ಸುಳ್ಯ ಪಿ.ಎಲ್.ಡಿ. ಬ್ಯಾಂಕ್ ಪ್ರ. ವ್ಯವಸ್ಥಾಪಕ ಕೆ.ಸಿ ಧನರಾಜ್ ನಿವೃತ್ತಿ

Advt_Headding_Middle
Advt_Headding_Middle

 

 

ಸುಳ್ಯ ಪಿ.ಎಲ್.ಡಿ. ಬ್ಯಾಂಕಿನಲ್ಲಿ ಪ್ರಭಾರ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸುತ್ತಿರುವ ಕೆ.ಸಿ.ಧನರಾಜ್ ರವರು ಸುದೀರ್ಘ 41 ವರ್ಷಗಳ ಕಾಲ ಸೇವೆ ಸಲ್ಲಿಸಿ ಡಿ. 31ರಂದು ನಿವೃತ್ತಿ ಹೊಂದಲಿದ್ದಾರೆ.

1961ರ ಫೆ. 11ರಂದು ಕಡೆಕಾರು ಕುಟುಂಬದ ಕೆ. ಚಂದ್ರಶೇಖರ ಮತ್ತು ಶ್ರೀಮತಿ ಭವಾನಿ ದಂಪತಿಗಳ ಪುತ್ರರಾಗಿ ತಮಿಳುನಾಡಿನ ಕೊಯಂಬತ್ತೂರಿನಲ್ಲಿ ಜನಿಸಿದ ಕೆ.ಸಿ. ಧನರಾಜ್ ರು ತಮ್ಮ ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣವನ್ನು ಮಂಗಳೂರು ಹಾಗೂ ಕುಂದಾಪುರದಲ್ಲಿ ಪೂರೈಸಿದರು. ಬಳಿಕ ಬ್ಯಾಂಕಿಂಗ್‌ಗೆ ಸಂಬಧಿಸಿದ ತರಬೇತಿಯನ್ನು ಮೂಡಬಿದಿರೆಯಲ್ಲಿ 1999 ಉನ್ನತ ಶ್ರೇಣಿಯಲ್ಲಿ ಪೂರ್ಣ ಗೊಳಿಸಿ ಕೇಂದ್ರ ಬ್ಯಾಂಕು ಹಾಗೂ ಎನ್.ಆರ್.ಬಿ.ಐ ಸಂಸ್ಥೆ ಬೆಂಗಳೂರು ಇವರ ಸಹಯೋಗದಿಂದ ನಡೆದ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದಲ್ಲದೆ ಬಿ.ಐ.ಆರ್.ಡಿ ಮಂಗಳೂರಿನಲ್ಲಿ ನಡೆದ ತರಬೇತಿಯಲ್ಲೂ ಭಾಗವಹಿಸಿರುತ್ತಾರೆ.
1980 ಮಾ. 1ರಂದು ಪಿಯಲ್‌ಡಿ ಬ್ಯಾಂಕಿಗೆ ತಾತ್ಕಲಿಕ ನೆಲೆಯಲ್ಲಿ ನೇಮಕಗೊಂಡು ದ್ವಿತೀಯ ದರ್ಜೆ ಸಹಾಯಕರಾಗಿ ಕೆಲಸ ನಿರ್ವಹಿಸಿ 1990ರಲ್ಲಿ ಕಿರಿಯ ಕ್ಷೇತ್ರಾಧಿಕಾರಿ ಹುದ್ದೆಯಲ್ಲಿ ಖಾಯಂ ನೌಕರರಾಗಿ ಭಡ್ತಿಹೊಂದಿದರು. ಬಳಿಕ 2017ರ ಸೆಪ್ಟೆಂಬರ್ ನಿಂದ ಹಿರಿಯ ಕ್ಷೇತ್ರಾಧಿಕಾರಿಯಾಗಿ ಭಡ್ತಿಗೊಂಡು, ತದನಂತರ 2019ರ ಫೆ. 1ರಿಂದ ಬ್ಯಾಂಕಿನ ಪ್ರಭಾರ ವ್ಯವಸ್ಥಾಪಕರಾಗಿ ಪದೋನ್ನತಿ ಹೊಂದಿರುತ್ತಾರೆ. ಇವರ ಪತ್ನಿ ಶ್ರೀಮತಿ ವನಿತಾ ಸುಳ್ಯದ ರೋಟರಿ ಶಾಲೆಯಲ್ಲಿ ಕಚೇರಿ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸಿ ಸ್ವಯಂ ನಿವೃತ್ತಿ ಪಡೆದಿದ್ದಾರೆ. ಪುತ್ರಿ ಶ್ರೀಮತಿ ಪಲ್ಲವಿ ಎಂ.ಎಸ್.ಸಿ. ಪದವೀಧರರಾದರೆ ದ್ವಿತೀಯ ಪುತ್ರಿ ಪೂರ್ವಿ ದ್ವಿತೀಯ ಪಿ.ಯು.ಸಿ. ವ್ಯಾಸಂಗ ಮಾಡುತ್ತಿದ್ದಾರೆ. ಧನರಾಜ್ ರು ಪ್ರಸ್ತುತ ಮಂಗಳೂರಿನ ಸೋಮೇಶ್ವರ ಬಳಿಯ ಕುಂಪಲ ಎಂಬಲ್ಲಿ ವಾಸವಾಗಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.