್ಥಾಾನ ಮತ್ತು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾಾನ ಇದರ ವಾರ್ಷಿಕ ಜಾತ್ರಾ ಮಹೋತ್ಸವವು ಡಿ. 27ರಿಂದ 31ರ ತನಕ ವಿಜೃಂಭಣೆಯಿಂದ ಜರಗಲಿದೆ. ಡಿ. 26ರಂದು ಉಗ್ರಾಣ ಮುಹೂರ್ತ ನೆರವೇರಿತು.


ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ
ಡಿ. 27ರಂದು ಪ್ರಾಾತಃಕಾಲ ವಿವಿಧ ವೈದಿಕ ಕಾರ್ಯಕ್ರಮಗಳು, ಮಧ್ಯಾಾಹ್ನ ಶ್ರೀ ದೇವರ ಬಲಿ ಹೊರಟು ಉತ್ಸವ, ದರ್ಶನ ಬಲಿ ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ, ಅನ್ನಸಂತರ್ಪಣೆ ಜರಗಿತು.
ರಾತ್ರಿ ಮಹಾರಂಗ ಪೂಜೆ, ಉತ್ಸವ ಬಲಿ, ಪಲ್ಲಕ್ಕಿ ಉತ್ಸವ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಿತು. ಇಂದು ಮಧ್ಯಾಾಹ್ನ ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಡಿ. 30ರಂದು ಬೆಳಿಗ್ಗೆ 9.00 ಗಂಟೆಗೆ ಬಡಗು ಮತ್ತು ತೆಂಕು ಅಂಗಣದ ಶಾಶ್ವತ ಚಪ್ಪರದ ಲೋಕಾರ್ಪಣೆ ನಡೆಯಲಿದೆ. ಮಧ್ಯಾಾಹ್ನ ಮಹಾಪೂಜೆ, ಬಲಿ ಹೊರಟು 11.30ಕ್ಕೆ ಬ್ರಹ್ಮರಥಾರೋಹಣ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರಗಲಿದೆ. ರಾತ್ರಿ 9.30 ರಿಂದ ಬ್ರಹ್ಮರಥೋತ್ಸವ, ಬಳ್ಪ ಬೆಡಿ ನಡೆಯಲಿದೆ. ಡಿ. 31 ರಂದು ಉತ್ಸವ ಬಲಿ, ದರ್ಶನ ಬಲಿ ಬಟ್ಟಲು ಕಾಣಿಕೆ, ಮಧ್ಯಾಾಹ್ನ ಮಹಾಪೂಜೆ, ಭೂರಿ ಸಮಾರಾಧನೆ ನಡೆಯಲಿದೆ.
ಸಾಯಂಕಾಲ 3.00ರಿಂದ ಕುಮಾರಧಾರಾ ನದಿಗೆ ಶ್ರೀ ಅವಭೃತಯಾತ್ರಾರಂಭ, ಕಟ್ಟೆಪೂಜೆಗಳು ನಡೆದು ಅವಭೃತೋತ್ಸವ ನಡೆಯಲಿದೆ.
ಡಿ. 30ರಂದು ಸಂಜೆ ಗಂಟೆ 6.00 ರಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಕಲಾವಿದರಿಂದ ಯಕ್ಷಗಾನಾರ್ಚನೆ
ನಡೆಯಲಿದೆ. ಭಾಗವತರಾಗಿ ಗಾನಸಾರಥಿ ಖ್ಯಾಾತಿಯ ರಾಘವೇಂದ್ರ ಆಚಾರ‌್ಯ, ಜನ್ಸಾಾಲೆ (ಬಡಗು)
ಸ್ವರ ವಾರಿಧಿ ಖ್ಯಾತಿಯ ಶ್ರೀಮತಿ ಕಾವ್ಯಶ್ರೀ ಅಜೇರು (ತೆಂಕು)
ಪ್ರಶಾಂತ್ ರೈ, ಪುತ್ತೂರು (ತೆಂಕು) ಭಾಗವಹಿಸಲಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.