ಕಂದ್ರಪ್ಪಾಡಿ ಸೌಹಾರ್ದ ಸ್ಪೋರ್ಟ್ಸ್ ಕ್ಲಬ್ ಅಸ್ತಿತ್ವಕ್ಕೆ

Advt_Headding_Middle
Advt_Headding_Middle

ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಟ


ದೇವಚಳ್ಳ ಗ್ರಾಮದ ಕಂದ್ರಪ್ಪಾಡಿಯಲ್ಲಿ ಸಾಮಾಜಿಕ ಕಳಕಳಿಯತ್ತ ಯುವ ಮನಸ್ಸುಗಳ ಚಿತ್ತ ಎಂಬ ಪರಿಕಲ್ಪನೆಯೊಂದಿಗೆ ಹೊಸ ಸಂಘಟನೆ ‘ಸೌಹಾರ್ದ ಸ್ಪೋರ್ಟ್ಸ್ ಕ್ಲಬ್’ ಅಸ್ತಿತ್ವಕ್ಕೆ ಬಂದಿದೆ. ಇದರ ಮೊದಲ ಕಾರ್ಯಕ್ರಮದ ಅಂಗವಾಗಿ ೬ ತಂಡಗಳ ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಟ ಡಿಸೆಂಬರ್ ೧೯ರಂದು ಕಂದ್ರಪ್ಪಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಿತು. ಪಂದ್ಯಾಟದ ಉದ್ಘಾಟನೆಯನ್ನು ಕಾಳಿಕಾ ಪ್ರಸಾದ್ ಮುಂಡೋಡಿ ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ಕಂದ್ರಪ್ಪಾಡಿ ಸ.ಹಿ.ಪ್ರಾ.ಶಾಲಾ ಪ್ರಭಾರ ಮುಖ್ಯೋಪಾಧ್ಯಾಯಿನಿ ಶ್ರೀಮತಿ ವಾಣಿ ಪುರುಷೋತ್ತಮ್, ಬಂಟ್ವಾಳ ಉಳಿಬೈಲ್ ಶಾಲೆಯ ಮುಖ್ಯೋಪಾಧ್ಯಾಯ ಅಕ್ಬರ್ ಅಲಿ ಉಪಸ್ಥಿತರಿದ್ದರು. ೬ ತಂಡಗಳ ಮಧ್ಯೆ ನಡೆದ ಪಂದ್ಯಾಟದಲ್ಲಿ ನವೀನ್ ಕೊಪ್ಪಡ್ಕ ಮಾಲಕತ್ವದ ಎಸ್.ಎಂ.ಸಿ. ಕರಂಗಲ್ಲು ಪ್ರಥಮ ಸ್ಥಾನ, ಮೋಹನ್ ದಾಸ್ ಶಿರಾಜೆ ಮಾಲಕತ್ವದ ಶಿರಾಜೆ ಸ್ಟೈಕರ್ ದ್ವಿತೀಯ, ತೃತೀಯ ಮುಂಡೋಡಿ ವಾರಿಯರ್ಸ್ ಮತ್ತು ಚತುರ್ಥ ನೂಜೇಲು ಹರಿಕೇನ್ಸ್ ತಂಡ ಪಡೆದುಕೊಂಡಿತು. ವೈಯಕ್ತಿಕ ಬಹುಮಾನಗಳಾದ ಫೈನಲ್ ಪಂದ್ಯದ ಪಂದ್ಯಶ್ರೇಷ್ಠ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಸೃಜನ್ ಮುಂಡೋಡಿ, ಉತ್ತಮ ದಾಂಡಿಗನಾಗಿ ನಿಶಿತ್ ಮುಂಡೋಡಿ, ಉತ್ತಮ ಎಸೆತಗಾರ ರುತೇಶ್ ಬಲ್ಕಜೆ, ಉತ್ತಮ ಗೂಟರಕ್ಷಕ ದುರ್ಗೇಶ್ ಪಾರೆಪ್ಪಾಡಿ, ಉತ್ತಮ ಕ್ಷೇತ್ರರಕ್ಷಕ ಪ್ರಶಸ್ತಿಯನ್ನು ಕಾರ್ತಿಕ್ ಚಿದ್ಗಲ್ ಪಡೆದುಕೊಂಡರು.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಭರತ್ ಮುಂಡೋಡಿ, ದೇವಚಳ್ಳ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷ ದಿವಾಕರ್ ಮುಂಡೋಡಿ, ಕಂದ್ರಪ್ಪಾಡಿ ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಚಂದ್ರಶೇಖರ ಕಂದ್ರಪ್ಪಾಡಿ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರಾದ ಜಯರಾಮ್ ಕಡ್ಲಾರ್, ವಾಲ್ತಾಜೆ ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಚಂದ್ರಶೇಖರ ಕಡೋಡಿ, ವೀರಮಾರುತಿ ಸ್ಪೋರ್ಟ್ಸ್ ಕ್ಲಬ್ ನ ಮಾಜಿ ಅಧ್ಯಕ್ಷರಾದ ವಿಜೇಶ್ ಹಿರಿಯಡ್ಕ, ಗೋವರ್ಧನ್ ಬಾಳೆಗುಡ್ಡೆ, ಮಣಿಕಂಠ ಸುಬ್ರಮಣ್ಯ, ಶಶಿಕಾಂತ್ ಮರ್ಕಂಜ, ಸುಹಾಸ್ ಸುಳ್ಳಿ ಉಪಸ್ಥಿತರಿದ್ದರು ಸುಕುಮಾರ್ ಕಂದ್ರಪ್ಪಾಡಿ ಕಾರ್ಯಕ್ರಮ ನಿರೂಪಣೆ ಮಾಡಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.