Breaking News

ಸುಳ್ಯ ಚೆನ್ನಕೇಶವ ದೇವಸ್ಥಾನದಲ್ಲಿ ಊಟ ನೀಡುವ ವಿಚಾರ

Advt_Headding_Middle

 

ಕೃತಜ್ಞತಾ ಸಭೆಯಲ್ಲಿ ಭಕ್ತರ ಅಭಿಪ್ರಾಯಕ್ಕೆ ಆಡಳಿತ ಸಮಿತಿ ಸ್ಪಂದನೆ

ಸುಳ್ಯ ಚೆನ್ನಕೇಶವ ದೇವಸ್ಥಾನಕ್ಕೆ ಮಧ್ಯಾಹ್ನ ಬಂದ ಭಕ್ತರಿಗೆ ಊಟ ಇಲ್ಲವೆಂದು ಕಳುಹಿಸುತ್ತಾರೆನ್ನುವ ವಿಚಾರ ಭಕ್ತರು ಪ್ರಸ್ತಾಪಿಸಿದ ಹಾಗೂ “ಈಗಿನ ಪರಿಸ್ಥಿತಿಗೆ ತಕ್ಕುದಾದ ವ್ಯವಸ್ಥೆ ನಮ್ಮಲ್ಲಿದೆ. ಮುಂದೆ ತಾವು ಹೇಳಿರುವಂತೆ ಮಾಡಲು ಪ್ರಯತ್ನ ಮಾಡಲಾಗುವುದು ಎಂದು ದೇವಸ್ಥಾನದ ಆಡಳಿತ ಮೊಕ್ತೇಸರರು ಸ್ಪಂದನೆ ನೀಡಿದ ಘಟನೆ ಕೃತಜ್ಞತೆ ಸಮರ್ಪಣಾ ಸಭೆಯಲ್ಲಿ ನಡೆಯಿತು.

ಸುಳ್ಯ ಚೆನ್ನಕೇಶವ ದೇವಸ್ಥಾನದ ಬ್ರಹ್ಮಕಲಶಾಭಿಷೇಕದಲ್ಲಿ ದುಡಿದವರಿಗೆ ಕೃತಜ್ಞತಾ ಸಭೆ ಇಂದು ದೇವಸ್ಥಾನದಲ್ಲಿ ನಡೆಯಿತು.

ಬ್ರಹ್ಮಕಲಶಾಭಿಷೇಕ ಯಶಸ್ಸಿನ ಕುರಿತು ಅಭಿಪ್ರಾಯ ಸಲ್ಲಿಕೆಯ ಸಂದರ್ಭದಲ್ಲಿ ಬೂಡು ರಾಧಾಕೃಷ್ಣ ರೈಯವರು ” ದೇವಸ್ಥಾನದಲ್ಲಿ ಮಧ್ಯಾಹ್ನ ಬಂದ ಭಕ್ತರಿಗೆ ಊಟ ಸಿಗುವುದಿಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಮುಂದೆ ಈ ರೀತಿಯ ಮಾತು ಕೇಳಿ ಬರಲು ನಾವು ಅವಕಾಶ ನೀಡದೆ ಎಲ್ಲರಿಗೂ ಊಟ ಸಿಗುವಂತಾಗಬೇಕು” ಎಂದು‌ ಹೇಳಿದರು. ಲೋಕೇಶ್ ಕೆರೆಮೂಲೆಯವರು ಕೂಡಾ ಇದೇ ರೀತಿಯ ಅಭಿಪ್ರಾಯ ಮಂಡಿಸಿದರು.

ಆಗ ಮಾತನಾಡಿದ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ.ಹರಪ್ರಸಾದ್ ತುದಿಯಡ್ಕರು, “ಈಗ ನಮ್ಮಲ್ಲಿರುವ ವ್ಯವಸ್ಥೆಗೆ ತಕ್ಕುದಾದ ರೀತಿಯಲ್ಲಿ ಅನ್ನದಾನ ನಡೆಯುತ್ತಿದೆ. ಬೆಳಗ್ಗೆ 11 ಗಂಟೆ ಒಳಗೆ ಬಂದು ಚೀಟಿ ತೊಗೊಂಡವರಿಗೆ, ಪೂಜೆ ಮಾಡಿಸಿದವರಿಗೆ ಊಟ ಇಲ್ಲವೆಂದು ಹೇಳುವುದೇ ಇಲ್ಲ. ಆದರೆ ನಡೆಯ ಬಾಗಿಲು ಹಾಕಿದ ಮೇಲೆ ಕೆಲವರು ಬಂದವರಿಗೆ ಊಟ ಸಿಕ್ಕಿರಲಿಕ್ಕಿಲ್ಲ. ಮಧ್ಯಾಹ್ನ 1 ಗಂಟೆ ಕಳೆದು ಬಂದವರಿಗೆ ಸಡನ್ ಆಗಿ ಊಟದ ವ್ಯವಸ್ಥೆ ಮಾಡುವುದು‌ ಕಷ್ಟಸಾಧ್ಯ. ಯಾಕೆಂದರೆ ಅನ್ನ ಮಾಡುವವರು ಅದಕ್ಕೆ ತಯಾರಾಗಬೇಕಲ್ಲವೆ? ನಮಗೆ ಮೊದಲೇ ಸೂಚನೆ ನೀಡಿದರೆ ಊಟ ಕೊಟ್ಟೇ ಕೊಡುತ್ತೇವೆ” ಎಂದು ಹೇಳಿದರು.

“ಪ್ರತೀ ದಿನ ದೇವಸ್ಥಾನದಲ್ಲಿ 100 ಮಂದಿಗಾದರೂ ಊಟದ ವ್ಯವಸ್ಥೆ ಕಲ್ಪಿಸಿ” ಎಂದು ಬೂಡು ರಾಧಾಕೃಷ್ಣ ‌ ರೈ ಹೇಳಿದರೆ, ” ಸುಳ್ಯದ ಶಾಲೆಗಳ ಬಡ ಮಕ್ಕಳು ಮಧ್ಯಾಹ್ನ ಬರುವಾಗ ಅವರಿಗೆ ಊಟ ಇಲ್ಲ ಎಂದು ಹೇಳುವ ಸ್ಥಿತಿ ಆಗಬಾರದು” ಎಂದು ಹೇಮಂತ್ ಕಂದಡ್ಕರು ಹೇಳಿದರು. ” ಮಧ್ಯಾಹ್ನ ಊಟಕ್ಕೆ ಬಂದ ಮಕ್ಕಳನ್ನು ನನ್ನ ಎದುರೇ‌ ವಾಪಸ್ ಕಳುಹಿಸಿದ್ದನ್ನು ನೋಡಿದ್ದೇನೆ” ಎಂದು ಲತಾ ರೈ ಬೂಡು ಅಭಿಪ್ರಾಯ ವ್ಯಕ್ತ ಪಡಿಸಿದರು.

“ಬಡ ಮಕ್ಕಳು ಪ್ರತೀ ದಿನ ಬರುವುದಿದ್ದರೆ ಎಷ್ಟು ಎಂದು ಲೆಕ್ಕ ಕೊಟ್ಟರೆ ಅವರಿಗೆ ವ್ಯವಸ್ಥೆ ಮಾಡಬಹುದು. ಶನಿವಾರ ದಿನ ಮಕ್ಕಳು ಹೆಚ್ಚು ಬರುವುದರಿಂದ ಅವರಿಗೆ ಊಟದ ವ್ಯವಸ್ಥೆ ಮಾಡುತ್ತಿದ್ದೇವೆ. ಲೆಕ್ಕ ಸಿಗದೇ ಏಕಾಏಕಿ ಬಂದವರಿಗೆ ಮಾತ್ರ ಸಮಸ್ಯೆ. ನಿಮ್ಮೆಲ್ಲರ ಅಭಿಪ್ರಾಯ ದಂತೆ ಮುಂದಿನ ದಿನದಲ್ಲಿ ವ್ಯವಸ್ಥೆ ಕಲ್ಪಿಸಲು ಪ್ರಯತ್ನ ಮಾಡಲಾಗುವುದು” ಎಂದು ಡಾ.ಹರಪ್ರಸಾದರು ಹೇಳಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.