ಸುಬ್ರಹ್ಮಣ್ಯ ಗ್ರಾ.ಪಂ : ವಿಶೇಷ ಗ್ರಾಮ ಸಭೆ

Advt_Headding_Middle

 

ಜಲಜೀವನ್ ಮಿಶನ್ ಯೋಜನೆಯಲ್ಲಿ 2 ಕೋಟಿ

ಸುಬ್ರಹ್ಮಣ್ಯ ಗ್ರಾ.ಪಂ ನ ಮಾಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಅನುಷ್ಠಾನ ಹಾಗೂ 2020-21 ನೇ ಸಾಲಿನ 14/15 ನೇ ಹಣಕಾಸು ಯೋಜನೆಯ ಮತ್ತು ಸಾಮಾಜಿಕ ಪರಿಶೋಧನೆ ವರದಿ ಮಂಡನೆ – ಅನುಮೋದನೆ ಕುರಿತು ವಿಶೇಷ ಗ್ರಾಮ ಸಭೆ ಇಂದು ಪಂಚಾಯತ್ ನ ರಾಜೀವ ಗಾಂಧಿ ಸೇವಾಕೇಂದ್ರ ಸಭಾಭವನಲ್ಲಿ ನಡೆಯಿತು.

ನೋಡೆಲ್ ಅಧಿಕಾರಿಯಾಗಿ ಲೊಕೋಪಯೋಗಿ ಉಪ ವಿಭಾಹದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಜೈ ಪ್ರಕಾಶ್ ಇದ್ದರು.

ವೇದಿಕೆಯಲ್ಲಿ ಗ್ರಾ.ಪಂ ಅಧ್ಯಕ್ಷೆ ಲಲಿತಾ ಜಿ ಗುಂಡಡ್ಕ, ಪಿಡಿಒ ಯು ಡಿ ಶೇಖರ್, ಕಾರ್ಯದರ್ಶಿ ಮೋನಪ್ಪ ಡಿ ಉಪಸ್ಥಿತರಿದ್ದರು.
ಪ್ರವೀಣ್ ಮಾಹಿತಿ ನೀಡಿದರು. ಸುಬ್ರಹ್ಮಣ್ಯ ಗ್ರಾ.ಪಂ ಸದಸ್ಯರು ಉಪಸ್ಥಿತರಿದ್ದರು.

ಉದ್ಯೋಗ ಖಾತ್ರಿಯಲ್ಲಿ ಗ್ರಾಮೀಣ ರಸ್ತೆಗೆ ಹೆಚ್ಚು ಶೇಕಡಾವಾರು ಅನುದಾನ ಒದಗಿಸುವಂತೆ ಒತ್ತಡ ಬರಬೇಕೆಂದು ವಾಸುದೇವ ಬಾನಡ್ಕ ವಿನಂತಿಸಿದಾಗ ಪಿ ಡಿ ಒ ಶೇಖರ್ ಅವರು ಇದು ತುಂಭಾ ಕಷ್ಟದ ವಿಚಾರ. ರಸ್ತೆಗೆ ಬೇರೆ ಬೇರೆ ಇಲಾಖಾ ಅನುದಾನಗಳು ಇವೆ. ಉದ್ಯೋಗ ಖಾತ್ರಿಯಲ್ಲಿ ಕೂಲಿ ಮಾಡಿ ರಸ್ತೆ ನಿರ್ಮಾಣ ಮಾಡಲು ಸಾದ್ಯವಿದೆ ಅಂತವುಗಳನ್ನು ಗ್ರಾಮಸ್ಥರು ಪ್ರೋತ್ಸಾಹಿಸಬೇಕು ಎಂದರು. ಸುಬ್ರಹ್ಮಣ್ಯ ಗ್ರಾ.ಪಂ ಗೆ ಜಲಜೀವನ್ ಮಿಶನ್ ಯೋಜನೆಯಲ್ಲಿ 2 ಕೋಟಿ ಅನುದಾನ ಕುಡಿಯುವ ನೀರಿನ ವ್ಯವಸ್ಥೆಗೆ ಬರಲಿದೆ ಎಂದು ಮಾಹಿತಿ ಇತ್ತರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.