Breaking News

ದನ ಕಳ್ಳ ಸಾಗಾಟ ಆರೋಪ : ದೋಷಮುಕ್ತ

Advt_Headding_Middle

ದನ ಸಾಗಾಟ ನಡೆಸಿದ ಆರೋಪ ಎದುರಿಸುತ್ತಿದ್ದ ಆರೋಪಿ ಗಳನ್ನು ದೋಷಮುಕ್ತಗೊಳಿಸಿ ನ್ಯಾಯಾಲಯವು ಆದೇಶ ನೀಡಿದೆ.

2016 ರ ಡಿ.27 ರಂದು ಸಂಜೆ ಬೆಳ್ಳಾರೆ ಯಿಂದ 10 ದನ ಮತ್ತು 2 ಕರುಗಳನ್ನು ಆರೋಪಿಗಳಾದ ಅಬ್ದುಲ್ ಖಾದರ್, ಸುಬೀರ್ ಪಿ. ಸಿ ಹಾಗೂ ಮನೀಶ್.ವಿ ರವರುಗಳು ಕದ್ದು ಅವುಗಳನ್ನು ಲಾರಿಯಲ್ಲಿ ಹಾಕಿ ಜೊತೆಗೆ ಲಾರಿಯ ನೋಂದಣಿ ಸಂಖ್ಯೆಯನ್ನು ಬದಲಿಸಿ ಅವುಗಳ ಕೈ ಕಾಲುಗಳನ್ನು ಹಿಂಸಾತ್ಮಕವಾಗಿ ಕಟ್ಟಿ ಹಾಕಿ ಸಾಗಾಟ ಮಾಡಲು ಯತ್ನಿಸಿದ ಆರೋಪದ ಮೇಲೆ ಬೆಳ್ಳಾರೆ ಪೊಲೀಸರು ಪ್ರಕರಣದಾಖಲಿಸಿಕೊಂಡು ಆರೋಪಿಗಳನ್ನು ದಸ್ತಗಿರಿ ಮಾಡಿ ಸುಳ್ಯ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ನಂತರ ಆರೋಪಿಗಳ ವಿರುದ್ಧ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಲಾಗಿತ್ತು. ಬಳಿಕ ಈ ಪ್ರಕರಣವನ್ನು ತನಿಖೆಗೆತ್ತಿಕೊಂಡ ಕಿರಿಯ ಸಿವಿಲ್ ಹಾಗೂ ಜೆ. ಯಮ್. ಎಫ್. ಸಿ ನ್ಯಾಯಾಲಯ ಸುಳ್ಯ ಇದರ ನ್ಯಾಯಾಧೀಶರಾದ ಯಶವಂತ್ ಕುಮಾರ್ ರವರು ಆರೋಪಿಗಳ ವಿರುದ್ದ ಅಭಿಯೋಜನೆಯು ಮಾಡಿರುವ ಆರೋಪವನ್ನು ಸಾಬೀತುಪಡಿಸಲು ಅಭಿಯೋಜನೆ ವಿಫಲವಾಗಿದೆ ಎಂಬ ಕಾರಣವನ್ನು ನೀಡಿ ಆರೋಪಿಗಳನ್ನು 2021 ಡಿ. 30 ರಂದು ದೋಷಮುಕ್ತಗೊಳಿಸಿ ತೀರ್ಪಿತ್ತಿರುತ್ತಾರೆ . ಆರೋಪಿಗಳ ಪರವಾಗಿ ಸುಳ್ಯದ ನ್ಯಾಯವಾದಿ ಗಳಾದ ಯಂ. ವೆಂಕಪ್ಪ ಗೌಡ,ಚಂಪಾ ವಿ. ಗೌಡ, ರಾಜೇಶ್ ಬಿ.ಜಿ., ಶ್ಯಾಮ್ ಪ್ರಸಾದ್ ಹಾಗೂ ಮನೋಜ್ ರವರು ವಕಾಲತ್ತು ವಹಿಸಿದ್ದರು .

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.