ಯುವಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಮಂಗಳೂರು, ತಾಲ್ಲೂಕು ಯುವಜನ ಸಂಯುಕ್ತ ಮಂಡಳಿ ಸುಳ್ಯ, ಆದರ್ಶ ಯೂತ್ ಕ್ಲಬ್ ಹಾಲೆಮಜಲು ನಾಲ್ಕೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಜ. 18ರಂದು ಹಾಲೆಮಜಲು ಶ್ರೀವೆಂಕಟೇಶ್ವರ ಸಭಾಭವನದಲ್ಲಿ ಯುವ ಮಂಡಲ ಅಭಿವೃದ್ಧಿ ಕಾರ್ಯಾಗಾರ ನಡೆಯಲಿರುವುದು.
ಆದರ್ಶ ಯೂತ್ ಕ್ಲಬ್ ಅಧ್ಯಕ್ಷ ದಿನೇಶ್ ಹಾಲೆಮಜಲು ಅಧ್ಯಕ್ಷತೆ ವಹಿಸಲಿರುವರು. ಗುತ್ತಿಗಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ರೇವತಿ ಆಚಳ್ಳಿ ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು. ಪುತ್ತೂರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಮೇಲ್ವಿಚಾರಕ ಶ್ರೀಕಾಂತ ಪೂಜಾರಿ ಬಿರಾವು ಸಂಪನ್ಮೂಲ ವ್ಯಕ್ತಿಗಳಾಗಿ ಉಪಸ್ಥಿತರಿರುವರು. ಮಂಗಳೂರು ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ರಘುವೀರ್ ಸೂಟರ್ ಪೇಟೆ, ಸುಳ್ಯ ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ದಯಾನಂದ ಕೇರ್ಪಳ, ನಿರ್ದೇಶಕ ಸತೀಶ್ ಮೂಕಮಲೆ ಗೌರವ ಉಪಸ್ಥಿತರಿರುವರು ಎಂದು ಕಾರ್ಯಕ್ರಮದ ಸಂಘಟಕರು ತಿಳಿಸಿದ್ದಾರೆ.