ಕಮಿಲಡ್ಕ ದುರ್ಗಾದೇವಿ ಮಂದಿರ, ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ನಾಗದೇವರ ಬಿಂಬ ಪ್ರತಿಷ್ಠಾ ಬ್ರಹ್ಮಕಲಶೋತ್ಸವ

Advt_Headding_Middle
Advt_Headding_Middle

 

 

ಉಬರಡ್ಕ ಮಿತ್ತೂರು ಗ್ರಾಮದ ಕಮಿಲಡ್ಕ ಉದಯಗಿರಿ ಶ್ರೀ ದುರ್ಗಾದೇವಿ ಮಂದಿರ, ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಶ್ರೀ ನಾಗದೇವರ ಬಿಂಬ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಡಿ.28 ಮತ್ತು 29 ರಂದು ವೇದಮೂರ್ತಿ ಕುಂಬ್ಳೆ ಗಣೇಶ್ ತಂತ್ರಿಯವರ ನೇತೃತ್ವದಲ್ಲಿ ಜರುಗಿತು.

ಡಿ. 28ರಂದು ಸಂಜೆ ತಂತ್ರಿಗಳ ಆಗಮನವಾಗಿ ದೀಪ ಪ್ರತಿಷ್ಠೆ, ಮಹಾ ಪ್ರಾರ್ಥನೆ ಯಾಗಿ ಪುಣ್ಯಹವಾಚನೆ, ಸ್ಥಳ ಶುದ್ದಿ, ಸುದರ್ಶನ ಹೋಮ, ಭಾದಾ ಉಚ್ಚಾಟನೆ, ರಕ್ಷೋಘ್ನ ಹೋಮ, ವಾಸ್ತು ಹೋಮ ವಾಸ್ತು ಹೋಮ, ವಾಸ್ತು ಬಲಿ, ಪ್ರಕಾರ ಬಲಿ, ದಿಕ್ವಾಲ ಬಲಿ, ಬಿಂಬ ಶುದ್ದಿ, ಆದಿವಾಸಾಧಿಗಳ ಕಲಶ ಪ್ರತಿಷ್ಠೆ, ಪ್ರಸಾದ ವಿತರಣೆ ಯಾಗಿ ಅನ್ನಸಂತರ್ಪಣೆಯಾಯಿತು. ಮರುದಿನ ಪ್ರಾತಃಕಾಲ ಗಣಪತಿ ಹೋಮ, ಪಂಚಗವ್ಯ ಹೋಮ, ಪ್ರತಿಷ್ಠಾ ಹೋಮ ನಡೆಯಿತು. ಬೆಳಗ್ಗೆ 6.30 ರಿಂದ 7.30 ರ ಧನುಲಗ್ನ ಶುಭಮುಹೂರ್ತದಲ್ಲಿ ಶ್ರೀ ನಾಗಬಿಂಬ ಪ್ರತಿಷ್ಠೆ, ಪ್ರಾಣ ಪ್ರತಿಷ್ಠೆಯಾಗಿ ಬ್ರಹ್ಮಕಲಶಾಭಿಷೇಕಚಾಯಿತು.

ಬಳಿಕ ನಾಗತಂಬಿಲ ವಾಗಿ ಮಹಾಪೂಜೆ ನಡೆದು ಪ್ರಸಾದ ವಿತರಣೆಯಾಯಿತು. ಆಗಮಿಸಿದ ಸಾರ್ವಜನಿಕ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನೆರವೇರಿತು. ಕ್ಷೇತ್ರದ ಶ್ರೀದೇವಿಯ ಪಾತ್ರಿ ರವಿಪ್ರಸಾದ್ ಕಮಿಲಡ್ಕ, ವಿಶ್ವನಾಥ ಪೂಜಾರಿ ಕಮಿಲಡ್ಕ, ವಿಷ್ಣುಮೂರ್ತಿ ದೈವದ ಪಾತ್ರಿ ರಾಮ ಮಣಿಯಾಣಿ ಆಲೆಟ್ಟಿ, ಗುಳಿಗ ದೈವದ ಪಾತ್ರಿ ಲೋಕೇಶ್ ಕೋಟ್ಯಾನ್,‌ ಗುಳಿಗ ದೈವದ ಸೇವಕ ಶಶಿಧರ ಕಮಿಲಡ್ಕ, ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು‌ ಸಹಕರಿಸಿದರು.
ಊರಿನ ಪರಊರಿನ ಭಕ್ತಾದಿಗಳು ಆಗಮಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.