Breaking News

ಶುದ್ಧ ಕುಡಿಯುವ ನೀರಿನ ಕುರಿತು ಸಚಿವರ ನೇತೃತ್ವದಲ್ಲಿ ಸಭೆ ಕರೆಯದಿರುವುದಕ್ಕೆ ನ.ಪಂ. ಸಾಮಾನ್ಯ ಸಭೆಯಲ್ಲಿ ವಿಪಕ್ಷ ಆಕ್ಷೇಪ

Advt_Headding_Middle

 

ಸಚಿವರ ನೇತೃತ್ವದಲ್ಲೇ ಸಭೆ ; ಸಾರ್ವಜನಿಕರಿಗೂ ಆಹ್ವಾನ – ಅಧ್ಯಕ್ಷರ ಭರವಸೆ

ನಗರ ವ್ಯಾಪ್ತಿಯಲ್ಲಿ ಶುದ್ಧ ಕುಡಿಯುವ ನೀರಿನ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಈ ಕುರಿತು ಸಚಿವರ ನೇತೃತ್ವದಲ್ಲಿ ಸಭೆ ನಡೆಸುವುದಾಗಿ ಅಧ್ಯಕ್ಷರೇ ಭರವಸೆ ನೀಡಿದ್ದರೂ ಇನ್ನೂ ಸಭೆ ಕರೆಯದಿರುವ ಕುರಿತು ವಿಪಕ್ಷ ಪ್ರಶ್ನಿಸಿದ ಹಾಗೂ ಶೀಘ್ರದಲ್ಲೇ ಸಚಿವರ ಉಪಸ್ಥಿತಿಯಲ್ಲಿ ಸಭೆ ನಡೆಸುವ ಕುರಿತು ಅಧ್ಯಕ್ಷರು ಭರವಸೆ ನೀಡಿದ್ದಾರೆ.

ಸುಳ್ಯ ನಗರ ಪಂಚಾಯತ್ ಸಾಮಾನ್ಯ ಸಭೆಯು ಅಧ್ಯಕ್ಷ ವಿನಯ ಕುಮಾರ್ ಕಂದಡ್ಕರ ಅಧ್ಯಕ್ಷತೆಯಲ್ಲಿ ನಡೆಯಿತು. ಉಪಾಧ್ಯಕ್ಷೆ ಸರೋಜಿನಿ ಪೆಲತಡ್ಕ, ಸ್ಥಾಯಿ ಸಮಿತಿ ಅಧ್ಯಕ್ಷ ಬುದ್ಧ ಜಿ ನಾಯ್ಕ್, ಮುಖ್ಯಾಧಿಕಾರಿ ಎಂ.ಆರ್. ಸ್ವಾಮಿ, ಸದಸ್ಯರುಗಳಾದ ಬಾಲಕೃಷ್ಣ ಭಟ್ ಕೊಡೆಂಕಿರಿ, ಉಮ್ಮರ್ ಕೆ.ಎಸ್., ಬಾಲಕೃಷ್ಣ ರೈ ದುಗಲಡ್ಕ, ಶಿಲ್ಪಾ ಸುದೇವ್, ಶೀಲಾ ಅರುಣ್ ಕುರುಂಜಿ, ಸುಶೀಲ ಜಿನ್ನಪ್ಪ ಪೂಜಾರಿ, ಪೂಜಿತಾ ಕೆ.ಯು., ಸುಧಾಕರ ಕುರುಂಜಿಭಾಗ್, ನಾರಾಯಣ ಶಾಂತಿನಗರ, ಶರೀಫ್ ಕಂಠಿ, ರಿಯಾಜ್ ಕಟ್ಟೆಕಾರ್, ಕಿಶೋರಿ ಶೇಟ್, ಪ್ರವಿತಾ ಪ್ರಶಾಂತ್ ಇದ್ದರು.

ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ವಿಪಕ್ಷ ಸದಸ್ಯ ಉಮ್ಮರ್ ಕೆ.ಎಸ್. ರವರು “ನಗರದಲ್ಲಿ ಕೆಸರು ನೀರು ಸರಬರಾಜಾಗುತ್ತಿದೆ. ಎಲ್ಲ ಕಡೆಯೂ ಈ ಬಗ್ಗೆ ಚರ್ಚೆಗಳಾಗುತ್ತಿವೆ. ಅಲ್ಲಲ್ಲಿ ಜನಜಾಗೃತಿ ಸಭೆಗಳು ನಡೆಯುತ್ತಿದೆ. ಸುಳ್ಯಕ್ಕೆ ಶುದ್ಧ ನೀರು ಸರಬರಾಜು ಕುರಿತು ಸಚಿವರಿದ್ದು ಸಭೆ ನಡೆಸುವುದಾಗಿ ಈ ಹಿಂದಿನ ಸಭೆಯಲ್ಲಿ ಅಧ್ಯಕ್ಷರೆ ನೀವು ಭರವಸೆ ನೀಡಿದ್ದಿರಿ. ಆದರೆ ನೀವು ಸಭೆ ನಡೆಸಿಲ್ಲ. ಕುಡಿಯುವ ನೀರಿನ ವಿಚಾರದಲ್ಲಿ ಯಾಕಿಷ್ಟು ನಿರ್ಲಕ್ಷ್ಯ” ಎಂದು ಪ್ರಶ್ನಿಸಿದರು.

“ಕಳೆದ ಸಭೆಯ ಸಂದರ್ಭ ಶುದ್ಧ ಕುಡಿಯುವ ನೀರಿನ ಕುರಿತು ಚರ್ಚೆ ನಡೆದಾಗ ವಾರದೊಳಗೆ ಸಭೆ ನಡೆಸುವುದಾಗಿ ಹೇಳಲಾಗಿತ್ತು. ಆದರೆ ಸಭೆ ಆಗಿಲ್ಲ” ಎಂದು ಸದಸ್ಯ ಶರೀಫ್ ಕಂಠಿ ಹೇಳಿದರು. ಆಗ ಉತ್ತರಿಸಿದ ಅಧ್ಯಕ್ಷ ವಿನಯ ಕಂದಡ್ಕರು, “ನೀರಿಗೆ ಸಂಬಂಧಿಸಿದ ವಿಚಾರದಲ್ಲಿ ಸಚಿವರ ನೇತೃತ್ವದಲ್ಲಿ ಸಭೆ ನಡೆಸುವ ಕುರಿತು ಅವರಲ್ಲಿ ಕೇಳಿಕೊಂಡಿzವೆ. ಆದರೆ ಆ ಬಳಿಕ ಚುನಾವಣಾ ನೀತಿ ಸಂಹಿತೆ ಬಂದುದರಿಂದ ಸಭೆ ನಡೆಸಲು ಆಗಿಲ್ಲ. ನೀತಿ ಸಂಹಿತೆ ಮುಗಿದ ತಕ್ಷಣ ಅದಿವೇಶನ ಆರಂಭವಾದುದರಿಂದ ಸಾಧ್ಯವಾಗಲಿಲ್ಲ. ನಾವು ಸಚಿವರಿದ್ದು ಸಭೆ ನಡೆಸುತ್ತೇವೆ. ಆ ಸಭೆಗೆ ಸಾರ್ವಜನಿಕರನ್ನೂ ಕರೆದು ಅವರಿಂದ ಅಭಿಪ್ರಾಯ ಸಂಗ್ರಹಿಸೋಣ” ಎಂದು ಹೇಳಿದರು.

“ನಮ್ಮ ವಾರ್ಡಲ್ಲಿ ನೀರಿನ ಸಮಸ್ಯೆ ಇದೆ. ಜನರು ನಮ್ಮಲ್ಲಿ ಪ್ರಶ್ನಿಸುತ್ತಿದ್ದಾರೆ. ಹಿಂದಿನ ಜನಸಂಖ್ಯೆಗನುಗುಣವಾಗಿ ಟ್ಯಾಂಕ್ ಮಾಡಲಾಗಿತ್ತು. ಈಗ ಜನ ಸಂಖ್ಯೆ ಹೆಚ್ಚಾಗಿದೆಯಲ್ಲವೇ. ಅದಕ್ಕೆ ತಕ್ಕುದಾದ ವ್ಯವಸ್ಥೆ ಆಗಬೇಕು” ಎಂದು ಶಿಲ್ಪಾ ಸುದೇವ್ ಹೇಳಿದರಲ್ಲದೆ, “ನೀರು ಬಿಡುವವರು ಕೂಡಾ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಹಳೆ ಪೈಪ್ ಲೈನ್ ಬದಲಿಸುವ ಕೆಲಸ ಆಗಬೇಕು” ಎಂದು ಹೇಳಿದರು. `’ಸುಧಾಮರು ಸರಿಯಾಗಿ ಕೆಲಸ ಮಾಡುವುದಿಲ್ಲ. ಈ ಬಗ್ಗೆ ನನಗೂ ದೂರುಗಳು ಬಂದಿದೆ” ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಬುದ್ಧ ನಾಯ್ಕರು ಹೇಳಿದರು. ಸದಸ್ಯ ಕೆದ್ಕಾನ ಭಾಗದಲ್ಲಿ ನೀರಿನ ಸಮಸ್ಯೆ ಇದೆ ಎಂದು ಸದಸ್ಯ ಬಾಲಕೃಷ್ಣ ಭಟ್ ಹೇಳಿದಾಗ, ಶರೀಫ್ ಕಂಠಿ, ರಿಯಾಜ್ ಕಟ್ಟೆಕಾರ್ ಧ್ವನಿಗೂಡಿಸಿ ಮಾತನಾಡಿದರು. `’ನಗರದಲ್ಲಿ ಆಯ್ದ ಭಾಗದಲ್ಲಿ ಬೋರ್ ವೆಲ್ ಕೊರೆಯುವ ಹಾಗೂ ಇರುವ ಬೋರ್‌ವೆಲ್ ದುರಸ್ಥಿ ಪಡಿಸುವ ಕುರಿತು ಅಧ್ಯಕ್ಷ ವಿನಯ ಕಂದಡ್ಕರು ಮಾಹಿತಿ ನೀಡಿದರು.

ಸುಳ್ಯ ನಗರದಲ್ಲಿ ಒಂದು ವರ್ಷದಿಂದ ಯಾವುದೇ ಕೆಲಸ ಆಗದಿರುವ ಕುರಿತು, ನ.ಪಂ. ನಲ್ಲಿ ಅಧಿಕಾರಿಗಳು ಇಲ್ಲದಿರುವು, ನಿವೇಶನ ನೀಡದಿರುವುದು ಹೀಗೆ ಹಲವು ವಿಚಾರಗಳ ಕುರಿತು ಚರ್ಚೆಗಳು ನಡೆದವು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.