Breaking News

ಕನಕಮಜಲು ಆತ್ಮಾರಾಮ ಭಜನಾ ಮಂದಿರದ ವಾರ್ಷಿಕ ಮಹಾಸಭೆ

Advt_Headding_Middle

ಕನಕಮಜಲಿನ ಶ್ರೀ ಆತ್ಮಾರಾಮ ಭಜನಾ ಮಂದಿರದ ವಾರ್ಷಿಕ ಮಹಾಸಭೆಯು ಮಂದಿರದ ಅಧ್ಯಕ್ಷ ಹರೀಶ್ ಮೂರ್ಜೆ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು.
ಕೋವಿಡ್ ಕಾರಣದಿಂದ ಮಹಾಸಭೆ ನಡೆಸದೆ ಇರುವ ಬಗ್ಗೆ ಪ್ರಾಸ್ತಾವಿಕ ಮಾತುಗಳೊಂದಿಗೆ ಮೂರು ವರ್ಷದ ವಾರ್ಷಿಕ ವರದಿಯನ್ನು ಅಧ್ಯಕ್ಷ ಹರೀಶ್ ಮೂರ್ಜೆ ವಾಚಿಸಿದರು.
ಮಂದಿರದ ಮೂರು ವರ್ಷದ ಲೆಕ್ಕ ಪತ್ರವನ್ನು ಕಾರ್ಯದರ್ಶಿ ಚಂದ್ರಶೇಖರ ನೆಡಿಲು ಮಂಡಿಸಿದರು.
ಬಳಿಕ ಮುಂದಿನ ಮೂರು ವರ್ಷಗಳ ಅವಧಿಗೆ ನೂತನ ಸಮಿತಿಗೆ ನಿರ್ದೆಶಕರನ್ನು ಆಯ್ಕೆ ಮಾಡಲಾಯಿತು.


ನೂತನ ಅಧ್ಯಕ್ಷರಾಗಿ ವಸಂತ ಮಳಿ ,ಕಾರ್ಯದರ್ಶಿಯಾಗಿ ಈಶ್ವರ ಕೊರಂಬಡ್ಕ , ಸದಸ್ಯರುಗಳಾಗಿ ಕುಸುಮಾದರ ಬೊಮ್ಮೆಟ್ಟಿ, ಜಗನ್ನಾಥ ಕಾಪಿಲ, ಜಯಪ್ರಸಾದ್ ಕಾರಿಂಜ, ಹರೀಶ್ ಮೂರ್ಜೆ, ರವಿ ಕನ್ನಡ್ಕ, ಅಶೋಕ ಕೊರಂಬಡ್ಕ, ಹೇಮಚಂದ್ರ ಕುತ್ಯಾಳ , ವಿಜಯ ಕುಮಾರ್ ನರಿಯೂರು ಆಯ್ಕೆಯಾದರು.
ಈ ಬಾರಿ 50ನೇ ವರ್ಷದ ಏಕಹಾ ಭಜನಾ ಮಹೋತ್ಸವದ ಬಗ್ಗೆ ಚರ್ಚೆಯನ್ನು ನಡೆಸಲಾಯಿತು. ನೂತನ ಆಡಳಿತ ಮಂಡಳಿಯ ಅಧ್ಯಕ್ಷ ಕಾರ್ಯದರ್ಶಿ ನೇಮಕ ಆದ ಬಳಿಕ ಸಾರ್ವಜನಿಕ ಸಭೆ ಕರೆದು ಉತ್ಸವ ಸಮಿತಿಯನ್ನು‌ ರಚಿಸುವುದೆಂದು ತೀರ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಜಗನ್ನಾಥ ಕಾಪಿಲ , ಕೃಷ್ಣ ಬೆಳ್ಚಪ್ಪಾಡ ಕಾರಿಂಜ, ,ಗೋಪಾಲಕೃಷ್ಣ ವಾರಂಬಳಿತ್ತಾಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಭಿಜ್ಞಾ ಬೊಮ್ಮೆಟಿ ಪ್ರಾರ್ಥಿಸಿ ಚಂದ್ರಶೇಖರ್ ನೆಡಿಲು ವಂದಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.