ಜ.14 -16 : ರಂಗಮನೆಯಲ್ಲಿ ಶಾಸ್ತ್ರೀಯ ಸಂಗೀತೋತ್ಸವ

Advt_Headding_Middle
Advt_Headding_Middle

ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರ ಸುಳ್ಯ ಇದರ ಆಶ್ರಯದಲ್ಲಿ ಜನವರಿ 14,15,16 ರಂದು ಪ್ರತಿದಿನ ಸಂಜೆ 6.00 ರಿಂದ ರಾತ್ರಿ 8.30 ರ ವರೆಗೆ ರಂಗಮನೆಯ ಅಡಿಟೋರಿಯಂನಲ್ಲಿ ‘ ಶಾಸ್ತ್ರೀಯ ಸಂಗೀತೋತ್ಸವ ‘ ವನ್ನು ಏರ್ಪಡಿಸಲಾಗಿದೆ.
ಜ.14 ರಂದು ಹಿರಿಯ ಸಾಂಸ್ಕೃತಿಕ ಕಲಾ ಪೋಷಕರಾದ ಶ್ರೀಮತಿ ಕಲಾವತಿ ವೆಂಕಟಕೃಷ್ಣಯ್ಯ ಸಂಗೀತೋತ್ಸವವನ್ನು ಉದ್ಘಾಟಿಸಲಿದ್ದಾರೆ. ವಿದುಷಿ ಶಂಕರಿಮೂರ್ತಿ ಬಾಳಿಲ, ಗಾಯಕ ಕೆ.ಆರ್. ಗೋಪಾಲಕೃಷ್ಣ ಮತ್ತು ಶಿಕ್ಷಕಿ ಪೂರ್ಣಿಮ ಮಡಪ್ಪಾಡಿ ಶುಭಾಶಂಸನೆಗೈಯ್ಯಲಿದ್ದಾರೆ.
ಬಳಿಕ ಕುಂದಾಪುರದ ವಿದ್ವಾನ್ ರಾಘವೇಂದ್ರ ಉಪಾಧ್ಯಾಯ ಬವಳಾಡಿ ಇವರಿಂದ ಹಿಂದೂಸ್ತಾನೀ ಶಾಸ್ತ್ರೀಯ ಸಂಗೀತ ಕಚೇರಿ ನಡೆಯಲಿದೆ. ತಬಲದಲ್ಲಿ ವಿದ್ವಾನ್ ಶ್ರೀದತ್ತ ಪ್ರಭು ಹಾಗೂ ಹಾರ್ಮೋನಿಯಂನಲ್ಲಿ ವಿದ್ವಾನ್ ಶ್ರೀ ಹೇಮಂತ್ ಕುಮಾರ್ ಮಂಗಳೂರು ಸಹಕರಿಸಲಿದ್ದಾರೆ.
ಜ.15 ರಂದು ಮಹಾಬಲ – ಲಲಿತ ಕಲಾ ಸಭಾ ಪುತ್ತೂರು ಇದರ ಆಡಳಿತ ನಿರ್ದೇಶಕರಾದ ಡಾ.ಶ್ರೀಪ್ರಕಾಶ್ ಬಿ.ಇವರು ದೀಪ ಪ್ರಜ್ವಲನ ಮತ್ತು ಸಿಎ ಗಣೇಶ್ ಭಟ್ ಪಿ. ಶುಭಾಶಂಸನೆ ಗೈಯ್ಯಲಿದ್ದಾರೆ.
ನಂತರ ವಿದ್ವಾನ್ ಅಮೃತ್ ನಾರಾಯಣ ಚೆನ್ನೈ ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ನಡೆಯಲಿದೆ. ವಯಲಿನ್ ವಿದ್ವಾನ್ ಗೋಕುಲ ವಿ.ಎಸ್., ಮೃದಂಗ ವಿದ್ವಾನ್ ಪುತ್ತೂರು ನಿಕ್ಷಿತ್,ಘಟಂನಲ್ಲಿ ವಿದ್ವಾನ್ ಉತ್ತಮ್ ಶಾಂತಾರಾಜು ಬೆಂಗಳೂರು ಇವರು ಸಾಥ್ ನೀಡಲಿದ್ದಾರೆ.
ಜ.16 ರಂದು ಪ್ರಸಿದ್ಧ ಹಿಂದೂಸ್ತಾನೀ ಗಾಯಕಿ ಸುರಮಣಿ ಮಹಾಲಕ್ಷ್ಮೀ ಶೆಣೈ ಕಾರ್ಕಳ ಇವರು ದೀಪ ಪ್ರಜ್ವಲನ ಹಾಗೂ ಸಾಹಿತಿ ಕುಮಾರಸ್ವಾಮಿ ತೆಕ್ಕುಂಜ ಇವರು ಶುಭಾಶಂಸನೆ ಗೈಯ್ಯಲಿದ್ದಾರೆ.
ಬಳಿಕ ಹೊನ್ನಾವರದ ವಿದ್ವಾನ್ ಶ್ರೀಧರ ಹೆಗಡೆ ಕಲಬಾಗ ಇವರಿಂದ ಹಿಂದೂಸ್ತಾನೀ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಲಿದೆ. ತಬಲದಲ್ಲಿ ಭಾರವಿ ದೇರಾಜೆ ಮತ್ತು ಹಾರ್ಮೋನಿಯಂನಲ್ಲಿ ಶಶಿಕಿರಣ್ ಮಣಿಪಾಲ ಸಹಕರಿಸಲಿದ್ದಾರೆ.
ಸಂಗೀತ ಪ್ರಿಯರಿಗೆ ಈ ಕಾರ್ಯಕ್ರಮಕ್ಕೆ ಉಚಿತ ಪ್ರವೇಶ ವಾಗಿರುತ್ತದೆ ಹಾಗೂ ನಿಗಧಿತ ಸಮಯಕ್ಕೆ ಕಾರ್ಯಕ್ರಮವು ಆರಂಭವಾಗಿ ಮುಕ್ತಾಯವಾಗಲಿದ್ದು, ಕೋವಿಡ್ ನಿಯಮ ಪಾಲನೆ ಕಡ್ಡಾಯವಾಗಿರುತ್ತದೆ ಎಂದು ರಂಗಮನೆ ಅಧ್ಯಕ್ಷ ಜೀವನ್ ರಾಂ ಸುಳ್ಯ ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.