ದ.ಕ ತಮಿಳು ಸೇವಾ ಸಂಘದ ವಾರ್ಷಿಕ ಮಹಾಸಭೆ : ಪದಾಧಿಕಾರಿಗಳ ಆಯ್ಕೆ

Advt_Headding_Middle

 

ದ.ಕ ತಮಿಳು ಸೇವಾ ಸಂಘ ದ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷರಾದ ಜಯಪ್ರಕಾಶ್ ರವರ ಅಧ್ಯಕ್ಷತೆಯಲ್ಲಿ ಸುಳ್ಯದ ಜಟ್ಟಿಪಳ್ಳದಲ್ಲಿರುವ ಸಂಘದ ಕಚೇರಿಯಲ್ಲಿ ಡಿ .26 ರಂದು ನಡೆಯಿತು.


ಸ್ಥಾಪಕ ಅಧ್ಯಕ್ಷ ಪೆರುಮಾಳ್ ಐವರ್ನಾಡು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ದಯಾಳ್ ಮೇದಿನಡ್ಕ ಪ್ರಾರ್ಥಿಸಿ ವಂದಿಸಿದರು. ಸಂಘದ ಅಧ್ಯಕ್ಷ ಜಯಪ್ರಕಾಶ್ ವಾರ್ಷಿಕ ವರದಿ ಮಂಡಿಸಿ ಪ್ರಾಸ್ತಾವಿಕ ಮಾತನಾಡಿದರು. ಈ ಸಂದರ್ಭದಲ್ಲಿ ಪ್ರಾಂಶುಪಾಲರು ಸಂಘದ ಸ್ಥಾಪಕ ಅಧ್ಯಕ್ಷರಾದ ಗಣಪತಿ ಬೇಂಗಮಲೆ, ಸಂದರ್ಭೋಚಿತವಾಗಿ ಮಾತನಾಡಿದರು. ಸದಸ್ಯರಾದ ನಟರಾಜ ಪಾಣಾಜೆ, ರೀಕೋ ಪ್ರತಿನಿಧಿ ಶಿವಕುಮಾರ್ ಕೂಟೇಲ್, ತಮ್ಮ ಅನಿಸಿಕೆ ವ್ಯಕ್ತಪಡಿಸಿದರು,
ನಂತರ ಮುಂದಿನ ಅವಧಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಆಯ್ಕೆ ನಡೆದಿದ್ದು, ನೂತನ ಅಧ್ಯಕ್ಷರಾಗಿ ಶ್ರೀಧರ್ ನಾಗಪಟ್ಟಣ, ಉಪಾಧ್ಯಕ್ಷರಾಗಿ ಸತೀಶ್ ಕೌಡಿಚ್ಚಾರ್, ಪ್ರಧಾನ ಕಾರ್ಯದರ್ಶಿಯಾಗಿ ತೋಮಸ್ ಬೇಂಗಮಲೆ, ಕೋಶಾಧಿಕಾರಿಯಾಗಿ ಪುರುಷೋತ್ತಮ ನಾಗಪಟ್ಟಣ, ಗೌರವಾಧ್ಯಕ್ಷರಾಗಿ ಪದ್ಮಾ ಓಟಕಜೆ, ಸರ್ವಾನುಮತದಿಂದ ಆಯ್ಕೆಯಾದರು. ಈ ಸಂದರ್ಭದಲ್ಲಿ ಸಂಘದ ಸದಸ್ಯರುಗಳು ನಿಕಟಪೂರ್ವ ಪದಾಧಿಕಾರಿಗಳು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.