Breaking News

ಅಜ್ಜಾವರ : ಚೈತನ್ಯ ಸೇವಾಶ್ರಮದ ಶ್ರೀ ಯೋಗೇಶ್ವರಾನಂದ ಸರಸ್ವತಿ ಸ್ವಾಮೀಜಿಯವರ 80 ನೇ ಹುಟ್ಟುಹಬ್ಬ ಕಾರ್ಯಕ್ರಮ

Advt_Headding_Middle

 

ಯೋಗೇಶ್ವರಾನಂದ ಸರಸ್ವತಿ ಸ್ಚಾಮೀಜಿ ಓರ್ವ ಶ್ರೇಷ್ಠ ಸ್ವಾಮೀಜಿ : ಡಾ. ಪ್ರಭಾಕರ ಶಿಶಿಲ

ಅಜ್ಜಾವರದ ದೇವರಕಳಿಯ ಚೈತನ್ಯ ಸೇವಾಶ್ರಮದ ಶ್ರೀ ಯೋಗೇಶ್ವರಾನಂದ ಸರಸ್ವತಿ ಓರ್ವ ಶ್ರೇಷ್ಠ ಸ್ವಾಮೀಜಿ ಎಂದು ಸುಳ್ಯ ಎನ್.ಎಂ.ಸಿ.ಯ ನಿವ್ರತ್ತ ಪ್ರಾಂಶುಪಾಲ ಡಾ.ಪ್ರಭಾಕರ ಶಿಶಿಲ ಹೇಳಿದರು.


ಚೈತನ್ಯ ಸೇವಾಶ್ರಮದ ಸ್ವಾಮೀಜಿ ಶ್ರೀ ಯೋಗೇಶ್ಬರಾನಂದ ಸರಸ್ವತಿಯವರ 80 ನೇ ಹುಟ್ಟು ಹಬ್ಬ ಕಾರ್ಯಕ್ರಮ ಆಚರಣೆಯ ಅಂಗವಾಗಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.


ಸ್ಬಾಮೀಜಿಯವರು ವೇದ ಉಪನಿಷತ್ತು ಭಗವದ್ಗೀತೆ ,ಪೂಜಾ ಕಾರ್ಯ ಎಲ್ಲವನ್ನೂ ಬಲ್ಲವರು. ಜನ ಸಾಮಾನ್ಯರಿಗೆ ಅವರು ಲಭ್ಯರಾಗುತ್ತಾರೆ. ಸಮಾಜ ಸೇವೆಯ ಮೂಲಕ ಅವರು ಶ್ರೇಷ್ಠ ಕೆಲಸ ಮಾಡುತ್ತಿದ್ದು , ಇನ್ನಷ್ಟು ಸಮಾಜ ಸೇವೆ ಮಾಡುವುದರ ಮೂಲಕ ನೂರ್ಕಾಲ ಬಾಳಲಿ ಎಂದು ಹಾರೈಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಕೆ.ವಿ.ಜಿ ಆಯುರ್ವೆದಿಕ್ ಕಾಲೇಜಿನ ಪ್ರೋ.ಡಾ| ಹರ್ಷವರ್ಧನ ಮಾತನಾಡಿ, ಸ್ವಾಮೀಜಿಯವರ ಸಮಾಜಮುಖಿ ಕೆಲಸ ಶ್ರೇಷ್ಟವಾಗಿದೆ ಎಂದು ಹೇಳಿ ಮುಂದಿನ ಜೀವನಕ್ಕೆ ಶುಭ ಹಾರೈಸಿದರು.

ಆಶ್ರಮದ ಟ್ರಸ್ಟಿ ಅನಿಲ್ ಬಿ.ವಿ ಯವರು ಸ್ವಾಮೀಜಿಯವರ ಜೀವನ ನಡೆದು ಬಂದ ಹಾದಿಯನ್ನು ವಿವರಿಸಿದರು.
ಈ ಸಂದರ್ಭದಲ್ಲಿ ಆಶ್ರಮದ ಟ್ರಸ್ಡಿ ಪ್ರಣವಿ, ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷ ಶಂಕರ ಪೆರಾಜೆ, ಮೇಘ ಶ್ಯಾಮ್ ಅಡ್ಪಂಗಾಯ, ಪ್ರೊ.ರೇಖಾ ಮೊದಲಾದವರು ಉಪಸ್ಥಿತರಿದ್ದರು.
ಅಹ್ಮದ್ ಝಿಶಾನ್ ಭಜನಾ ಸತ್ಸಂಗ ಕಾರ್ಯಕ್ರಮ ನಡೆಸಿ ಕೊಟ್ಟರು. ತಬಲದಲ್ಲಿ ಬಾಲಕೃಷ್ಣ ಮೇನಾಲ, ವಿಜಯ್ ಹಾರ್ಮೋನಿಯಂನಲ್ಲಿ ಸಹಕರಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.