Breaking News

ಚಂದ್ರಹಾಸ ಕಡಪಾಲ ಕುಸಿದು ಬಿದ್ದು ಮೃತ್ಯು

Advt_Headding_Middle

ಸಂಪಾಜೆ ಗ್ರಾಮದ ಕೂಲಿಶೆಡ್‌ನಲ್ಲಿರುವ ಅಂಗಡಿಯ ಬಳಿ ವ್ಯಕ್ತಿಯೊಬ್ಬರು ಕುಸಿದು ಬಿದ್ದು ಮೃತಪಟ್ಟ ಘಟನೆ ವರದಿಯಾಗಿದೆ. ಚಂದ್ರಹಾಸ ಎಂಬವರು ಮೃತಪಟ್ಟ ವ್ಯಕ್ತಿ.
ಸಂಪಾಜೆ ಗ್ರಾಮದ ಕಲ್ಲುಗುಂಡಿ ಪೇಟೆಯಲ್ಲಿ ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಪೇಟೆಯ ಪರಿಸರದಲ್ಲಿ ವಾಸಿಸುತ್ತಿದ್ದ ಚಂದ್ರಹಾಸ ಎಂಬವರು ಕೂಲಿಶೆಡ್ ಬಳಿ ಸೋಡಾ ಮಹಮ್ಮದ್ ಕುಂಞಿಯವರ ಅಂಗಡಿ ಬಳಿ ಕುಸಿದು ಬಿದ್ದು ಮೃತಪಟ್ಟರು.
ಸಂಪಾಜೆ ಗ್ರಾಮ ಪಂಚಾಯತ್ ನೇತೃತ್ವದಲ್ಲಿ ಅವರ ಸಹೋದರ ರವಿ, ಬಾಬು ದೊಡ್ಡಡ್ಕ, ಗುರುವಪ್ಪ ಕಡೆಪಾಲ, ರಾಜೇಶ್ ವೆಲ್ಡಿಂಗ್ ಶಾಪ್ ಕೂಲಿಶೆಡ್, ಗ್ರಾಮ ಪಂಚಾಯತ್ ಸದಸ್ಯ, ಎಸ್‌ಕೆಎಸ್‌ಎಸ್‌ಎಫ್ ಸಂಘಟನೆಯ ಎಸ್. ಕೆ. ಹನೀಫ್, ತಾಜ್ ಟರ್ಲಿ, ರಿಯಾಜ್ ಎಸ್. ಎ ಕಲ್ಲುಗುಂಡಿ ಮೊದಲಾದವರು ಸಾರ್ವಜನಿಕ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ನೆರವೇರಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ. ಕೆ. ಹಮೀದ್, ಕೆಪಿಸಿಸಿ ಮಾಜಿ ಕಾರ್ಯದರ್ಶಿ ಟಿ. ಎಮ್. ಶಾಹಿದ್, ಬಾಲಚಂದ್ರ ಕೊಡಪಾಲ ದಂಡಕಜೆ, ರಹೀಮ್ ಬೀಜದಕಟ್ಟೆ, ರೋಡಲ್ಪ್ ಕ್ರಾಸ್ತಾ, ರೋಯಲ್ ಕ್ರಾಸ್ತಾ, ಪ್ರಸನ್ನ, ಶಿವ, ಚಂದ್ರ ಕಡಪಾಳ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.