ಕೆ. ವಿ. ಜಿ.ಐ. ಪಿ. ಎಸ್ ನಲ್ಲಿ ಸಂಕ್ರಾಂತಿ ಹಬ್ಬ ಆಚರಣೆ

Advt_Headding_Middle

 

ಸುಳ್ಯದ ಕೆವಿಜಿ ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಯಿತು. ಈ ಕಾರ್ಯಕ್ರಮಕ್ಕೆ ಶಾಲಾ ಆಡಳಿತ ಮಂಡಳಿಯ ಸಂಚಾಲಕರಾದ ರೇಣುಕಾ ಪ್ರಸಾದ್ ರವರು ಶುಭ ಹಾರೈಸಿದರು. ಪ್ರಾಂಶುಪಾಲರಾದ ಅರುಣ್ ಕುಮಾರ್, ಉಪಪ್ರಾಂಶುಪಾಲರಾದ ಶಿಲ್ಪ ಬಿದ್ದಪ್ಪ ಮತ್ತು ಶಿಕ್ಷಕಿಯಾದ ಚಂದ್ರಪ್ರಭಾ ರವರು ಗಿಡ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು .ವಿದ್ಯಾರ್ಥಿ ತಂಡದ ನಾಯಕಿ ಸುದೀಪ್ತ ರವರು ಈ ದಿನದ ಆಚರಣೆಯ ವಿಶೇಷತೆಯ ಬಗ್ಗೆ ತಿಳಿಸಿದರು. ಕಾರ್ಯಕ್ರಮವನ್ನು 2ನೇ ತರಗತಿಯ ಅದ್ವೈವ್ ಪಿ ಮತ್ತು ಮನಸ್ವಿ. ಡಿ ರವರು ನಿರೂಪಿಸಿದರು. 2ನೇ ತರಗತಿಯ ಪುಟಾಣಿಗಳು ಹಾಡು ಮತ್ತು ನೃತ್ಯದ ಮೂಲಕ ಎಲ್ಲರ ಮನರಂಜಿಸಿದರು. ಈ ಕಾರ್ಯಕ್ರಮಕ್ಕೆ ಶಿಕ್ಷಕಿಯಾದ ಚಂದ್ರಪ್ರಭಾ ಮತ್ತು ಮಕ್ಕಳ ಪೋಷಕರು ಸಹಕರಿಸಿದರು.

Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.