ಹಾಲೆಮಜಲು : ಆದರ್ಶ ಯೂತ್ ಕ್ಲಬ್ ನ ನೂತನ ಪದಾಧಿಕಾರಿಗಳ ಆಯ್ಕೆ

Advt_Headding_Middle
Advt_Headding_Middle

 

ಪದಗ್ರಹಣ ಸಮಾರಂಭ

ಹಾಲೆಮಜಲು ಆದರ್ಶ ಯೂತ್ ಕ್ಲಬ್ ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಡಿ. 29ರಂದು ವೆಂಕಟೇಶ್ವರ ಸಭಾಭವನದಲ್ಲಿ ನಡೆಯಿತು. ಕ್ಲಬ್ ಅಧ್ಯಕ್ಷ ಪುನೀತ್ ಗುಡ್ಡೆಮನೆ ಅಧ್ಯಕ್ಷತೆ ವಹಿಸಿದ್ದರು. ಸುಳ್ಯ ಯುವಜನ ಸಂಯುಕ್ತ ಮಂಡಳಿಯ ನಿರ್ದೇಶಕ ಸತೀಶ್ ಮೂಕಮಲೆ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು. ಪೂರ್ವಾಧ್ಯಕ್ಷ ಕಿರಣ್ ಬುಡ್ಲೆಗುತ್ತು ನೂತನ ಪದಾಧಿಕಾರಿಗಳಿಗೆ ಶುಭಹಾರೈಸಿದರು.

ಗೌರವಾಧ್ಯಕ್ಷರಾಗಿ ಪುನೀತ್ ಗುಡ್ಡೆಮನೆ, ನೂತನ ಅಧ್ಯಕ್ಷರಾಗಿ ದಿನೇಶ್ ಹಾಲೆಮಜಲು, ಉಪಾಧ್ಯಕ್ಷರಾಗಿ ಅಶ್ವತ್ಥ್ ಚೆಮ್ನೂರು, ಕಾರ್ಯದರ್ಶಿಯಾಗಿ ನವೀನ್ ಗುಡ್ಡೆಮನೆ, ಖಜಾಂಜಿಯಾಗಿ ಹರಿಪ್ರಸಾದ್ ಕೆ.ವಿ. ಇವರುಗಳನ್ನು ಆಯ್ಕೆ ಮಾಡಲಾಯಿತು. ನಂತರ ಸುದ್ದಿ ಡಿಜಿಟಲ್ ಸೇವಾ ಕೇಂದ್ರದ ಸಹಯೋಗದಲ್ಲಿ ಕ್ಲಬ್ ನ ಸದಸ್ಯರಿಗೆ ಹಾಗೂ ಊರಿನ ನಾಗರಿಕರಿಗೆ ಸರಕಾರದ ಯೋಜನೆಯಾಗಿರುವ ಇ ಶ್ರಮ್ ಕಾರ್ಡ್ ನೋಂದಾವಣೆ ಕಾರ್ಯಕ್ರಮ ಮಾಡಲಾಯಿತು. ಈ ಸಂದರ್ಭದಲ್ಲಿ ಕ್ಲಬ್ ನ ಗೌರವ ಸಲಹೆಗಾರರು, ಪೂರ್ವಾಧ್ಯಕ್ಷರುಗಳು, ಸದಸ್ಯರುಗಳು, ಊರ ನಾಗರಿಕರು ಉಪಸ್ಥಿತರಿದ್ದರು. ಸತೀಶ್ ಬೊಂಬುಳಿ ಸ್ವಾಗತಿಸಿ, ಹರಿಶ್ಚಂದ್ರ ಕುಳ್ಳಂಪಾಡಿ ವಂದಿಸಿದರು.
( ವರದಿ ಡಿ.ಎಚ್.)

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.