ಬಸ್ಸಿಗೆ ಸೈಡ್ ಕೊಡುವ ಸಂದರ್ಭ ವಿದ್ಯುತ್ ಕಂಬದ ಮೇಲೆ ಲಾರಿ ಪಲ್ಟಿ

Advt_Headding_Middle
Advt_Headding_Middle

 

ಬೈ ಹುಲ್ಲಿಗೆ ವಿದ್ಯುತ್ ಸ್ಪರ್ಶಿಸಿ, ಲಾರಿ ಸಂಪೂರ್ಣ ಭಸ್ಮ

ಲಾರಿಯಲ್ಲಿದ್ದ ಮೂವರು ಅದೃಷ್ಟವಶಾತ್ ಪಾರು

ಸಕಲೇಶಪುರ ಕಡೆಯಿಂದ ಕಾಸರಗೋಡಿನ ಮುಳ್ಳೆರಿಯ ಕಡೆಗೆ ಬೈಹುಲ್ಲು ಹೇರಿಕೊಂಡು ಹೋಗುತ್ತಿದ್ದ ಲಾರಿಗೆ ದೊಡ್ಡತೋಟ ಎಂಬಲ್ಲಿ ಬೆಂಕಿ ತಗುಲಿ ಧಗಧಗನೆ ಉರಿದ ಘಟನೆ ನಿನ್ನೆ ರಾತ್ರಿ ಸುಮಾರು 3 ಗಂಟೆಗೆ ಸಂಭವಿಸಿದೆ.

ಸಕಲೇಶಪುರದಿಂದ ಮುಳ್ಖೇರಿಯಕ್ಕೆ ಬೈಹುಲ್ಲನ್ನು ಸಾಗಿಸುವ ಲಾರಿಯೊಂದು ದೊಡ್ಡತೋಟ ಕಂದಡ್ಕದ ಮಧ್ಯೆ ಕಾಸಿನಗೋಡ್ಲು ತಿರುವು ದಾಟುತ್ತಿದ್ದಂತೆ ಎದುರಿನಿಂದ ಬಸ್ಸಿಗೆ ಸೈಡ್ ಕೊಡುವ ಸಂದರ್ಭದಲ್ಲಿ ಲಾರಿ ರಸ್ತೆ ಬದಿಯಿದ್ದ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಚಾಲಕ ಲಾರಿಯನ್ನು ಬಲಕ್ಕೆ ತಿರುಗಿಸಿದಾಗ ಲಾರಿ ಒಮ್ಮಿಂದೊಮ್ಮೆಲೆ ಪಲ್ಟಿಯಾಗಿ ವಿದ್ಯುತ್ ಕಂಬದ ಮೇಲೆ ಬಿತ್ತೆಂದೂ, ಈ ಸಂದರ್ಭ ವಿದ್ಯುತ್ ತಂತಿ ಬೈ ಹುಲ್ಲಿಗೆ ಸ್ಪರ್ಶಿಸಿ ಬೆಂಕಿ ತಗುಲಿತ್ತೆಂದು ತಿಳಿದು ಬಂದಿದೆ.
ಲಾರಿಯ ಒಳಗೆ ಇದ್ದ ಚಾಲಕ ಸತೀಶ್, ಮ್ಹಾಲಕ ರಾಜೇಶ್ ಹಾಗೂ ಇನ್ನೋರ್ವ ಪುಟ್ಟರಾಜು ಎಂಬವರು ಲಾರಿಯಿಂದ ಹೊರಗೆ ಬಂದು ಯಾವುದೇ ಗಾಯಗಳಿಲ್ಲದೇ ಅದೃಷ್ಟವಶಾತ್ ಪಾರಾದರು.
ಹೈಟೆನ್ಶನ್ ಲೈನ್ ಬೈ ಹುಲ್ಲಿನ ಮೇಲೆ ಬಿದ್ದ ಪರಿಣಾಮ ಬೆಂಕಿ ಆವರಿಸಿಕೊಂಡು ಕ್ಷಣಮಾತ್ರದಲ್ಲಿ ಧಗಧಗನೆ ಉರಿಯಲಾರಂಭಿಸಿತು. ಘಟನೆಯ ಮಾಹಿತಿ ತಿಳಿದ ಅಗ್ನಿಶಾಮಕ ದಳದ ಸುಮಾರು ಮೂರು ವಾಹನಗಳು ಸ್ಥಳಕ್ಕೆ ಬಂದು ಬೆಂಕಿ ನಂದಿಸುವಲ್ಲಿ ಶ್ರಮಿಸಿದ್ದಾರೆ. ಅಷ್ಟೊತ್ತಿಗಾಗಲೇ ಲಾರಿ ಸಂಪೂರ್ಣ ಬೆಂಕಿಯ ಕೆನ್ನಾಲಗೆ ತುತ್ತಾಗಿ ಅವಶೇಷಗಳು ಮಾತ್ರ ಉಳಿದುಕೊಂಡಿದೆ.
ಸುಮಾರು 3ರಿಂದ 5 ಲಕ್ಷ ಸಂಭವಿಸರಬಹುದೆಂದು ಅಂದಾಜಿಸಲಾಗಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.