ಸುಳ್ಯ ಚೆನ್ನಕೇಶವ ದೇವಸ್ಥಾನ ಬ್ರಹ್ಮಕಲಶಾಭಿಷೇಕ

Advt_Headding_Middle
Advt_Headding_Middle

 

ಸೇವೆಯಲ್ಲಿ ತೊಡಗಿಸಿಕೊಂಡವರಿಗೆ ಕೃತಜ್ಞತಾ ಸಭೆ

 

ಸುಳ್ಯ‌ ಶ್ರೀ ಚೆನ್ನಕೇಶವ ದೇವಸ್ಥಾನದ ಬ್ರಹ್ಮಕಲಶಾಭಿಷೇಕ ಹಾಗೂ ನೂತನ ಶಿಲಾಮಯ ದುರ್ಗಾದೇವಿ ಗುಡಿಯಲ್ಲಿ ದೇವಿಯ ಪ್ರತಿಷ್ಠಾಪನೆ ಕಾರ್ಯಕ್ರಮ ಡಿ.21 ರಿಂದ ಡಿ.26 ರವರೆಗೆ ನಡೆದಿದ್ದು, ದೇವರ ಸೇವೆಯಲ್ಲಿ ತೊಡಗಿಸಿಕೊಂಡ ಸ್ವಯಂ‌ಸೇವಕರಿಗೆ ಕೃತಜ್ಞತಾ ಸಭೆ ಇಂದು‌ ದೇವಸ್ಥಾನದಲ್ಲಿ ನಡೆಯಿತು.

ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ರ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಮಾತನಾಡಿದ ಅವರು, ಎಲ್ಲರ ಕೂಡುವಿಕೆ ಸಹಕಾರದಿಂದ ಬ್ರಹ್ಮಕಲಶಾಭಿಷೇಕ ಯಶಸ್ವಿಯಾಗಿ ನಡೆದಿದೆ. ಈ ಕಾರ್ಯ ನಡೆಸಲು ನಮಗೆ ಸಮಯಾವಕಾಶ ಸ್ವಲ್ಪವೇ ಸಿಕ್ಕಿತು. ಆ ಸಮಯದಲ್ಲಿಯೂ ನೀವೆಲ್ಲರು ಇದ್ದು‌, ವೈದಿಕ ಸೇವೆಯಿಂದ ಹಿಡಿದು ಎಲ್ಲ ಸೇವೆಯಲ್ಲಿಯೂ ಯಶಸ್ವಿ ಕಂಡಿದ್ದೇವೆ. ಇದರಲ್ಲಿ ತೊಡಗಿಸಿಕೊಂಡ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದ ಅವರು ಮುಂದೆಯೂ ತಮ್ಮೆಲ್ಲರ ಸಹಕಾರ ಬೇಕಾಗಿದೆ” ಎಂದು ಹೇಳಿದರು.

ದೇವಸ್ಥಾನದ ಆಡಳಿತ‌ ಮೊಕ್ತೇಸರ ಡಾ.ಹರಪ್ರಸಾದ್ ತುದಿಯಡ್ಕರು ಕೂಡಾ ಕೃತಜ್ಞತೆ ಸಲ್ಲಿಸಿದರು.

ಸದಸ್ಯರುಗಳಾದ ಎಂ.ಮೀನಾಕ್ಷಿ ಗೌಡ, ಎನ್.ಜಯಪ್ರಕಾಶ್ ರೈ, ರಮೇಶ್ ಬೈಪಡಿತ್ತಾಯ, ಆರ್ಥಿಕ ಸಮಿತಿ ಸಂಚಾಲಕ ಎಂ.ಎನ್. ಶ್ರೀಕೃಷ್ಣ, ದಾಮೋದರ ನಾಕೋರ್ಡು, ಬ್ರಹ್ಮಕಲಶಾಭಿಷೇಕ ಸಮಿತಿ‌ ಉಪಾಧ್ಯಕ್ಷ ಎಂ.ವೆಂಕಪ್ಪ ಗೌಡ, ನ.ಪಂ.‌ಸದಸ್ಯೆ ಕಿಶೋರಿ ಶೇಟ್ ವೇದಿಕೆಯಲ್ಲಿ ಇದ್ದರು.

ಆರ್ಥಿಕ ಸಮಿತಿಯ ಸಂಚಾಲಕರುಗಳಾದ ಶ್ರೀಕೃಷ್ಣ ಭಾ್, ದಾಮೋದರ ನಾಕೋಡು, ವೈದಿಕ ಸಮಿತಿಯ ಸಂಚಾಲಕ ಕೃಪಾಶಂಕರ್ ತುದಿಯಡ್ಕ, ಕಾರ್ಯಾಲಯ ಸಮಿತಿಯ ಸಂಚಾಲಕ ಬುದ್ಧ ಜಿ ನಾಯ್ಕ್, ಆಹಾರ ಸಮಿತಿಯ ಸಂಚಾಲಕ ಬೂಡು ರಾಧಾಕೃಷ್ಣ ರೈ, ಸ್ವಯಂ‌ಸೇವಾ ಸಮಿತಿ‌ಯ ಸಂಚಾಲಕ ಚಿದಾನಂದ ವಿದ್ಯಾನಗರ, ಸಭಾ ಮತ್ತು ಸಾಂಸ್ಕೃತಿಕ ಸಮಿತಿ ರಾಜು ಪಂಡಿತ್, ಕೆ.ಟಿ.‌ವಿಧ್ವನಾಥ್, ಉಗ್ರಾಣ ಸಮಿತಿ ಸಂಚಾಲಕ ಗೋಪಾಲಕೃಷ್ಣ ಕೆ.ಎಸ್., ಪ್ರಚಾರ ಸಮಿತಿ ‌ಸಂಚಾಲಕ ಗಂಗಾಧರ ಮಟ್ಟಿ, ಹಸಿರುವಾಣಿ ಸಮಿತಿ‌ ಸಂಚಾಲಕ ‌ಮಧುಕಿರಣ್, ಮಹಿಳಾ ಸಮಿತಿಯ ಸಂಚಾಲಕಿ ಶೀಲಾ ಅರುಣ್ ಕುರುಂಜಿ, ಅಲಂಕಾರ ಸಮಿತಿ ಸಂಚಾಲಕ ಲೋಕೇಶ್ ಕೆರೆಮೂಲೆ ಅನಿಸಿಕೆ ವ್ಯಕ್ತಪಡಿಸಿದರು. ಸಭೆಯಲ್ಲಿ ‌ಬ್ರಹ್ಮಕಲಶಾಭಿಷೇಕದಲ್ಲಿ ತೊಡಗಿಸಿಕೊಂಡ ಹಲವರು ಉಪಸ್ಥಿತರಿದ್ದರು. ಜೀರ್ಣೋದ್ಧಾರ ಸಮಿತಿ‌ ಸದಸ್ಯೆ ‌ಎಂ.ಮೀನಾಕ್ಷಿ ವಂದಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.