Breaking News

ಕಳಂಜ ಗ್ರಾ.ಪಂ. ಗ್ರಾಮ ಸಭೆ

Advt_Headding_Middle

 

ಗ್ರಾ.ಪಂ. ವತಿಯಿಂದ ಕಾರ್ಯಕ್ರಮ ನೇರ ಪ್ರಸಾರ

ಕಳಂಜ ಗ್ರಾ.ಪಂ ನ ಗ್ರಾಮ ಸಭೆ ಡಿ.೩೧ ರಂದು ನಡೆಯಿತು. ಅಧ್ಯಕ್ಷತೆಯನ್ನು ಗ್ರಾ.ಪಂ ಅಧ್ಯಕ್ಷ ಪ್ರಶಾಂತ್ ಕುಮಾರ್ ಕಿಲಂಗೋಡಿ ವಹಿಸಿದ್ದರು. ನೋಡೆಲ್ ಅಧಿಕಾರಿಯಾಗಿ ತಾ.ಪಂ ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ ಕಾರ್ಯನಿರ್ವಹಿಸಿದರು. ವೇದಿಕೆಯಲ್ಲಿ ಗ್ರಾ.ಪಂ ಅಧ್ಯಕ್ಷ ಗಣೇಶ್ ರೈ, ಬಾಲಕೃಷ್ಣ ಬೇರಿಕೆ, ಸುದಾ, ಕಮಲಾ, ಪ್ರೇಮಲತಾ, ಪಿಡಿಒ ಶ್ರೀಧರ್ ಕೆ ಉಪಸ್ಥಿತರಿದ್ದರು.

ಕಳಂಜ ಗ್ರಾ.ಪಂ ನ ಯೂಟ್ಯೂಬ್ ಚಾನೆಲ್ ನಲ್ಲಿ ಗ್ರಾಮ ಸಭೆಯನ್ನು ನೇರ ಪ್ರಸಾರ ಮಾಡಲಾಯಿತು. ಗ್ರಾಮ ಸಭೆಯಲ್ಲಿ ಆರೋಗ್ಯ, ಸಾಮಾಜಿಕ ಅರಣ್ಯ, ಪಶು ಇಲಾಖೆ, ಉದ್ಯೋಗ ಖಾತ್ರಿ ಬಗ್ಗೆ ಚರ್ಚೆ ನಡೆಯಿತು.

ಪಶು ಇಲಾಖೆಯಿಂದ ಡಾ.ಮೇಘಶ್ರೀ, ಆರೋಗ್ಯ ಇಲಾಖೆಯಿಂದ ಸಿಸ್ಟರ್ ಬೇಬಿ, ಉದ್ಯೋಗ ಖಾತ್ರಿ ಬಗ್ಗೆ ನಿಶಾ, ಗ್ರಾಮ ಲೆಕ್ಕಾಧಿಕಾರಿ ಶ್ರೀಕಲಾ, ಸಮಾಜ ಕಲ್ಯಾಣ ಇಲಾಖೆಯ ಬಾಲಕೃಷ್ಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿಜಯ, ಸಾಮಾಜಿಕ ಅರಣ್ಯ ಇಲಾಖೆಯ ಮಂಜುಳಾ ಇಲಾಖಾ ಮಾಹಿತಿ ನೀಡಿದರು. ಸತೀಶ್ಚಂದ್ರ, ಮೇದಪ್ಪ ಗೌಡ ತಂಟೆಪ್ಪಾಡಿ, ಭಾಸ್ಕರ ಮಣಿಮಜಲು, ವಿ ಸುಬ್ಬಪಯ್ಯ ವಾರಣಿಸಿ ಮತ್ತಿತರರು ಚರ್ಚೆಯಲ್ಲಿ ಪಾಲ್ಗೊಂಡರು.

ಪಿಡಿಒ ಶ್ರೀಧರ್ ಸ್ವಾಗತಿಸಿ ವರದಿ ವಾಚಿಸಿದರು.
ಪಂಚಾಯತ್ ಸಿಬ್ಬಂದಿಗಳಾದ ತಿರುಮಲೇಶ್ವರ ಮುಂಡುಗಾರು, ಗಿರಿಧರ ಕೆ, ಪುಷ್ಪಾವತಿ ಸಹಕರಿಸಿದರು.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.