ಬೆಳ್ಳಾರೆ ಹೌದಾಯತುಲ್ ಇಸ್ಲಾಂ ಮದ್ರಸ ದಲ್ಲಿ ಅಭಿನಂದನಾ ಕಾರ್ಯಕ್ರಮ

Advt_Headding_Middle
Advt_Headding_Middle

 

ಬೆಳ್ಳಾರೆ ಾ ಸುಳ್ಯ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ವತಿಯಿಂದ ನಡೆದ ಮುಸಾಬಖಾ 2021 ಕಲಾ ಸಾಹಿತ್ಯ ಸ್ಪರ್ಧೆಯಲ್ಲಿ ಚಾಂಪಿಯನ್ ಶಿಪ್ ಪಡೆಯಲು ಕಾರಣಕರ್ತರಾದ ಬೆಳ್ಳಾರೆ ಮದ್ರಸ ವಿದ್ಯಾರ್ಥಿಗಳಿಗೆ ಅಭಿನಂದನೆ ಹಾಗೂ ಮದ್ರಸ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಇಂದು ಜರುಗಿತು. ಸಭೆಯ ಅಧ್ಯಕ್ಷತೆಯನ್ನು ಮುಖ್ಯೋಪಾಧ್ಯಾಯರಾದ ಬಹು.ಮುಹಮ್ಮದ್ ಮುಸ್ಲಿಯಾರ್ ವಹಿಸಿದ್ದರು. ಬೆಳ್ಳಾರೆ ಮಸೀದಿಯ ಖತೀಬರಾದ ಬಹು ಯೂನುಸ್ ಸಖಾಫಿ ವಯನಾಡ್ ಉದ್ಘಾಟಿಸಿ ಮಾತನಾಡಿದರು. ಮುಅಲ್ಲಿಮರುಗಳಾದ ಝೈನುದ್ದೀನ್ ಮುಸ್ಲಿಯಾರ್, ಬಹು.ಹಸೈನಾರ್ ಮುಸ್ಲಿಯಾರ್, ಶಮೀಮ್ ಹುದವಿ ಅಭಿನಂದನಾ ಭಾಷಣ ಮಾಡಿದರು. ವೇದಿಕೆಯಲ್ಲಿ ಮಸೀದಿ ಆಡಳಿತಾಧಿಕಾರಿ ಸಹಾಯಕ ಹೈದರ್, ಹಾಜಿ.ಕೆ.ಮಮ್ಮಾಲಿ, ಯು.ಎಚ್ ಅಬೂಬಕ್ಕರ್, ಉಪಸ್ಥಿತರಿದ್ದರು. ಸಭೆಯಲ್ಲಿ ವಿದ್ಯಾರ್ಥಿ ವಿದ್ಯಾರ್ಥಿಗಳು, ರಕ್ಷಕರು,ಜಮಾಅತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಸಭೆಗೆ ಸುಲೈಮಾನ್ ಮುಸ್ಲಿಯಾರ್ ಸ್ವಾಗತಿಸಿ ವಂದಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.