ಕೆ. ವಿ. ಜಿ. ಐ. ಪಿ. ಎಸ್ : ಕುವೆಂಪು ಜನ್ಮ ದಿನಾಚಾರಣೆ

Advt_Headding_Middle
Advt_Headding_Middle

 

ಸುಳ್ಯದ ಕೆವಿಜಿ ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಕುವೆಂಪುರವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮಕ್ಕೆ ಶಾಲಾ ಪ್ರಾಂಶುಪಾಲರಾದ ಅರುಣ್ ಕುಮಾರ್, ಉಪಪ್ರಾಂಶುಪಾಲರಾದ ಶಿಲ್ಪ ಬಿದ್ದಪ್ಪ ಮತ್ತು ಶಾಲಾ ವಿದ್ಯಾರ್ಥಿ ತಂಡದ ನಾಯಕ ಪ್ರಥಮ್, ನಾಯಕಿ ಸುದೀಪ್ತ ರವರು ಕುವೆಂಪುರವರ ಭಾವಚಿತ್ರಕ್ಕೆ ಪುಷ್ಪ ನಮನ ವನ್ನು ಸಲ್ಲಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ಶಾಲಾ ಸಂಕಾಲಕರಾದ ಡಾ. ರೇಣುಕಾ ಪ್ರಸಾದ್ ಕೆ. ವಿ ಶುಭ ಹಾರೈಸಿದರು. ಕಾರ್ಯಕ್ರಮದ ನಿರೂಪಣೆಯನ್ನು ನಾಲ್ಕನೇ ತರಗತಿಯ ಶ್ರುತರಾಜ್ ಮತ್ತು ಫಯ್ಯ ಆಯಿಶಾ ನೆರವೇರಿಸಿದರು .

ಸಾಹಿತ್ಯ ಸಾಧನೆಯ ಮೇರುಪರ್ವತ ವಾದ ಕುವೆಂಪುರವರ ವ್ಯಕ್ತಿತ್ವದ ಪರಿಚಯವನ್ನು ನಾಲ್ಕನೇ ತರಗತಿಯ ಭುವನ್ ಕೃಷ್ಣ ಮತ್ತು ಭಗತ್ ಕೃಷ್ಣರವರು ಮಾಡಿದರು. ಕುವೆಂಪುರವರ ಪುಟ್ಟ ಕವಿತೆಯನ್ನು ವಿದ್ಯಾರ್ಥಿಗಳು ಹಾಡಿದರು. ಕಾರ್ಯಕ್ರಮದ ಅಂತಿಮ ಘಟ್ಟದಲ್ಲಿ ನಾಲ್ಕನೇ ತರಗತಿಯ ಕುಮಾರಿ ತನ್ವಿ ಯವರ ನಾಡಗೀತೆಯ ಕೀಬೋರ್ಡ್ ವಾದನ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗನ್ನು ತಂದುಕೊಟ್ಟಿತ್ತು. ಈ ಕಾರ್ಯಕ್ರಮಕ್ಕೆ ಶಿಕ್ಷಕಿಯಾದ ಶ್ರೀಮತಿ ಸೌಮ್ಯ ಇವರು ಸಹಕರಿಸಿದರು. ಎಲ್ಲಾ ಶಿಕ್ಷಕ ಮತ್ತು ಶಿಕ್ಷಕೇತರ ವರ್ಗದವರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.