ಹರಿಪ್ರಕಾಶ್ ಯು.ಪಿ. ಗೆ ಪಿಎಚ್.ಡಿ ಪದವಿ

Advt_Headding_Middle
Advt_Headding_Middle

 

ಮಂಗಳೂರು ನಗರದ ವಳಚ್ಚಿಲ್ ನ ಶ್ರೀನಿವಾಸ ಎಂಜಿನಿಯರಿಂಗ್ ಕಾಲೇಜ್ ಇದರ ಎಂಬಿಎ ವಿಭಾಗದ ಪ್ರಾಧ್ಯಾಪಕ ಹರಿಪ್ರಕಾಶ್ ಯು. ಪಿ. ರವರು ಡಾ. ಬೀರಾನ್ ಮೊಯಿದ್ದೀನ್ ಬಿ.ಎಂ ಇವರ ಮಾರ್ಗದರ್ಶನದಲ್ಲಿ ಸಾದರಪಡಿಸಿದ ” ಎ ಕಂಪ್ಯಾರೇಟಿವ್ ಸ್ಟಡಿ ಆಫ್ ಶಾಪಿಂಗ್ ಬಿಹೇವಿಯರ್ ಆಫ್ ಆರ್ಗನೈಜ್ಡ್ ಆಂಡ್ ಅನ್‌ಆರ್ಗನೈಜ್ಡ್ ಗ್ರೋಸರಿ ರಿಟೇಲಿಂಗ್ ಶಾಪರ್ಸ್ ಇನ್ ದಕ್ಷಿಣ ಕನ್ನಡ ಆಂಡ್ ಉಡುಪಿ ಡಿಸ್ಟ್ರಿಕ್ಟ್” ಎಂಬ ಮಹಾಪ್ರಬಂಧಕ್ಕೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯವು  ಪಿ ಎಚ್. ಡಿ (ಡಾಕ್ಟರೇಟ್) ಪದವಿ ನೀಡಿ ಗೌರವಿಸಿದೆ.
ಇವರು ಶ್ರೀಮತಿ ಶಾಂತ ಮತ್ತು ಯು. ಪಿ. ಭಟ್ ಇವರ ಪುತ್ರ. ಮೂಲತಃ ಕಲ್ಲುಗುಂಡಿ, ಸಂಪಾಜೆ ನಿವಾಸಿಗಳಾಗಿದ್ದು ಪ್ರಸ್ತುತ ಉಡುಪಿಯಲ್ಲಿ ನೆಲೆಸಿದ್ದಾರೆ. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಪ್ರಾಥಮಿಕ ಶಾಲೆ, ಕಲ್ಲುಗುಂಡಿಯಲ್ಲಿ ಮುಗಿಸಿ, ನಂತರ ಮಣಿಪಾಲದಲ್ಲಿ ಪದವಿ ಪೂರ್ವ ಶಿಕ್ಷಣ, ಉಪೇಂದ್ರ ಪೈ ಮೆಮೋರಿಯಲ್ ಕಾಲೇಜು, ಉಡುಪಿಯಲ್ಲಿ ಪದವಿ ಹಾಗೂ ಮಹರ್ಷಿ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಕಾಲೇಜು ಬೆಂಗಳೂರಿನಲ್ಲಿ ತಮ್ಮ ಉನ್ನತ ಶಿಕ್ಷಣ ವನ್ನು ಪಡೆದರು. ಜೊತೆಗೆ ಅಣ್ಣಾಮಲೈ ಯೂನಿವರ್ಸಿಟಿ ಯಿಂದ ಎಂಫಿಲ್ ಪದವಿಯನ್ನೂ ಪಡೆದಿರುತ್ತಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.