Breaking News

ಆಲೆಟ್ಟಿ ಪಂಚಾಯತ್ ಸಾಮಾನ್ಯ ಸಭೆ

Advt_Headding_Middle

 

 

ಆಲೆಟ್ಟಿ ಗ್ರಾಮ ಪಂಚಾಯತ್ ನ ಸಾಮಾನ್ಯ ಸಭೆಯು ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪುಷ್ಪಾವತಿ ಕುಡೆಕಲ್ಲು ರವರ ಅಧ್ಯಕ್ಷತೆಯಲ್ಲಿ ಡಿ. 29ರಂದು ಪಂಚಾಯತ್ ಸಭಾಭವನದಲ್ಲಿ ನಡೆಯಿತು.
ಕೆ.ಎಫ್.ಡಿ.ಸಿ. ಕಾರ್ಮಿಕರಿಗೆ ಮನೆ ನಿವೇಶನಕ್ಕೆ ಸ್ಥಳ ಕಾದಿರಿಸಬೇಕು ಎಂಬ‌ ಬೇಡಿಕೆ ಇದೆ.‌ಈ ಕುರಿತು ಪಂಚಾಯತ್ ನಿಂದ ಬೇರೆ ಸ್ಥಳ‌ ಮೀಸಲಿಡಲು ಸಾಧ್ಯವಿದೆಯೇ ಎಂದು ಕಮಲಾರವರು ಕೇಳಿದರು.
ಈಗಾಗಲೇ ಗ್ರಾಮದಲ್ಲಿ ಎಲ್ಲಾ ವರ್ಗದವರಿಗೆ 4.80 ಎಕ್ರೆ ಜಾಗ ನಿವೇಶನಕ್ಕಾಗಿ ಕಾದಿರಿಸಲಾಗಿದೆ. ಕಾರ್ಮಿಕರಿಗೆ ಪ್ರತ್ಯೇಕ ಇಡಲು ಬರುವುದಿಲ್ಲ. ಈ ಬಗ್ಗೆ ತಹಶಿಲ್ದಾರವರಿಗೆ ಮನವಿ ಸಲ್ಲಿಸಬಹುದು ಎಂದು ಪಿಡಿಒ ತಿಳಿಸಿದರು.
ಕೊರೋನಾ ಸಂದರ್ಭದಲ್ಲಿ ಆದ ಖರ್ಚುವೆಚ್ಚಗಳ ಬಗ್ಗೆ ವಿವರವನ್ನು ಸಭೆಗೆ ಮಂಡಿಸಲಾಯಿತು. ನೀರಿನ ವ್ಯವಸ್ಥೆಯ ಬಗ್ಗೆ ಆಯಾಯ ವಾರ್ಡಿನಲ್ಲಿ ಪಂಪು ಆಪರೇಟರ್ ಗಳನ್ನು ಕರೆಸಿ ಸಮಯಕ್ಕೆ ‌ಸರಿಯಾಗಿ ನೀರು ಬಿಡುವಂತೆ ಸೂಚಿಸಬೇಕು. ಬೀದಿ ದೀಪದ ವ್ಯವಸ್ಥೆ ಸರಿಪಡಿಸಬೇಕು ಗ್ರಾಮಸಭೆಗೆ ಮೊದಲು ನಮ್ಮ ವಾರ್ಡಿಗೆ ಬೀದಿ ದೀಪಗಳನ್ನು ಅಳವಡಿಸಿಕೊಳ್ಳುವ ವ್ಯವಸ್ಥೆ ಆಗಬೇಕೆಂದು ಚಂದ್ರಕಾಂತ ನಾರ್ಕೋಡು ಒತ್ತಾಯಿಸಿದರು. ನಮ್ಮ ಪಂಚಾಯತಿಗೆ ಪೂರ್ಣಾವಧಿಯ ಪಿಡಿಒ ಬೇಕೆಂದು ಬೇಡಿಕೆಯನ್ನು ಸಲ್ಲಿಸುವ ಬಗ್ಗೆ ತೀರ್ಮಾನಿಸಲಾಯಿತು. ಪಿಂಚಣಿದಾರರಿಗೆ ದಾಖಲೆ ಸಲ್ಲಿಸುವ ವ್ಯವಸ್ಥೆಯನ್ನು ಸ್ಥಳೀಯ ಅಂಗನವಾಡಿ ಕೇಂದ್ರಗಳಿಂದ ಪಡೆದುಕೊಳ್ಳುವ ವ್ಯವಸ್ಥೆ ಮಾಡಬೇಕು ಎಂದು ರತೀಶನ್ ರವರು ತಿಳಿಸಿದರು. ಆಲೆಟ್ಟಿ ಯಿಂದ ಬಡ್ಡಡ್ಕಕ್ಕೆ ಸಂಚರಿಸುವ ರಸ್ತೆ ತೀರಾ ಹದಗೆಟ್ಟು ಹೋಗಿದೆ. ನಾವು ಟಿಪ್ಪರ್ ನಲ್ಲಿ ಮಣ್ಣುಹಾಕಿ ದುರಸ್ತಿ ಪಡಿಸಿದ್ದೇವೆ. ಬಡ್ಡಡ್ಕ ದಲ್ಲಿ ಭುವನೇಶ್ವರ ಎಂಬವರು ತಮ್ಮ ವ್ಯಾನನ್ನು ರಸ್ತೆಯಲ್ಲಿ ತೊಳೆಯುವ ಮೂಲಕ ಕೆಸರು ಮಾಡುತ್ತಿದ್ದಾರೆ. ಪಂಚಾಯತ್ ನಿಂದ ಅವರಿಗೆ ಸೂಚನೆ ನೀಡಬೇಕೆಂದು ಸತ್ಯ ಕುಮಾರ ಪ್ರಸ್ತಾಪಿಸಿದರು. ಗ್ರಾಮಸಭೆಗೆ ಎಲ್ಲಾ ಇಲಾಖೆಯ ಅಧಿಕಾರಿಗಳು ಕಡ್ಡಾಯವಾಗಿ ಬರುವಂತಾಗಬೇಕು ಎಂದು ಸದಸ್ಯರು ಪ್ರಸ್ತಾಪಿಸಿದರು. ಎಸ್ಕ್ರೋ ಖಾತೆಗೆ 12.79 ಲಕ್ಷ ಅನುದಾನ ಅನುಮೋದನೆಗೊಂಡಿದೆ. ಸ್ವಂತ ನಿಧಿಯನ್ನು ಸೇರಿಸಿಕೊಂಡು ಕ್ರಿಯಾಯೋಜನೆಯನ್ನು ಮಾಡಿದರೆ ಒಳ್ಳೆಯದೆಂದು ಸುದೇಶ್ ಅರಂಬೂರು ತಿಳಿಸಿದರು. 12.79 ರಲ್ಲಿ 10 ಲಕ್ಷವನ್ನು ಸದಸ್ಯ ರಿಗೆ ಮತ್ತು ಉಳಿದ ಮೊತ್ತ ಅಧ್ಯಕ್ಷರಿಗೆ ಮೀಸಲಿಡಬೇಕು ಎಂದು ದಿನೇಶ್ ಕಣಕ್ಕೂರು ಅಭಿಪ್ರಾಯ ವ್ಯಕ್ತಪಡಿಸಿದರು. ನಮ್ಮ ಪಂಚಾಯತ್ ಗೆ ಇನ್ನು ಕಸ ‌ವಿಲೇವಾರಿ ವಾಹನ ಖರೀದಿ ಯಾಕೆ‌ ಮಾಡಲಿಲ್ಲ ಎಂದು ಸದಸ್ಯರು ಪ್ರಶ್ನಿಸಿದರು. ವಾರ್ಡ್ ಸಭೆಗಳ ಹಾಗೂ ಗ್ರಾಮ ಸಭೆ ನಡೆಸುವ ದಿನವನ್ನು ನಿಗದಿಪಡಿಸಲಾಯಿತು. ಉಪಾಧ್ಯಕ್ಷ ದಿನೇಶ್ ಕಣಕ್ಕೂರು, ಪಿಡಿಓ ಕೀರ್ತಿಪ್ರಸಾದ್, ಕಾರ್ಯದರ್ಶಿ ಸೃಜನ್ ಎ.ಜಿ ವೇದಿಕೆಯಲ್ಲಿದ್ದರು. ಸದಸ್ಯರುಗಳಾದ ಮುತ್ತಪ್ಪ ಪೂಜಾರಿ ಮೊರಂಗಲ್ಲು, ಸತ್ಯಕುಮಾರ್ ಆಡಿಂಜ, ಚಂದ್ರಕಾಂತ ನಾರ್ಕೋಡು, ಧರ್ಮ ಪಾಲ ಕೊಯಿಂಗಾಜೆ, ಶಿವಾನಂದ ರಂಗತಮಲೆ, ಸುದೇಶ್ ಅರಂಬೂರು, ರತೀಶನ್ ಅರಂಬೂರು, ಶಾಂತಪ್ಪ ಬಡ್ಡಡ್ಕ, ಸತ್ಯಪ್ರಸಾದ್ ಗಬ್ಬಲ್ಕಜೆ, ವೇದಾವತಿ ನೆಡ್ಚಿಲು, ವೀಣಾ ಆಲೆಟ್ಟಿ, ಶಶಿಕಲಾ ದೋಣಿಮೂಲೆ, ಮೀನಾಕ್ಷಿ ಕುಡೆಕಲ್ಲು, ಶಂಕರಿ ಕೊಲ್ಲರಮೂಲೆ, ಅನಿತಾ ಅರಂಬೂರು, ಭಾಗಿರಥಿ ಪತ್ತುಕುಂಜ,ಕಮಲಾ ನಾಗಪಟ್ಟಣ,ಕುಸುಮ ಬಿಲ್ಲರಮಜಲು ಉಪಸ್ಥಿತರಿದ್ದರು. ಪಂ.ಸಿಬ್ಬಂದಿಯವರು ಸಹಕರಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.