Breaking News

ಅರಂತೋಡು : ರಸ್ತೆ ಕಾಮಗಾರಿಗೆ ಗುದ್ದಲಿಪೂಜೆ

Advt_Headding_Middle

ಅರಂತೋಡು ಗ್ರಾಮದ ಪಿಂಡಿಮನೆ, ಚಿಮಾಡು, ಮೋಟೆಗಯ ರಸ್ತೆಗೆ ಸುಮಾರು ೭ಲಕ್ಷ ಅನುದಾನದಲ್ಲಿ ಗುದ್ದಲಿಪೂಜೆ ಡಿ. 28 ರಂದು ನೆರವೇರಿತು. ಬಿ. ಜೆ. ಪಿ. ಸುಳ್ಯ ಮಂಡಲ ಸಮಿತಿಯ ಅಧ್ಯಕ್ಷ ಹರೀಶ್ ಕಂಜಿಪಿಲಿಯವರ ನೇತೃತ್ವದಲ್ಲಿ ಅರಂತೋಡು ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಹರಿಣಿ ದೇರಾಜೆ ಗುದ್ದಲಿಪೂಜೆ ನೆರವೇರಿಸಿದರು.
ಕಾರ್ಯಕ್ರಮದಲ್ಲಿಸುಳ್ಯ ಬಿ. ಜೆ. ಪಿ ಮಂಡಲ ಸಮಿತಿಯ ಕೋಶಾಧಿಕಾರಿ ಶಿವಾನಂದ ಕುಕ್ಕುಂಬಳ, ಅರಂತೋಡು ಪಂಚಾಯತ್ ಉಪಾಧ್ಯಕ್ಷೆ ಕು. ಶ್ವೇತಾ ಅರಮನೆಗಯ, ಮರ್ಕಂಜ ಪಂಚಾಯತ್ ಉಪಾಧ್ಯಕ್ಷ ಗೋವಿಂದ ಅಳವುಪಾರೆ, ಮರ್ಕಂಜ ಸಹಕಾರಿ ಸಂಘದ ಅಧ್ಯಕ್ಷ ಮಹಾಬಲ ಕಟ್ಟಕೋಡಿ, ಸುಳ್ಯ ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷೆ ಶ್ರೀಮತಿ ಪುಷ್ಪ ಮೇದಪ್ಪ, ಮಹಿಳಾ ಮೋರ್ಚಾದ ಪ್ರದಾನ ಕಾರ್ಯದರ್ಶಿ ಶ್ರೀಮತಿ ಗೀತಾಶೇಖರ್, ಮಂಡಲ ಸಮಿತಿ ಸದಸ್ಯೆ ಶ್ರೀಮತಿ ಭಾರತಿ ಪುರುಷೋತ್ತಮ್ ಉಳುವಾರು, ಅರಂತೋಡು ಪಂಚಾಯತ್ ಸದಸ್ಯರಾದ ಶ್ರೀಮತಿ ಸುಜಯ ಲೋಹಿತ್ ಮೇಲಡ್ತಲೆ, ಭವಾನಿ ಚಿಟ್ಟನ್ನೂರು, ಮರ್ಕಂಜ ಪಂಚಾಯತ್‌ನ ಚಿತ್ತರಂಜನ್ ಕೋಡಿ, ಮಾಜಿ ಸದಸ್ಯರಾದ ಆನಂದ ಬಾಣೂರು, ಗುತ್ತಿಗೆದಾರರಾದ ಭವಾನಿಶಂಕರ್ ಅರ್. ಡಿ. ಮತ್ತು ಕುಸುಮಾದರ ಅಡ್ಕಬಳೆ ಹಾಗೂ ಚಿಮಾಡು, ಪಿಂಡಿಮನೆ, ಕುವೆಕಾಡು, ಮೋಟೆಗಯ ಭಾಗದ ನಾಗರಿಕರು ಉಪಸ್ಥಿತರಿದ್ದರು. ಅರಂತೋಡು ಬಿ. ಜೆ. ಪಿ ಶಕ್ತಿ ಕೇಂದ್ರ ಪ್ರಮುಖರಾದ ಕೇಶವ ಅಡ್ತಲೆ ಸ್ವಾಗತಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.