ಮುಕ್ಕೂರು : ವಿವೇಕಾನಂದ ಜನ್ಮ ದಿನ ಪ್ರಯುಕ್ತ ಯುವ ದಿನಾಚರಣೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಕುಂಡಡ್ಕ- ಮುಕ್ಕೂರು ‌ನೇಸರ ಯುವಕ ಮಂಡಲ ಮತ್ತು ಮುಕ್ಕೂರು ಶಾಲಾಭಿವೃದ್ದಿ ಸಮಿತಿ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದ ಜನ್ಮದಿನದ ಪ್ರಯುಕ್ತ ರಾಷ್ಟ್ರೀಯ ಯುವ ದಿನಾಚರಣೆ ‌ಜ.12 ರಂದು ಮುಕ್ಕೂರು ಶಾಲೆಯಲ್ಲಿ ನಡೆಯಿತು.

ಗ್ರಾ.ಪಂ.ಸದಸ್ಯೆ ಗುಲಾಬಿ ಬೊಮ್ಮೆಮಾರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಸ್ವಚ್ಛ ಪರಿಸರ ನಿರ್ಮಾಣಕ್ಕೆ ವಿದ್ಯಾರ್ಥಿಗಳು ಒತ್ತು ನೀಡಬೇಕು. ಈ ನಿಟ್ಟಿನಲ್ಲಿ ಗ್ರಾ.ಪಂ. ಕೂಡ ಪ್ರೋತ್ಸಾಹ ನೀಡುತ್ತಿದೆ. ವಿವೇಕಾನಂದರ ಜನ್ಮದಿನವು ವಿದ್ಯಾರ್ಥಿಗಳು ಧನಾತ್ಮಕ ಚಿಂತನೆಗೆ ಪ್ರೇರಕವಾಗಲಿ ಎಂದರು.

ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಉಮೇಶ್ ಕೆಎಂಬಿ ಮಾತನಾಡಿ, ವ್ಯಕ್ತಿತ್ವದಿಂದ ಜಗತ್ತಿನಲ್ಲಿ ಹೇಗೆ ಗುರುತಿಸಿಕೊಳ್ಳಬಹುದು ಎನ್ನುವುದಕ್ಕೆ ವಿವೇಕಾನಂದ ಅವರು ನಿದರ್ಶನ. ಬಾಲ್ಯದಿಂದ ಆದರ್ಶಯುತ ಬದುಕು ಕಟ್ಟಿಕೊಂಡ ಅವರು ಆಧ್ಯಾತ್ಮಿಕ ನೆಲೆಯತ್ತ ಗಮನ ಹರಿಸಿ ಸನಾತನ ಧರ್ಮದ ವಿಚಾರಧಾರೆಗಳನ್ನು ಇಡೀ ನಾಡಿಗೆ ಪಸರಿಸಿದರು. ಅವರ ಆದರ್ಶಗಳು ಇಂದಿನ ಸಮಾಜಕ್ಕೆ ಅನುಕರಣೀಯ ಎಂದರು.

ವಿವೇಕಾನಂದರ ಜೀವನ ಆದರ್ಶದ ಬಗ್ಗೆ ಪತ್ರಿಕೋದ್ಯಮ ವಿದ್ಯಾರ್ಥಿನಿ ಬೃಂದಾ ಪಿ.ಮುಕ್ಕೂರು ಉಪನ್ಯಾಸ ನೀಡಿ, ಸ್ವ ನಂಬಿಕೆ,‌ಪರಿಶ್ರಮ ಇದ್ದರೆ ಸಾಧನೆ ತೋರಬಹುದು ಎನ್ನುವುದು ವಿವೇಕಾನಂದರ ಚಿಂತನೆ. ಇದನ್ನು ಎಳವೆಯಿಂದಲೇ ರೂಢಿಸಿಕೊಂಡು ಮುನ್ನೆಡೆದಾಗ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯವಿದೆ ಎಂದರು.

ಸಭಾಧ್ಯಕ್ಷತೆ ವಹಿಸಿದ ಮುಕ್ಕೂರು ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಜಯಂತ ಕೆ ಮಾತನಾಡಿ, ವಿದ್ಯಾರ್ಥಿಗಳು ವಿವೇಕಾನಂದರ ಜೀವನ ಆದರ್ಶಗಳನ್ನು ಅರಿತುಕೊಂಡು ಅದನ್ನು ಪಾಲನೆ ಮಾಡಬೇಕು. ತನ್ಮೂಲಕ ಉತ್ತಮ ವ್ಯಕ್ತಿತ್ವ ರೂಪಿಸಿಕೊಂಡು ಮುನ್ನೆಡೆಯಲು‌ ಸಾಧ್ಯವಿದೆ ಎಂದರು.

ಶಾಲಾ ಹಿತ ಚಿಂತನಾ ಸಮಿತಿ ಕೋಶಾಧಿಕಾರಿ ಹೊನ್ನಪ್ಪ ಗೌಡ ಚಾಮುಂಡಿಮೂಲೆ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ವಿವೇಕಾನಂದರ ಘೋಷ ವಾಕ್ಯ ಮೊಳಗಿಸಿದರು. ಪುಣ್ಯ, ಮನಸ್ವಿ , ಶ್ರದ್ದಾ, ಅಭಿಲಾಷ್ ವಿವೇಕಾನಂದರ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು.

ನೇಸರ ಯುವಕ ಮಂಡಲ ಕಾರ್ಯದರ್ಶಿ ಶಶಿಕುಮಾರ್ ಬಿ.ಎನ್. ಸ್ವಾಗತಿಸಿ, ವಂದಿಸಿದರು. ಸಹಶಿಕ್ಷಕಿ ಲತಾ ನಿರೂಪಿಸಿದರು.

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.