ಯೇನೆಕಲ್ಲು ಸಹಕಾರಿ ಸಂಘದ ಮಹಾಸಭೆ

Advt_Headding_Middle
Advt_Headding_Middle

ಯೇನೆಕಲ್ಲು ಪ್ರಾಥಮಿಕ ಕೃಷಿ ಪತ್ತಿನ ಸ.ಸಂಘದ ವಾರ್ಷಿಕ ಮಹಾಸಭೆಯು ಡಿ. 16ರಂದು ಸಂಘದ ಅಧ್ಯಕ್ಷ ಭವಾನಿಶಂಕರ ಪೂಂಬಾಡಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ರತನ್ ಕಲ್ಕುದಿ ವಾರ್ಷಿಕ ವರದಿ ಒಪ್ಪಿಸಿದರು. ವರದಿ ಸಾಲಿನಲ್ಲಿ ಸಂಘವು 945 ಸದಸ್ಯರನ್ನು ಹೊಂದಿದ್ದು, ರೂ. 2,17,66,277/- ಪಾಲು ಬಂಡವಾಳವನ್ನು ಹೊಂದಿದೆ ಎಂದರು.
ಸಭೆಯ ಆರಂಭದಲ್ಲಿ ಹೆಲಿಕಾಪ್ಟರ್ ದುರಂತದಲ್ಲಿ ಮಡಿದ ಸೇನಾಧಿಕಾರಿ ಬಿಪಿನ್ ರಾವತ್ ಮತ್ತು ತಂಡದವರಿಗೆ ಹಾಗೂ ವರದಿ ಸಾಲಿನಲ್ಲಿ ನಿಧನರಾದ ಸಂಘದ ಸದಸ್ಯರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಸಂಘದ ಅಧ್ಯಕ್ಷ ಭವಾನಿಶಂಕರ ಪೂಂಬಾಡಿ ಸ್ವಾಗತಿಸಿ, ಉಪಾಧ್ಯಕ್ಷ ಭರತ್ ನೆಕ್ರಾಜೆ ವಂದಿಸಿದರು. ನಿರ್ದೇಶಕರಾದ ಅಣ್ಣೋಜಿ ಗೌಡ ಕಟ್ಟ, ಕಿರಣ್ ಕುಮಾರ್ ಮಾದನಮನೆ, ಕೇಶವ ಆಚಾರ್ಯ, ಶ್ರೀನಿವಾಸ ಆಚಾರ್ಯ, ವೆಂಕಟ್ರಮಣ ಕೇಂಬ್ರೋಳಿ, ಗಿರೀಶ್ ಪಡ್ನಡ್ಕ, ಯಮುನಾ ಸಂಕಡ್ಕ, ವೇದಾವತಿ ಕೋಟಿಗೌಡನಮನೆ, ರಮೇಶ್ ಬೂದಿಪಳ್ಳ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಸಿಬ್ಬಂದಿಗಳು ಸಹಕರಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.