ಶಾಲಾ ವಿದ್ಯಾರ್ಥಿಯ ಮೇಲೆ ಹಲ್ಲೆ ಆರೋಪ

Advt_Headding_Middle
Advt_Headding_Middle

ಆಡಳಿತ ಮಂಡಳಿಯಿಂದ ನಿರಾಕರಣೆ, ಮಾತುಕತೆಯಲ್ಲಿ ಇತ್ಯರ್ಥ


ಗೂನಡ್ಕದ ಶಿಕ್ಷಣ ಸಂಸ್ಥೆಯೊಂದರ ಆಡಳಿತ ಮಂಡಳಿ ಸದಸ್ಯರೊಬ್ಬರು ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದ್ದಾರೆಂದು ಪೊಲೀಸ್ ದೂರು ನೀಡಲಾದ ಹಾಗೂ ಇದು ವಿದ್ಯಾರ್ಥಿಗಳೇ ಹೊಡೆದಾಡಿಕೊಂಡ ಘಟನೆ ಎಂದು ಆಡಳಿತ ಮಂಡಳಿ ಸದಸ್ಯರು ಪೋಷಕರಿಗೆ ಮನವರಿಕೆ ಮಾಡಿದ ಘಟನೆಯೊಂದು ವರದಿಯಾಗಿದೆ.

ಗೂನಡ್ಕದ ಮಾರುತಿ ಪಬ್ಲಿಕ್ ಸ್ಕೂಲ್‌ನ ಆಡಳಿತ ಮಂಡಳಿ ಸದಸ್ಯರಾದ ಕಿಶೋರ್‌ರವರು ವಿದ್ಯಾರ್ಥಿಗೆ ಹಲ್ಲೆ ನಡೆಸಿದ್ದಾರೆಂದು ಕೊಯನಾಡಿನವರಾದ ವಿದ್ಯಾರ್ಥಿಯ ಪೋಷಕರು ಪೊಲೀಸರಿಗೆ ದೂರು ನೀಡಿದರು. ಇದರ ಆಧಾರದಲ್ಲಿ ರಾಜ್ಯದ ವಿವಿಧ ಟಿವಿ ಮಾಧ್ಯಮಗಳಲ್ಲಿ ವರದಿಯು ಪ್ರಸಾರವಾಗತೊಡಗಿತು. ವೈರಲ್ ಕೂಡಾ ಆಯಿತು. ಘಟನೆಯ ಬಗ್ಗೆ ಕಿಶೋರ್‌ಕುಮಾರ್‌ರವರನ್ನು ಸಂಪರ್ಕಿಸಿದಾಗ ಇದು ವಿದ್ಯಾರ್ಥಿಗಳೇ ಹೊಡೆದಾಡಿಕೊಂಡ ಘಟನೆ. ಈ ಘಟನೆ ನೋಡಿ ತಾನು ಹೋಗಿ ವಿದ್ಯಾರ್ಥಿಗೆ ಬೈದಿರುವುದು ನಿಜ. ಇದನ್ನು ನಾನು ಪೋಷಕರಿಗೆ ಮನವರಿಕೆ ಮಾಡಿದ್ದೇನೆ. ಹಾಗಾಗಿ ಘಟನೆ ಮಾತುಕತೆಯಲ್ಲಿ ಇತ್ಯರ್ಥಗೊಂಡಿದೆ ಎಂದು ತಿಳಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.