ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ಹಾಗೂ ನಗರ ಪಂಚಾಯತ್ ಸದಸ್ಯರುಗಳು ಇಂದು ಮಾಣಿ-ಮೈಸೂರು ಹೆದ್ದಾರಿ ಪೈಚಾರು ಪರಿಸರದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಈ ಸಂದರ್ಭದಲ್ಲಿ ರಸ್ತೆಯ ಎರಡು ಬದಿಗಳಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಹಾಗೂ ಇನ್ನಿತರ ಕಸಗಳನ್ನು ಸ್ವಚ್ಛ ಪಡಿಸಿ ಶ್ರಮದಾನ ನಡೆಸಿದರು.
ಓಡಬಾಯಿ ವಿನು ನಗರದ ಸಮೀಪ ಹರಿಯುತ್ತಿರುವ ಸಣ್ಣ ತೋಡಿನಲ್ಲಿ ರಾಶಿರಾಶಿ ಕಸದ ರಾಶಿಗಳು ಬಿದ್ದಿದ್ದು ಪರಿಸರ ದುರ್ನಾತದಿಂದ ಕೂಡಿತ್ತು. ಇದನ್ನು ಕಂಡ ಅಧ್ಯಕ್ಷರು ಸ್ವತಃ ತಾವೇ ತೋಡಿಗೆ ಇಳಿದು ಕಸದ ರಾಶಿಗಳನ್ನು ಪರಿಶೀಲಿಸಿ, ಇದರಲ್ಲಿ ಕಸ ತಂದು ಸುರಿದವರ ಯಾವುದಾದರೂ ಸುಳಿವು ಸಿಗಬಹುದೆಂದು ಹುಡುಕಾಡಿದಾಗ ಸ್ಥಳೀಯ ನಿವಾಸಿಯೋರ್ವರ ವಿಳಾಸ ಸಿಕ್ಕಿದ್ದು ಪಂಚಾಯತ್ ವತಿಯಿಂದ ಅವರ ಮೇಲೆ ಕ್ರಮ ಕೈಗೊಳ್ಳುವುದಾಗಿ ಅಧ್ಯಕ್ಷರು ಸುದ್ದಿಗೆ ತಿಳಿಸಿದರು.
ನಂತರ ಕಸದ ರಾಶಿಗಳನ್ನು ಅದೇ ಪರಿಸರದಲ್ಲಿ ಸೇರಿಸಿ ದಹಿಸಲಾಯಿತು.
ಪೈಚಾರು ಪೆಟ್ರೋಲ್ ಬಂಕ್ ಮುಂಭಾಗದಿಂದ ಆರಂಭಗೊಂಡ ಸ್ವಚ್ಚತಾ ಕಾರ್ಯ ಮಾಂಡೋವಿ ಶೋರೂಮ್ ಬಳಿ ಮುಕ್ತಾಯಗೊಳಿಸಲಾಯಿತು.
ಈ ಸಂದರ್ಭದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಬುದ್ಧ ನಾಯ್ಕ್, ನಗರ ಪಂಚಾಯತ್ ಉಪಾಧ್ಯಕ್ಷೆ ಸರೋಜಿನಿ ಪೆಲ್ತಡ್ಕ ಸದಸ್ಯರುಗಳಾದ ಶಿಲ್ಪಾ ಸುದೇವ್, ಸುಶೀಲ ಜಿನ್ನಪ್ಪ, ಶಶಿಕಲಾ ನೀರಬಿದ್ರೆ, ಶೀಲಾವತಿ ಕುರುಂಜಿ, ಬಾಲಕೃಷ್ಣರೈ, ನಾರಾಯಣ ಶಾಂತಿನಗರ, ಸ್ಥಳೀಯರಾದ ದಾಮೋದರ ಮಂಚಿ, ಮಲ್ಲೇಶ್ ಬೆಟ್ಟಂಪಾಡಿ, ನಾರಾಯಣ ಶಾಂತಿನಗರ, ಜಿನ್ನಪ್ಪ ಪೂಜಾರಿ, ಜಿನ್ನಪ್ಪ ಗೌಡ, ಅರುಣ್ ರಾವ್ ಸಿಂದ್ಯಾ ಮೊದಲಾದವರು ಭಾಗವಹಿಸಿದ್ದರು.