ದೈಹಿಕ ಶಿಕ್ಷಣ ಶಿಕ್ಷಕ ದಯಾನಂದ ಮುತ್ಲಾಜೆ ನಿವೃತ್ತಿ

Advt_Headding_Middle

 

 

ಗುತ್ತಿಗಾರು ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಇಂದು ಸೇವಾ ನಿವೃತ್ತಿ ಹೊಂದಲಿದ್ದಾರೆ.

ಸುಧೀರ್ಘ 27 ವರ್ಷಗಳ ಸರ್ಕಾರಿ ಸೇವೆಯನ್ನು ಸಲ್ಲಿಸಿದ್ದು ಒಟ್ಟು 36 ವರ್ಷಗಳ ಕಾಲ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ.
1985 ರಲ್ಲಿ ಹರಿಹರ ಪ್ರೌಢ ಶಾಲೆಯಲ್ಲಿ ಅರೆ ಕಾಲಿಕ ನೆಲೆಯಲ್ಲಿ ವೃತ್ತಿ ಆರಂಭಿಸಿ 1992 ರಲ್ಲಿ ಎಲಿಮಲೆ ಪ್ರೌಢಶಾಲೆ ವರ್ಗಾವಣೆಗೊಂಡರು. 1994 ರಲ್ಲಿ ಪುತ್ತೂರಿನ ಮುರ ಹಿ.ಪ್ರಾ ಶಾಲೆಗೆ ಸರ್ಕಾರಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆ ಆರಂಭಿಸಿ 2002 ರಲ್ಲಿ ಗುತ್ತಿಗಾರು ಶಾಲೆಗೆ ವರ್ಗಾವಣೆಗೊಂಡರು. 2021 ರಲ್ಲಿ 6 ತಿಂಗಳುಗಳ ಕಾಲ ಪ್ರಭಾರ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ್ದಾರೆ. ತನ್ನ ವೃತ್ತಿ ಸಂದರ್ಭ ತಾಲೂಕು, ಜಿಲ್ಲಾ, ರಾಜ್ಯ ಮಟ್ಟದ ಹಲವು ಕ್ರೀಡಾಕೂಟಗಳನ್ನು ಆಯೋಜಿಸಿದ್ದಾರೆ. ಎರಡು ವರ್ಷಗಳ ಹಿಂದೆ ಇಲ್ಲಿನ ಇಬ್ಬರು ವಿದ್ಯಾರ್ಥಿಗಳು ರಾಷ್ಟ್ರೀಯ ಕಬಡ್ಡಿ ಪಂದ್ಯಾಟವಾಡಲು ಆಯ್ಕೆಗೊಂಡಿದ್ದರು. ಪ್ರಸ್ತುತ ತ್ರಿಶೂಲಿನಿ ದುರ್ಗಾದೇವಿ ದೇವಸ್ಥಾನ ಮುತ್ಲಾಜೆ ಚಣಿಲ ಇದರ ಆಡಳಿತ ಮಂಡಳಿ ಅಧ್ಯಕ್ಷರಾಗಿ, ಮುತ್ತಪ್ಪೇಶ್ವರ ದೈವಸ್ಥಾನದ ಆಡಳಿತ ಮಂಡಳಿ ಸದಸ್ಯರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಪುತ್ತೂರು ಇದರ ಕಾರ್ಯದರ್ಶಿಯಾಗಿ, ಸುಳ್ಯ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷರಾಗಿ ಕೆಲಸ ನಿರ್ವಹಿಸಿದ್ದಾರೆ. ಇವರ ಪತ್ನಿ ಮಂಜುಳಾ ಮುತ್ಲಾಜೆ ಗುತ್ತಿಗಾರು ಗ್ರಾ.ಪಂ ಸದಸ್ಯೆ ಹಾಗೂ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕಿ. ಮಗ ಶ್ರೇಯಸ್ ಮುತ್ಲಾಜೆ ಸಿವಿಲ್ ಇಂಜಿನಿಯರ್, ಮುತ್ಲಾಜೆ ಕನ್ಸ್ಟ್ರಕ್ಷನ್ ನಡೆಸುತ್ತಿದ್ದಾರೆ. ಮಗಳು ಶ್ವೇತಾ ಸಿ ಎ ಓದುತ್ತಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.